»   » ಬಿಪಾಷಾಗೆ 30ನಿಮಿಷಕ್ಕೆ ಬರೀ 90ಲಕ್ಷ! ದುಡ್ಡೇ ವಿಸ್ಮಯ!

ಬಿಪಾಷಾಗೆ 30ನಿಮಿಷಕ್ಕೆ ಬರೀ 90ಲಕ್ಷ! ದುಡ್ಡೇ ವಿಸ್ಮಯ!

Posted By:
Subscribe to Filmibeat Kannada

ಬಾಲಿವುಡ್ ನಟಿ ಬಿಪಾಷ ಬಸು ತನ್ನ ಡೈರಿಯಲ್ಲಿ ಬರೆದುಕೊಂಡಿರುವ ಒಂದು ನಿಯಮವನ್ನು ಈ ವರ್ಷ ಮುರಿಯುತ್ತಿದ್ದಾರೆ. ಇಷ್ಟಕ್ಕೂ ಆ ನಿಯಮ ಏನಂತೀರಾ! ಇನ್ನೇನಿಲ್ಲಾ ಹೊಸ ವರ್ಷದ ಪ್ರಾರಂಭಕ್ಕೂ ಮುಂದಿನ ದಿನ ಅಂದರೆ ಡಿ.31ರ ಮಧ್ಯರಾತ್ರಿ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಶಪಥ ಮಾಡಿದ್ದರು. ಅಂದಿನ ರಾತ್ರಿ ಪೂರಾ ಪ್ರಶಾಂತವಾಗಿ ನಿದ್ದೆ ಮಾಡಬೇಕೆಂದು ನಿರ್ಣಯಸಿದ್ದರು. ಅದನ್ನು ಬಹಳಷ್ಟು ವರ್ಷ ಪಾಲಿಸಿಕೊಂಡೂ ಬಂದಿದ್ದರು. ಆದರೆ ಈ ವರ್ಷ ಅವರು ತಮ್ಮ ನಿರ್ಣಯಕ್ಕೆ ಎಳ್ಳುನೀರು ಬಿಡುತ್ತಿದ್ದಾರೆಂಬ ಸುದ್ದಿ ಬಂದಿದೆ.

ಮುಂಬೈನ ಪ್ರಮುಖ ಹೋಟೆಲೊಂದು ಪ್ರತಿ ವರ್ಷ ವಿಶೇಷ ನೃತ್ಯಗಳನ್ನು ಹೊಸ ವರ್ಷದ ಹಿನ್ನೆಲೆಯಲ್ಲಿ ಏರ್ಪಡಿಸುತ್ತದೆ. ಕಳೆದ ವರ್ಷ ಇದೇ ಹೋಟೆಲ್‍ನಲ್ಲಿ ಶೃಂಗಾರ ತಾರೆ ಮಲ್ಲಿಕಾ ಶೆರಾವತ್ ಕುಣಿದು 50 ಲಕ್ಷ ರೂ. ಗಂಟು ಮಾಡಿಕೊಂಡು ಹೋಗಿದ್ದರು. ಈ ವರ್ಷದ ಅವಕಾಶ ಬಿಪಾಷಾರ ಮಡಿಲಿಗೆ ಬಿದ್ದಿದೆ. ಸಿಕ್ಕ ಸದಾವಕಾಶವನ್ನು ಒಲ್ಲೆ ಎನ್ನಲು ಬಿಪಾಷಾರ ಮನಸ್ಸು ಒಪ್ಪುತ್ತಿಲ್ಲ. ಕಾರಣ ಕಂತೆ ಕಂತೆ ಹಣ.

ಅರ್ಧ ಗಂಟೆಯ ಕಾರ್ಯಕ್ರಮದಲ್ಲಿ ಕುಣಿಯಲು 75 ಲಕ್ಷ ರೂ. ಕೊಡ್ತೀವಿ ಎಂದರು ಹೋಟೆಲ್‌ನವರು. ಬಿಲ್‌ಕುಲ್ ಆಗಲ್ಲ ಎಂದರು ಬಿಪಾಷಾ. 90 ಲಕ್ಷ ಕೊಟ್ಟರೆ ಕುಣೀತೀನಿ ಇಲ್ಲಾ ಅಂದ್ರೆ ರೈಟ್ ಹೇಳಿ ಎಂದರು. ವಿಧಿ ಇಲ್ಲದೆ ಜೆ.ಡಬ್ಲ್ಯು. ಮಾರಿಯಟ್ ಹೋಟೆಲ್ ಮಾಲೀಕರು ಕೋಲೆ ಬಸವನ ತರಾ ತಲೆ ಅಲ್ಲಾಡಿಸಿ ತಲೆಯೊಂದಕ್ಕೆ ಟೆಕೆಟ್ ಧರ 11,500ರೂಪಾಯಿ ನಿಗದಿಪಡಿಸಿದರು. ತಲೆ ಇರೋವ್ರು ಯಾರೂ ಒಪ್ಪಲ್ಲಾ ಬಿಡಿ ಅಂತೀರಾ!

(ಏಜನ್ಸೀಸ್)

ಮತ್ತಷ್ಟು ಸುದ್ದಿ :
ಬಿಪಾಷಾ ಬಸು ಏಷ್ಯಾದ ನಂಬರ್ ಒನ್ ಕಾಮಕನ್ನಿಕೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada