»   » ನಸುಗೆಂಪು ಸೀರೆಯಲ್ಲಿ ಕಂಗೊಳಿಸಿದ ಗರ್ಭಿಣಿ ಐಶ್ವರ್ಯ ರೈ

ನಸುಗೆಂಪು ಸೀರೆಯಲ್ಲಿ ಕಂಗೊಳಿಸಿದ ಗರ್ಭಿಣಿ ಐಶ್ವರ್ಯ ರೈ

Posted By:
Subscribe to Filmibeat Kannada

ಸಾಮಾನ್ಯವಾಗಿ ಗಂಡ ಹೆಂಡಿರ ಜಗಳ ಉಂಡು ಮಲಗೋತನಕವಿರುತ್ತದೆ. ಬಳಿಕ ಹಾಸಿಗೆಗೆ ಉರುಳಿದ ಮೇಲೆ ಎಲ್ಲವೂ ಮರೆತುಹೋಗುತ್ತಾರೆ. ಆದರೆ ಅತ್ತೆ ಸೊಸೆಯ ಜಗಳ ಮಾತ್ರ ಉಂಡು ಮಲಗಿದ ಮೇಲೇನೆ ಶುರುವಾಗೋದು ಅನ್ನಿಸುತ್ತದೆ. ಇನ್ನು ಬಾಲಿವುಡ್ ತಾರೆ ಐಶ್ವರ್ಯ ರೈ ಹಾಗೂ ಅವರ ಅತ್ತೆ ಜಯಾ ಬಚ್ಚನ್ ಸಮಾಚಾರ ಹೇಗೋ ಏನೋ ಗೊತ್ತಿಲ್ಲ.

ಇಬ್ಬರೂ ಒಟ್ಟಿಗೆ ದುರ್ಗಾ ಪೂಜೆ ಮಾಡಿ ಕೃತಾರ್ಥರಾಗಿದ್ದಾರೆ. ಮುಂಬೈನಲ್ಲಿ ಇಬ್ಬರೂ ದುರ್ಗಾ ಮಾತೆಗೆ ಪೂಜೆ ಸಲ್ಲಿಸಿ ತಾಯಿಯ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ನಸುಗೆಂಪು ಬಣ್ಣದ ಸೀರೆ ಉಟ್ಟಿದ್ದ ತುಂಬು ಗರ್ಭಿಣಿ ಐಶ್ವರ್ಯ ರೈ ಕಂಗೊಳಿಸುತ್ತಿದ್ದರು.

ಐಶ್ವರ್ಯ ಗರ್ಭಿಣಿಯಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಿದ್ದರು. ಮೋಡದ ಮರೆಯಲ್ಲಿ ಚಂದ್ರ ಕಣ್ಣಾಮುಚ್ಚಾಲೆ ಆಡಿದಂತೆ ಐಶ್ವರ್ಯ ರೈ ಸಹ ಆಗಾಗ ದರ್ಶನ ನೀಡಿ ತಮ್ಮ ಅಭಿಮಾನಿಗಳ ಮನಸ್ಸಿಗೆ ಮುದ ನೀಡುತ್ತಿದ್ದಾರೆ. (ಏಜೆನ್ಸೀಸ್)

English summary
Aishwarya Rai and her saas Jaya Bachchan catching up the Durga Puja festivities in Mumbai. Aishwarya was spotted in a chanderi saree with zari work at a puja pandal to celebrate the ashtami.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada