»   »  ಸೈಗಲ್ ರನ್ನು ಮದುವೆಯಾಗಲು ಬಯಸಿದ್ದೆ; ಲತಾ

ಸೈಗಲ್ ರನ್ನು ಮದುವೆಯಾಗಲು ಬಯಸಿದ್ದೆ; ಲತಾ

Subscribe to Filmibeat Kannada
When Lata wanted to marry Saigal
ಸಂಗೀತ ಲೋಕದ ಜೀವಂತ ದಂತಕಥೆ ಲತಾ ಮಂಗೇಷ್ಕರ್ ಅವರು ಸುಪ್ರಸಿದ್ಧ ಗಾಯಕ ಕೆ ಎಲ್ ಸೈಗಲ್ ರನ್ನು ಮದುವೆಯಾಗಲು ಬಯಸಿದ್ದರಂತೆ. ಅವಿವಾಹಿತೆಯಾಗಿರುವ ಲತಾ ಯೌವನದಲ್ಲಿದಾಗ ಸೈಗಲ್ ಅವರನ್ನು ಮದುವೆಯಾಗ ಬೇಕೆಂದು ಇಚ್ಚಿಸಿದ್ದರೆಂದು ಅವರ ಕುಂಟುಂಬದ ಮೂಲಗಳು ತಿಳಿಸಿವೆ.

ಮಗುವಾಗಿದ್ದಾಗಿಂದಲೂ ಸೈಗಲ್ ಅವರನ್ನು ನೋಡಬೇಕೆಂದು ಮನೆಯವರನ್ನು ಪೀಡಿಸುತ್ತಲೇ ಇದ್ದೆ. ಅವರ ಹಾಡೆಂದರೆ ನನಗೆ ಪಂಚಪ್ರಾಣ.ದೊಡ್ಡವಳಾದ ಮೇಲೆ ಅವರನ್ನೇ ವರಿಸಬೇಕೆಂದು ಹೇಳುತ್ತಿದ್ದೆ, ನೀನು ದೊಡ್ಡವಳಾದಾಗ ಸೈಗಲ್ ಸಾಹೇಬರು ಮುದುಕರಾಗಿರುತ್ತಾರೆಂದು ಅವರ ತಂದೆ ಸಮಜಾಯಿಷಿ ನೀಡುತ್ತಿದ್ದರೆಂದು ಲತಾ ಮಂಗೇಶ್ಕರ್ ತನ್ನ ಹಿಂದಿನ ಸವಿಸವಿ ನೆನಪನ್ನು ಹೇಳುತ್ತಾರೆ.

ಅವರು ಮುದುಕರಾಗಿದ್ದರೂ ಪರವಾಗಿಲ್ಲ ನಾನು ಅವರನ್ನೇ ಮದುವೆಯಾಗುತ್ತೇನೆಂದು ರಚ್ಚೆ ಹಿಡಿಯುತ್ತಿದ್ದರಂತೆ. ನಸ್ರೀಂ ಮುನ್ನಿ ಕಬೀರ್ ಬರೆದಿರುವ ನಿಯೋಗಿ ಬುಕ್ಸ್ ಹೊರತಂದಿರುವ 'Lata Mangeshkar: In Her Own Voice ' ಎಂಬ ಪುಸ್ತಕದಲ್ಲಿ ಲತಾ ಮಂಗೇಶ್ಕರ್ ಈ ವಿಷಯವನ್ನು ಹೇಳಿಕೊಂಡಿದ್ದಾರೆ.

ನನ್ನ ಆಸೆ ಈಡೇರಲಿಲ್ಲ ಆದರೆ ಸೈಗಲ್ ಅವರ ಉಂಗುರ ನನ್ನ ಬಳಿಯಿದೆ. ಕಡೆಗೂ ಸೈಗಲ್ ರನ್ನು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ.ಸೈಗಲ್ ಅವರ ಸಹೋದರ ಮಹೇಂದ್ರ ಸೈಗಲ್ ಮೂಲಕ ನಾನು ಸೈಗಲ್ ಕುಟುಂಬವನ್ನು ಭೇಟಿಯಾಗಿದ್ದೆ ಎಂದು ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada