Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಧೂಮ್3 ಚಿತ್ರದಲ್ಲಿ ಖಳನಾಗಿ ಅಮೀರ್ ಖಾನ್
ಜಾನ್ ಅಬ್ರಹಾಂ, ಹೃತಿಕ್ ರೋಷನ್ ನಂತರ ಬಾಲಿವುಡ್ ನ ಸ್ಫುರದ್ರೂಪಿ ನಟ ಅಮೀರ್ ಖಾನ್ ಖಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮೀರ್ ಖಾನ್ ರನ್ನು ಠಪೋರಿ ರೋಲ್ ನಲ್ಲಿ ನೋಡಿ ಮೆಚ್ಚಿದ್ದ ಅಭಿಮಾನಿಗಳು ಈಗ ಪೂರ್ಣ ಪ್ರಮಾಣದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಲು ಕಾತುರದಿಂದಿದ್ದಾರೆ. ಆದರೆ, ಕಳ್ಳರ ಕಳ್ಳನ ಪಾತ್ರಧಾರಿಯಾಗಿ ಅಮೀರ್ ಅವರನ್ನು ಕಾಣಲು 2012 ರ ಕ್ರಿಸ್ಮಸ್ ವರೆಗೂ ಕಾಯಲೇಬೇಕು. ವಷಾಂತ್ಯಕ್ಕೆ ಧೂಮ್ 3 ಚಿತ್ರದ ಶೂಟಿಂಗ್ ಆರಂಭವಾಗಿ 2012ರ ಡಿಸೆಂಬರ್ ವೇಳೆಗೆ ತೆರೆಗೆ ತರಲು ಸಿದ್ಧತೆ ನಡೆದಿದೆ.
ಯಶ್ ರಾಜ್ ಬ್ಯಾನರ್ ನಲ್ಲಿ ನಟಿಸುವುದೇ ಒಂದು ಆನಂದ ಎಂದಿರುವ ಅಮೀರ್, ನಾಯಕ, ಖಳನಾಯಕ ಎಂಬುದಿಲ್ಲ. ಧೂಮ್ ಚಿತ್ರ ಸರಣಿ ನೋಡಿದರೆ, ಅಲ್ಲಿ ನಾಯಕನಿಗೆ ಸಿಗುವಷ್ಟೇ ಪ್ರಾಮುಖ್ಯತೆ ವಿಲನ್ ಗೂ ಸಿಗುತ್ತದೆ.
ಕುತೂಹಲಕಾರಿ ಸಾಹಸಭರಿತ ಧೂಮ್ ಚಿತ್ರದ ಪ್ರಮುಖ ತಾರಾಗಣದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಉದಯ್ ಛೋಪ್ರಾ ಮತ್ತೆ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲೆರಡು ಚಿತ್ರಕ್ಕಿಂತ ಈ ಚಿತ್ರ ವಿಭಿನ್ನವಾಗಿರುವುದಂತೂ ಖಂಡಿತ ಎಂದು ಅಮೀರ್ ಸ್ಕ್ರಿಪ್ಟ್ ಬಗ್ಗೆ ಮೆಚ್ಚುಗೆ ಸೂಸಿದ್ದಾರೆ. ಆದರೆ, ಕಥೆಯ ಎಳೆಯನ್ನು ಹೊರಬಿಟ್ಟಿಲ್ಲ.
ಸಂಜಯ್ ಗಧ್ವಿ ಬದಲು ಚಿತ್ರಕಥೆಗಾರ ವಿಕ್ರಮ ಆಚಾರ್ಯ( ವಿಕ್ಟರ್) ಅವರು ಧೂಮ್ 3 ನಿರ್ದೇಶನ ಮಾಡಲಿದ್ದಾರೆ. ಧೂಮ್ ಅವತರಣಿಕೆಗಳಲ್ಲಿ ಬ್ಯಾಡ್ ಬಾಯ್ ಗಳಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದ ಹೃತಿಕ್ ಹಾಗೂ ಜಾನ್ ರಂತೆ ಅಮೀರ್ ಕೂಡಾ ಜನಮೆಚ್ಚುಗೆ ಗಳಿಸುತ್ತಾರೆ ಎಂದು ನಿರ್ದೇಶಕ ವಿಕ್ರಮ್ ಭರವಸೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ರಿಂದ ಹಿಡಿದು ಸಂಜಯ್ ದತ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಅಜಯ್ ದೇವಗನ್, ಅರ್ಜುನ್ ರಾಮ್ ಪಾಲ್ ಅಭಿಷೇಕ್ ಬಚ್ಚನ್ ವರೆಗೆ ಎಲ್ಲರೂ ನೆಗಟಿವ್ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ಅಮೀರ್ ಈ ಸಾಲಿಗೆ ಹೊಸ ಸೇರ್ಪಡೆ ಅಷ್ಟೆ.