For Quick Alerts
  ALLOW NOTIFICATIONS  
  For Daily Alerts

  ಹಾರ್ವರ್ಡ್ ವಿವಿಗೆ ಹೊರಟುನಿಂತ Lecturer ಶಾರೂಕ್‌

  By Srinath
  |

  ಇತ್ತೀಚೆಗೆ ಒಂದಲ್ಲ ಒಂದು ವಿವಾದದಲ್ಲಿ ಸುಖಾಸುಮ್ಮನೆ ಸಿಲುಕುತ್ತಿರುವ ಬಾಲಿವುಡ್‌ ಬಾದ್ ಷಾ ಶಾರೂಕ್ ಖಾನ್‌ ಅವರನ್ನು ದೂರದ ಅಮೆರಿಕದಿಂದ ಸಂತಸದ ಸುದ್ದಿಯೊಂದು ಹುಡುಕಿಕೊಂಡು ಬಂದಿದೆ.

  'ನಮ್ಮ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸ ನೀಡಲು ಬನ್ನಿ' ಎಂದು ಖ್ಯಾತ ನಟ ಶಾರೂಕ್ ಅವರಿಗೆ ಅಮೆರಿಕದ ಪ್ರತಿಷ್ಠಿತ Harvard ವಿವಿ ಆಹ್ವಾನ ನೀಡಿದೆ.


  ಕಳೆದ ವರ್ಷವಷ್ಟೇ ಹೀಗೆ ಅತಿಥಿ ಉಪನ್ಯಾಸಕ್ಕೆ ಅಮೆರಿಕದ Yale ವಿವಿ ಶಾರೂಕ್‌ ಗೆ ಆಮಂತ್ರಣ ನೀಡಲಾಗಿತ್ತು. ಅದಕ್ಕೆಂದೇ ಶಾರೂಕ್‌ ಅಮೆರಿಕಕ್ಕೆ ತೆರಳಿದಾಗ ನ್ಯೂಯಾರ್ಕಿನ White Plains ವಿಮಾನ ನಿಲ್ದಾಣದಲ್ಲಿ 'ಮೈ ನೇಮ್ ಈಸ್ ಖಾನ್' ಎಂದಿದ್ದಕ್ಕೆ ಅವರನ್ನು ತಪಾಸಣೆಗೆ ಗುರಿಪಡಿಸಲಾಗಿತ್ತು. ಅದೊಂದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು.

  ಈ ಮಧ್ಯೆ, ಮುಂದಿನ ಮಾರ್ಚ್‌ ತಿಂಗಳಲ್ಲಿ ತನ್ನ ಕ್ಯಾಂಪಸ್‌ ಗೆ ಬಂದು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಂತೆ ಹಾರ್ವರ್ಡ್ ವಿವಿ ಶಾರೂಕ್‌ಗೆ ಮನವಿ ಮಾಡಿಕೊಂಡಿದೆ.

  ಇಷ್ಟಕ್ಕೂ ಶಾರೂಕ್ ಏನಪ್ಪಾ ಓದಿದ್ದಾರೆ ಅಂದರೆ ಅವರು economics ವಿಷಯದಲ್ಲಿ ಪದವಿ ಪಡೆದಿದ್ದಾರೆ. ಚಿತ್ರ ನಿರ್ಮಾಣದ ಜತೆಗೆ VFX ಎಂಬ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇದರಿಂದ ವಿಶ್ವದ ಅತಿ ದೊಡ್ಡ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿನ economicsಗೆ ಸಂಬಂಧಿಸಿದಂತೆ ಅವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಸಾಧ್ಯತೆಯಿದೆ.

  English summary
  Bollywood actor Shah Rukh Khan to lecture Harvard University. Bollywood actor Shah Rukh Khan has already delivered lectures at Yale University last year. Now, reports say that the famous Harvard University has invited Shah Rukh Khan to deliver a lecture may be in March 2013. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X