For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ-ಅಭಿಷೇಕ್ ಮಗಳಿಗೆ ಕೊನೆಗೂ ಸಿಕ್ತು ಹೆಸರು!

  |

  ಕಳೆದ ವರ್ಷ ನವೆಂಬರ್ 16ರಂದು ಜನಿಸಿದ ಐಶ್ವರ್ಯ ರೈ ಮಗಳು ಇನ್ನೂ ಒಂದು ಹೆಸರು ಕಾಣಲಾಗದ ಮಗುವಾಗಿಯೇ ಇತ್ತು. ಆದರೆ ಸದ್ಯದಲ್ಲೇ ಹೆಸರು ಸಿಗಲಿದ್ದು ನಂತರ ಹೆಸರಿನ ಮೂಲಕ ಜಗತ್ತಿಗೆ ಪರಿಚಯವಾಗಲಿದೆ. ಐಶೂ ಮಗುವಿನ ಹೆಸರಿನ ಪ್ರಾರಂಭಿಕ ಅಕ್ಷರಗಳು ಪಕ್ಕಾ ಆಗಿದ್ದು ಅವು 'AA' ಯಿಂದ ಪ್ರಾರಂಭವಾಗಲಿವೆ.

  ಅಭಿಷೇಕ್ ಬಚ್ಚನ್ ಆತ್ಮೀಯ ಮಿತ್ರರೊಬ್ಬರು ಜನಪ್ರಿಯ ವೆಬ್ ಸೈಟ್ ಒಂದಕ್ಕೆ ಮಾಹಿತಿ ನೀಡಿದ್ದು "ಜಗತ್ತಿನಾದ್ಯಂತ ಹಾಗೂ ಕುಟುಂಬದ ಆಪ್ತಮಿತ್ರರು ಸಲಹೆ ನೀಡಿದ್ದ ಹೆಸರುಗಳಲ್ಲಿ ಮೂರು ಹೆಸರುಗಳನ್ನು ಲಿಸ್ಟ್ ಮಾಡಿದ್ದು ಅವೆಲ್ಲಾ 'AA' ಅಕ್ಷರಗಳಿಂದ ಪ್ರಾರಂಭವಾಗಿದೆ. ಕೊನೆಗೂ ಎರಡು 'ಎ' ಯಿಂದ ಪ್ರಾರಂಭವಾಗುವ ಹೆಸರೆಂಬುದು ನಿರ್ಧಾರವಾದಂತಾಗಿದೆ" ಎಂದಿದ್ದಾರೆ.

  ರೂಢಿಗತವಾದ ಹೆಸರುಗಳ ಪಟ್ಟಿಯಲ್ಲಿ ಇಡೀ ಕುಟುಂಬವರ್ಗ ಸೇರಿ ಹರಸಾಹಸಪಟ್ಟು ಮೂರು ಹೆಸರುಗಳನ್ನು ಫೈನಲ್ ಮಾಡಿಯಾಗಿದೆ. ಸದ್ಯದಲ್ಲಿಯೇ ಒಂದು ಹೆಸರು ಇಡಲಿದ್ದು ನಂತರ ಐಶೂ ಮಗುವಿನ ಹೆಸರಿಡುವ ಪ್ರಕ್ರಿಯೆಗೆ ಪೂರ್ಣವಿರಾಮ ಬೀಳಲಿದೆ. ಒಟ್ಟಿನಲ್ಲಿ ಡಬಲ್ 'ಎ' ಯಿಂದ ಪ್ರಾರಂಭವಾಗುವ ಹೆಸರು ಯಾವುದಿರಬಹುದೆಂಬ ಕುತೂಹಲ ಇನ್ನೂ ಉಳಿಯುವಂತಾಗಿದೆ. (ಏಜೆನ್ಸೀಸ್)

  English summary
  Aishwarya Rai and Abhishek Bachchans daughter has finally got a name. Their daughters name reportedly starts with a double AA and is short and sweet.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X