»   » ದಕ್ಷಿಣದ ಅಡುಗೆ ರುಚಿ ನೋಡಿದ ಗರ್ಭಿಣಿ ಕಾಜೋಲ್

ದಕ್ಷಿಣದ ಅಡುಗೆ ರುಚಿ ನೋಡಿದ ಗರ್ಭಿಣಿ ಕಾಜೋಲ್

Posted By:
Subscribe to Filmibeat Kannada

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ತಾರೆ ಕಾಜೋಲ್ ಈಗ ಗರ್ಭಿಣಿ. ಗರ್ಭವತಿಯಾದರೂ ಆಹಾರದ ವಿಚಾರದಲ್ಲಿ ಕಟ್ಟುನಿಟ್ಟು ಎಂದೇನು ಇಲ್ಲ. ಚಿತ್ರೀಕರಣಗಳಿಗೂ ಅಷ್ಟೆ ಕಾಜೋಲ್ ತಪ್ಪದೆ ಹಾಜರಾಗುತ್ತಿದ್ದಾರೆ. ತನಗೆ ಇಷ್ಟ ಬಂದ ತಿಂಡಿ ತೀರ್ಥಗಳನ್ನು ತಿಂದು ಖುಷಿಯಾಗಿದ್ದಾರೆ.

ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಅಡುಗೆಗಳೆಂದರೆ ಕಾಜೋಲ್ ಗೆ ನಾಲಿಗೆ ನೀರಾಗುತ್ತಂತೆ. ಇದಕ್ಕಾಗಿ ಆಕೆ ದಕ್ಷಿಣದ ಖ್ಯಾತ ಬಾಣಸಿಗ ಮುತ್ತುಸ್ವಾಮಿ ಅವರನ್ನು ಮನೆಗೆ ಕರೆಸಿ ದಕ್ಷಿಣದ ಅಡುಗೆಗಳನ್ನು ಮಾಡಿಸಿಕೊಂಡು ಗಡದ್ದಾಗಿ ಭೋಜನ ಮಾಡಿದ್ದಾರೆ. ವಿವಿಧ ಸಭೆ ಸಮಾರಂಭ ಹಾಗೂ ಕಾರ್ಯಕ್ರಮಗಳಿಗೆ ಮುತ್ತುಸ್ವಾಮಿ ದಕ್ಷಿಣ ಭಾರತದ ಅಡುಗೆಗಳನ್ನು ಮಾಡಿಕೊಡುತ್ತಾರೆ.

ಇವರ ನಳಪಾಕವನ್ನು ಸವಿಯಬೇಕಾದರೆ ಮುಂಗಡವಾಗಿ ಇವರಿಗೆ ತಿಳಿಸಬೇಕು. ಇಲ್ಲದಿದ್ದರೆ ಆಸಾಮಿ ಸಿಗುವುದು ದುರ್ಲಭ. ಈ ಬಾಣಸಿಗನನ್ನು ತಮ್ಮ ಮನೆಗೆ ಕರೆಸಿ ಕಾಜೋಲ್ ದಕ್ಷಿಣ ಭಾರತದ ವಿವಿಧ ಖಾದ್ಯಗಳನ್ನು ಮಾಡಿಸಿಕೊಂಡು ಸಣ್ಣ ಸಮಾರಂಭವನ್ನೇ ಏರ್ಪಡಿಸಿದ್ದರು.

ಈ ಸಣ್ಣ ಕಾರ್ಯಕ್ರಮಕ್ಕೆ ತನ್ನ ಸ್ನೇಹಿತೆಯರನ್ನು ಕಾಜೋಲ್ ಆಹ್ವಾನಿಸಿದ್ದರಂತೆ. ಅವರೆಲ್ಲಾ ಹೊಟ್ಟೆ ತುಂಬ ಉಂಡು ಅಡುಗೆಯ ರುಚಿಯನ್ನುಬಾಯ್ತುಂಬ ಹೊಗಳಿದ್ದಾರಂತೆ. ಅಂದಹಾಗೆ ಈ ವರ್ಷಾಂತ್ಯಕ್ಕೆ ಕಾಜೋಲ್ ತನ್ನ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಕಾಜೋಲ್ ಹಾಗೂ ಅಜಯ್ ಹೆಣ್ಣು ಮಗುವನ್ನು ಬಯಸಿದ್ದಾರೆ ಎನ್ನುತ್ತವೆ ಮೂಲಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada