»   » ನಾಗಿಣಿಯಾಗಿ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್

ನಾಗಿಣಿಯಾಗಿ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್

Subscribe to Filmibeat Kannada

ಬಾಲಿವುಡ್ ನ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ 'ಹಿಸ್' ಚಿತ್ರದಲ್ಲಿ ವಿಷಕನ್ಯೆಯಗಿ ಅವತರಿಸಲಿದ್ದಾರೆ. ಬುಸ್ ಬುಸ್ ನಾಗಮ್ಮನಾಗಿ ಅವರು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಾರೋ ಅಥವಾ ಕಚಗುಳಿ ಇಡುತ್ತಾರೋ ಗೊತ್ತಿಲ್ಲ. ಮಲ್ಲಿಕಾಗೆ ಈ ರೀತಿಯ ಪಾತ್ರ ದಕ್ಕುತ್ತಿರುವುದು ಇದೇ ಮೊದಲು. ಬಾಲಿವುಡ್-ಹಾಲಿವುಡ್ ಸಹ ನಿರ್ಮಾಣದಲ್ಲಿ 'ಹಿಸ್' (ಬುಸ್ ಬುಸ್) ಚಿತ್ರ ಹೊರಬರುತ್ತಿದೆ. ಖ್ಯಾತ ಹಾಲಿವುಡ್ ನಿರ್ದೇಶಕಿ ಜೆನ್ನಿಫರ್ ಲಿಂಚ್ 'ಹಿಸ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಪ್ರಧಾನ ಪಾತ್ರಧಾರಿ ಇರ್ಫಾನ್ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ನಾಗಿಣಿಯಾಗಿ ಮಲ್ಲಿಕಾ ಶೆರವಾತ್ ನಟಿಸಿದ್ದಾರೆ. ಗೋವಿಂದ ಮೆನನ್ ಹಾಗೂ ವಿಕ್ರಂ ಸಿಂಗ್ 'ಹಿಸ್' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಸಿ ಬಿಸಿ ಸೆಕ್ಸ್ ಪಾತ್ರಗಳಲ್ಲಿ ಪ್ರೇಕ್ಷಕರ ನಿದ್ದೆಗೆಡಿಸುತ್ತಿದ್ದ ಮಲ್ಲಿಕಾ ಈಗ ನಾಗಿಣಿಯಾಗಿ ಹೆಡೆ ಬಿಚ್ಚಿದ್ದಾರೆ. ಈ ವಿಷಕನ್ಯೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೊ ಗೊತ್ತಿಲ್ಲ.

ಈ ಚಿತ್ರಕ್ಕಾಗಿ ಹಾವಿನ ಚರ್ಮವನ್ನು ಹೋಲುವ ಮೈಗೆ ಅಂಟಿಕೊಳ್ಳುವಂತಹ ವಿಶೇಷ ವಿನ್ಯಾಸದ ವಸ್ತ್ರವನ್ನು ರೂಪಿಸಲಾಗಿದೆ. ಕಣ್ಣುಗಳಲ್ಲಿ ಶೆರಾಬು ತುಂಬಿಕೊಂಡಂತಿದ್ದ ಮಲ್ಲಿಕಾ ನಯನಗಳು ಈಗ ವಿಷ ಕಾರುವ ಸರ್ಪಗಣ್ಣುಗಳಾಗಿ ಬದಲಾಗಿವೆ. ಇದಕ್ಕಾಗಿ ಮಲ್ಲಿಕಾ ವಿಶೇಷ ವಿನ್ಯಾಸದ ಸಂಪರ್ಕ ಮಸೂರಗಳನ್ನು ಬಳಸುತ್ತಿದ್ದಾರೆ. ಸರ್ಪ ಕನ್ಯೆಗೆ ಮೇಕಪ್ ಮಾಡಲು ಇಬ್ಬರು ಮೇಕಪ್ ಕಲಾವಿದರನ್ನು ನೇಮಿಸಲಾಗಿದೆ.

ಈಗಾಗಲೇ ಬಾಲಿವುಡ್ ನಲ್ಲಿ ಈ ರೀತಿಯ ಹಲವಾರು ಚಿತ್ರಗಳು ಬಂದಿವೆ. ನಾಗಿನ್, ನಗಿನಾ, ಜಾನೆ ದುಶ್ಮನ್ ನಂತಹ ಚಿತ್ರಗಳಲ್ಲಿ ಹಲವಾರು ನಟಿಯರು ಹಾವಾಗಿ ಕಾಡಿದ್ದುಂಟು. ಮುಖ್ಯವಾಗಿ ರೇಖಾ, ಶ್ರೀದೇವಿ ವಿಷಕನ್ಯೆಯರಾಗಿ ಪ್ರೇಕ್ಷಕರ ಎದೆ ನಡುಗಿಸಿದ್ದರು. ಕಾಲಸರಿದಂತೆ ಈ ನಾಗಿಣಿಯರು ಮೂಲೆಗೆ ಸರಿದರು. ಈಗ ಮತ್ತೆ ಶರಾಬು ಕನ್ಯೆ ಮಲ್ಲಿಕಾ ವಿಷಕನ್ಯೆಯಾಗಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಲಿದ್ದಾರೆ.

ಎಪ್ಪತ್ತು, ಎಂಬತ್ತರ ದಶಕದಲ್ಲಿ ಬಂದ ನಾಗಿಣಿ ಚಿತ್ರಗಳು ಬಾಕ್ಸಾಫೀಸಲ್ಲಿ ದುಡ್ಡಿನ ಹೊಳೆಯನ್ನೇ ಹರಿಸಿದ್ದವು. ನಾಗಿಣಿ ಚಿತ್ರಗಳು ಬಿಡುಗಡೆಯಾದ ಹೊಸದರಲ್ಲಿ ಹಾವುಗಳ ಬಗ್ಗೆ ಚಿತ್ರವಿಚಿತ್ರ ಕಥೆಗಳು ಜನರ ಬಾಯಲ್ಲಿ ಹರಿದಾಡಿದ್ದುಂಟು. ಇನ್ನು ನಾಗಿಣಿಯ ಪುಂಗಿ ಸಂಗೀತ ಕೇಳಿದರಂತೂ ಕಾಲ ಬಳಿ ಹಾವು ಸುಳಿದಾಡಿದಂತಾಗುತ್ತಿತ್ತು. ಆದರೆ ಈಗ ಬರುತ್ತಿರುವ ನಾಗಿಣಿ ಪ್ರೇಕ್ಷಕರನ್ನು ಹೇಗೆ ರಂಜಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada