»   » ಮಿಸ್ ವರ್ಲ್ಡ್, ಶಾರುಖ್ ನನ್ನ ಗುರಿ: ಮನಸ್ವಿ

ಮಿಸ್ ವರ್ಲ್ಡ್, ಶಾರುಖ್ ನನ್ನ ಗುರಿ: ಮನಸ್ವಿ

Posted By:
Subscribe to Filmibeat Kannada

ಫೇರ್ ಅಂಡ್ ಲವ್ಲಿ ಜಾಹೀರಾತು ಮೂಲಕ ಬೆಳಕಿಗೆ ಬಂದ ದೆಹಲಿ ಮೂಲದ ಬೆಡಗಿ ಮನಸ್ವಿ 2010 ರ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಧರಿಸಿ ಬೀಗುತ್ತಿದ್ದಾರೆ. ಜಾಹೀರಾತು ಜಗತ್ತಿಗಿಂತಲೂ ಗ್ಲಾಮರಸ್ ಲೋಕವುಳ್ಳ ಬಾಲಿವುಡ್ ಗೆ ಲಗ್ಗೆ ಇಡುವ ಬಗ್ಗೆ ಮಾತಾಡುತ್ತಾರೆ. ಶಾರುಖ್ ಎಂದರೆ ಈಕೆಗೆ ಪ್ರಾಣವಂತೆ.

ಎಲ್ಲಾ ಮಿಸ್ ಇಂಡಿಯಾ, ವರ್ಲ್ಡ್, ಯೂನಿವರ್ಸ್ ಆದ ಭಾರತದ ಸುಂದರಿಯರಿಗೆ ಅವಕಾಶದ ಹೆಬ್ಬಾಗಿಲನ್ನು ತೆರೆದುಕೊಂಡು ಕೂತಿರುವ ಬಾಲಿವುಡ್ ಗೆ ಮನಸ್ವಿ ಕೂಡ ಹೊಸ ಸೇರ್ಪಡೆಯಾಗುವ ಸನ್ನಾಹದಲ್ಲಿದ್ದಾರೆ. ನನಗೆ ಶಾರುಖ್ ಅಂದ್ರ ಪಂಚಪ್ರಾಣ. ಆತನ ಜೊತೆ ರೋಮ್ಯಾಂಟಿಕ್ ಡ್ಯುಯೆಟ್ ಹಾಡುತ್ತಾ ಮರ ಮರ ಸುತ್ತವ ದೃಶ್ಯ ಕಲ್ಪಿಸಿಕೊಂಡರೆ ನನ್ನ ಮೈ ಪುಳಕಗೊಳ್ಳುತ್ತದೆ ಎನ್ನುತ್ತಾರೆ 5.8 ಅಡಿ ಎತ್ತರದ ಮನಸ್ವಿ ಮಾಂಗೈ.

ವಿಲ್ಸ್ ಲೈಫ್ ಸ್ಟೈಲ್ ಫ್ಯಾಷನ್ ವೀಕ್ ನಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳುವ ಮನಸ್ವಿ ಹಲವು ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಮಿಸ್ ಇಂಡಿಯಾ ಕಿರೀಟ ಅಲ್ಲದೆ ಮಿಸ್ ಟೂರಿಸಂ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಪ್ರಿಯಾಂಕಾ ಛೋಪ್ರಾ ನಂತರ ಭಾರತಕ್ಕೆ ಮತ್ತೆ ಮಿಸ್ ವರ್ಲ್ಡ್ ಕಿರೀಟ ತರುವುದು ನನ್ನ ಸದ್ಯದ ಗುರಿ. ನನಗೆ ಗೆಲ್ಲುವ ಆತ್ಮವಿಶ್ವಾಸ ಇದೆ ಎನ್ನುತ್ತಾರೆ 22 ವರ್ಷದ 52 ಕೆಜಿ ತೂಕದ ರೂಪದರ್ಶಿ ಮನಸ್ವಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada