For Quick Alerts
  ALLOW NOTIFICATIONS  
  For Daily Alerts

  ವಿಮಾನದಲ್ಲಿ ವಿದ್ಯಾಗೆ ಕೋಪ; ಹುಡುಗ ಕಕ್ಕಾಬಿಕ್ಕಿ

  |

  ಸದ್ಯ ಬಾಲಿವುಡ್ ರಾಣಿಯಾಗಿ ಮೆರೆಯುತ್ತಿರುವ ನಟಿ ವಿದ್ಯಾ ಬಾಲನ್, ಸಿದ್ಧಾರ್ಥ್ ರಾಯ್ ಕಪೂರ್ (CEO of UTV Motion Pictures) ಜೊತೆ ಗೋವಾಗೆ ಬಂದಿದ್ದಾರೆ. ಅದು ವಿಶೇಷವೇನೂ ಅಲ್ಲ ಬಡಿ, ಅವರಿಬ್ಬರು ಎಲ್ಲೆಲ್ಲೋ ಓಡಾಡಿದ್ದಾರೆ. ಗೋವಾಗೆ ಬರಬಾರದೆಂದೂ ನಿಯಮವೇನಾದರೂ ಇದೆಯೇ? ಆದರೆ ಅವರು ಬಂದಿದ್ದು ಎಕಾನಮಿ ಕ್ಲಾಸ್ (Economy Class) ನಲ್ಲಿ.

  ನಿಜವಾಗಿಯೂ ಇದು ವಿಶೇಷ ಸುದ್ದಿಯೇ. ಅಷ್ಟೇ ಅಲ್ಲ, ಮುಂದಕ್ಕೆ ಓದಿ...ಅವರು ಪ್ಲೇನಿನಲ್ಲಿ ಎಕಾನಮಿ ಕ್ಲಾಸ್ ಗೆ ಬರುತ್ತಿದ್ದಂತೆ ಅಲ್ಲಿದ್ದವರೆಲ್ಲ ಬೆರಗುಗೊಂಡು ವಿದ್ಯಾರ ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಸಾಕಷ್ಟು ಸಮಯ ಸುಮ್ಮನಿದ್ದ ವಿದ್ಯಾ ಕೊನೆಗೊಮ್ಮೆ ತಾಳ್ಮೆ ಕಳೆದುಕೊಂಡು ಫೋಟೋ ತೆಗೆಯಬೇಡಿ ಎಂದು ಮನವಿ ಮಾಡಿಕೊಂಡರು. ಒಬ್ಬನನ್ನುಳಿದು ಎಲ್ಲರೂ ವಿದ್ಯಾ ಮಾತಿಗೆ ಬೆಲೆಕೊಟ್ಟು ಸುಮ್ಮನಾದರು.

  ಆದರೆ ಅಲ್ಲೊಬ್ಬನಿದ್ದ, ವಿದ್ಯಾ ಬಾಲನ್ ರ ಮಹಾ ಅಭಿಮಾನಿ. ಆತ ವಿದ್ಯಾ ಪೋಟೋ ತೆಗೆಯುವುದನ್ನು ಹಾಗೇ ಮುಂದುವರಿಸಿದ. ವಿದ್ಯಾ ಕೋಪದಿಂದ ಆತನಿಗೆ ನಿಲ್ಲಿಸಲು ಹೇಳಿದ ಮೇಲೆ ಆತ ಕಕ್ಕಾಬಿಕ್ಕಿ. ಆತ ಅದೆಷ್ಟು ಹೆದರಿದ್ದನೆಂದರೆ ತೆಗೆದಿದ್ದ ಎಲ್ಲಾ ಫೋಟೋವನ್ನು ಡಿಲೀಟ್ ಮಾಡಿ ಖಾಲಿ ಕ್ಯಾಮೆರಾವನ್ನು ವಿದ್ಯಾ ಮುಂದೆ ಹಿಡಿದ. ನಂತರ ವಿದ್ಯಾ ಗಪ್ ಚಿಪ್!

  ಆದರೆ ಪ್ರೈವಸಿ ಬೇಕಿದ್ದ ಮೇಲೆ ವಿದ್ಯಾ ಬಾಲನ್ ಹಾಗೂ ಸಿದ್ಧಾರ್ಥ್ ಜೋಡಿ, ಎಕಾನಮಿ ಕ್ಲಾಸಿನಲ್ಲಿ ಪ್ರಯಾಣಿಸಿದ್ದಾದರೂ ಯಾಕೆ ಎಂದು ಯಾರೂ ಕೇಳಲಿಲ್ಲ. ಅವರೂ ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆಗಳು ಎಂಬುದನ್ನು ಅಲ್ಲಿದ್ದವರು ಅರ್ಥಮಾಡಿಕೊಂಡರು ಎನಿಸುತ್ತದೆ. ಆದರೆ ಆತನೊಬ್ಬನ ಕಣ್ಣು ಮಾತ್ರ ಆ ಪ್ರಶ್ನೆ ಕೇಳುತ್ತಿತ್ತೇನೋ ಎಂಬ ಗುಮಾನಿ ಎಲ್ಲರಿಗೂ ಇತ್ತು, ನೀವೇನಂತೀರಾ? (ಏಜೆನ್ಸೀಸ್)

  English summary
  Vidya Balan along with her boyfriend Siddharth Roy Kapoor (the CEO of UTV Motion Pictures), chose to travel in the economy class to reach Goa.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X