»   » ಹರ್ಮನ್ ಬವೇಜಾ ಬಾಲಿವುಡ್ ಗೆ ಎಂಟ್ರಿ

ಹರ್ಮನ್ ಬವೇಜಾ ಬಾಲಿವುಡ್ ಗೆ ಎಂಟ್ರಿ

Subscribe to Filmibeat Kannada

ಮಿಲನ ಮಿಲೋ ಎಂದು ಸೊಗಸಾಗಿ ಕುಣಿಯುತ್ತ ಪ್ರೇಕ್ಷಕರನ್ನು ಮೋಡಿ ಮಾಡಿದ ಹರ್ಮನ್ ಬವೇಜಾ ಎಂದು ಸ್ಪುರದ್ರೂಪಿ ಬಾಲಿವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾನೆ. ಚಿತ್ರರಂಗದ ಕರುಳಿನ ಕುಡಿ ಎನ್ನುವ ಕಿರೀಟದ ಮೂಲಕ ದಾಂಗುಡಿ ಇಟ್ಟಿರುವ ಹರ್ಮನ್ 2050 ಲವ್ ಸ್ಟೋರಿ ಚಿತ್ರದ ಹೀರೋ. ತ್ರಿವಳಿ ಖಾನ್ ಗಳ ಅಬ್ಬರದಲ್ಲಿ ಸ್ಥಾನ ಪಡೆಯುವ ಸ್ಪಷ್ಟ ಹೆಜ್ಜೆ ಇರಿಸಿದ್ದಾನೆ.   

ಬಾಲಿವುಡ್ ನಲ್ಲಿ ಹೀರೋ ಹೀರೋಯಿನ್ ಗಳ ಮಕ್ಕಳ ಎಂಟ್ರಿ ಹೊಸದೇನಲ್ಲ. ರಣಭೀರ್ ಕಪೂರ್, ಸೋನಮ್ ಕಪೂರ್, ಕರೀನಾ, ಕರಿಷ್ಮಾ, ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್, ಸಂಜಯ ದತ್  ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಬಾಲಿವುಡ್ ಗೆ ನಂಟು ಹೊಂದಿರುವವರ ಮತ್ತೊಂದು ಕುಡಿಯೊಂದು ಪ್ರವೇಶ ಪಡೆದಿದೆ. ಹೆಸರು ಹರ್ಮನ್ ಬವೇಜಾ ಅಂತ. ಈತನ ತಂದೆ ಬಾಲಿವುಡ್ ನ ಹೆಸರಾಂತ ನಿರ್ದೇಶಕ ಹ್ಯಾರಿ ಬವೇಜಾ ಮತ್ತು ತಾಯಿ ನಿರ್ಮಾಪಕಿ ಪಮ್ಮಿ ಬವೇಜಾ ಅವರ ಪುತ್ರ ಎನ್ನುವ ಹೆಗ್ಗಳಿಕೆ.

ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾಳ ಮನ ಕದ್ದ ಸುರಸುಂದರಾಂಗ ಮೊದಲ ಬಾರಿಗೆ ನೋಡಿದರೆ ಹೃತಿಕ್ ರೋಷನ್ ಎನ್ನುವ ಪಡಿಯಚ್ಚು ಬೇರೆ.ರೂಪು, ಹಾವಭಾವ, ನೃತ್ಯ ಎಲ್ಲವೂ ಹೃತಿಕ್ ರೋಷನ್ ಅನುಕರಣೆಯಂತಿದೆ. ಅದು ಕೂಡಾ ಹರ್ಮನ್ ಗೆ ಪ್ಲಸ್ ಪಾಯಿಂಟ್ ಎನ್ನುತ್ತದೆ ಬಾಲಿವುಡ್. ಹರ್ಮನ್ ನಾಯಕ ನಟನಾಗಿ ನಟಿಸಿರುವ 2050 ಲವ್ ಸ್ಟೋರಿ ಚಿತ್ರ ಇಂದು(ಜು.4) ದೇಶಾದ್ಯಂತ ಬಿಡುಗಡೆಗೊಳ್ಳಲಿದೆ. ಭಾರಿ ನಿರೀಕ್ಷೆಯ ಈ ಚಿತ್ರ ಹರ್ಮನ್ ವೃತ್ತ ಜೀವನದ ಮಹತ್ವದ ಘಟ್ಟವು ಹೌದು. ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಮೊದಲ ನೋಟದಲ್ಲಿ ಕ್ಲಿನ್ ಬೋಲ್ಡ್ ಮಾಡಿದ ಈತ ಬಾಲಿವುಡ್ ನಲ್ಲಿ ಅಭಿಮಾನಿಗಳ ಮನಸೂರೆಗೊಳ್ಳುವನೆ ಎನ್ನುವುದನ್ನು ಕಾದು ನೋಡಬೇಕು.

(ದಟ್ಸ್ ಕನ್ನಡ ಜಾಲಿವುಡ್ )

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada