For Quick Alerts
  ALLOW NOTIFICATIONS  
  For Daily Alerts

  ದೀಪಿಕಾ, ಕತ್ರಿನಾ; ಶಾರುಖ್ ಪ್ರೇಯಸಿ ಪಟ್ಟ ಯಾರಿಗೆ?

  |

  ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಪ್ ಅದೆಷ್ಟು ಬಿಜಿಯಾಗಿದ್ದಾರೆಂದರೆ ಅವರಿಗೆ ತಮ್ಮ ಹಳೆಯ ಆಪ್ತ ಸ್ನೇಹಿತ ರಣಬೀರ್ ಕಪೂರ್ ರನ್ನು ನೆನಪಿಸಿಕೊಳ್ಳಲೂ ಸಮಯವಿಲ್ಲ. ಈ ಇಬ್ಬರೂ ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ರಣಬೀರ್ ಕಪೂರ್ ಮರೆತ ಮೇಲೆ, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಸಿನಿಮಾಗೆ ಆಯ್ಕೆ ಸ್ಪರ್ಧೆಯಲ್ಲಿ ಅವರೀಗ ಪ್ರತಿಸ್ಪರ್ಧಿಗಳಾಗಿದ್ದಾರೆ.

  ರೋಹಿತ್ ಶೆಟ್ಟಿಯ ಬರಲಿರುವ ಚಿತ್ರ 'ಚೆನ್ನೈ ಎಕ್ಸ್ ಪ್ರೆಸ್'ಗೆ ನಾಯಕಿಯಾಗಿ ಕತ್ರಿನಾರನ್ನು ಆಯ್ಕೆ ಮಾಡಲು ಶಾರುಖ್ ಬಹಳಷ್ಟು ಉತ್ಸುಕತೆ ತೋರಿಸುತ್ತಿದ್ದಾರಂತೆ. ಆದರೆ ನಿರ್ದೇಶಕ ರೋಹಿತ್ ಶೆಟ್ಟಿಯ ಫೇವರೆಟ್ ಆಗಿದ್ದಾರಂತೆ ದೀಪಿಕಾ. ಧೂಮ್ 3 ಚಿತ್ರೀಕರಣ ಹಾಗು ಏಕ್ ಥಾ ಟೈಗರ್ ಚಿತ್ರದ ಪ್ರಚಾರಕಾರ್ಯಗಳಲ್ಲಿ ಬಿಜಿಯಾಗಿರುವ ಕತ್ರಿನಾ ಚೆನ್ನೈ ಎಕ್ಸ್ ಪ್ರೆಸ್ ಗೆ ಸಿಗುವುದು ಕಷ್ಟ ಎನ್ನಲಾಗುತ್ತಿದೆ.

  ಹೀಗಾಗಿ ರೋಹಿತ್ ಶೆಟ್ಟಿ ಆಯ್ಕೆ ದೀಪಿಕಾ ಪಡುಕೋಣೆಯೇ ಫೈನಲ್ ಆಗುವ ಸಾಧ್ಯತೆಯೇ ಹೆಚ್ಚಿದೆ ಎನ್ನುಲಾಗುತ್ತಿದ್ದರೂ ಕತ್ರಿನಾ ಕೂಡ ಲಿಸ್ಟ್ ಬಿಟ್ಟು ಹೋಗಿಲ್ಲ ಎಂಬುದೂ ಅಷ್ಟೇ ಸತ್ಯ. ಒಟ್ಟಿನಲ್ಲಿ ಶಾರುಖ್ ಚಿತ್ರ ಚೆನ್ನೈ ಎಕ್ಸ್ ಪ್ರೆಸ್ ಯಾರ ಮಡಿಲಿಗೆ ಬಿದ್ದು ಶಾರುಖ್ ಜೊತೆ ರೊಮಾನ್ಸ್ ಮಾಡುವ ಅದೃಷ್ಟ ಯಾರದೆಂದು ಕಾದುನೋಡಬೇಕಾಗಿದೆ. (ಏಜೆನ್ಸೀಸ್)

  English summary
  Shahrukh Khan is the new man in Katrina Kaif, Deepika Padukone life. Both the actresses are considered for Rohit Shetty Chennai Express.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X