»   » ಕಲ್ಲುಮುಳ್ಳಿನ ಹಾದಿಯಲ್ಲಿ ಬಾಲಿವುಡ್ ಸ್ಟಾರ್ ವಿದ್ಯಾ

ಕಲ್ಲುಮುಳ್ಳಿನ ಹಾದಿಯಲ್ಲಿ ಬಾಲಿವುಡ್ ಸ್ಟಾರ್ ವಿದ್ಯಾ

Posted By:
Subscribe to Filmibeat Kannada

ಯಶಸ್ಸಿಗೆ ಯಾವುದೇ ಸಿದ್ಧಸೂತ್ರವಿಲ್ಲ ಎಂಬುದನ್ನು ಪದೇಪದೇ ಹೇಳಲಾಗುತ್ತದೆ. ಕಾರಣ ಯಾವುದೇ ಶಾರ್ಟ್ ಕಟ್ ಮೂಲಕ ಯಾರೂ ಯಶಸ್ವಿಯಾಗಲು ಸಾಧ್ಯವಿಲ್ಲ. ಅದರಲ್ಲೂ ಗ್ಲಾಮರ್ ರಂಗವಾಗಿರುವ ಚಿತ್ರರಂಗದಲ್ಲಂತೂ ಈ ಮಾತು ಅಕ್ಷರಶಃ ಸತ್ಯ. ಇದು ನಟಿ ವಿದ್ಯಾ ಬಾಲನ್ ಅವರಿಗೆ ಚೆನ್ನಾಗಿಯೇ ಅನುಭವ, ಅರ್ಥ ಆಗಿದೆಯಂತೆ.

ವಿಧು ವಿನೋದ್ ಚೋಪ್ರಾರ ಫಿಲಂ ಫೆಸ್ಟಿವಲ್ ನಲ್ಲಿ ಮಾತನಾಡುತ್ತಿದ್ದ ವಿದ್ಯಾ "ತಾವು ಬಾಲಿವುಡ್ ಜರ್ನಿಯಲ್ಲಿ ಸಾಕಷ್ಟು ಕಷ್ಟುಪಟ್ಟು ಮೇಲೆಬಂದಿದ್ದಾಗಿ ತಿಳಿಸಿದ್ದಾರೆ. ಪರಿಣೀತಾ ಚಿತ್ರದಲ್ಲಿ ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದ ವಿದ್ಯಾ, ಆ ಚಿತ್ರದ 'ಲಲಿತ್' ಪಾತ್ರಕ್ಕಾಗಿ 60 ಬಾರಿ 'ಗ್ರೂಲಿಂಗ್ ಟೆಸ್ಟ್' ಎದುರಿಸಿ ಜಯಶಾಲಿಯಾಗಿದ್ದರಂತೆ.

ಇದೀಗ ಬಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಎನಿಸಿರುವ ವಿದ್ಯಾ ಬಾಲನ್ ಇದಕ್ಕೂ ಮೊದಲು ತುಳಿದಿದ್ದು ಸಖತ್ ಕಲ್ಲುಮುಳ್ಳು ತುಂಬಿದ್ದ ಹಾದಿ ಎಂಬುದು ಅವರ ಮಾತಿನಿಂದಲೇ ವ್ಯಕ್ತವಾಗಿದೆ. ಆದರೆ ಕೊನೆಗೂ ಸಕ್ಸಸ್ ಕಂಡಿದ್ದು ವಿದ್ಯಾರ ಹಠ ಮತ್ತು ಪ್ರಯತ್ನದಿಂದ ಕೂಡಿದ ಪ್ರತಿಭೆ. ನೋ ಒನ್ ಕಿಲ್ಡ್ ಜೆಸ್ಸಿಕಾ, ದಿ ಡರ್ಟಿ ಪಿಕ್ಚರ್ ಮತ್ತು ಕಹಾನಿ ಚಿತ್ರಗಳ ಮೂಲಕ ವಿದ್ಯಾ ಈಗ ಬಾಲಿವುಡ್ ನ ಹಾಟ್ ಫೇವರೆಟ್. (ಏಜೆನ್ಸೀಸ್)

English summary
Vidya Balan had to give over 60 tests for her debut Bollywood movie Parineeta and today she achieved the stardom.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X