»   » ಹಿಂದಿ ಚಿತ್ರ ನಿರ್ದೇಶಕ ಬಿ.ಆರ್ ಛೋಪ್ರಾ ನಿಧನ

ಹಿಂದಿ ಚಿತ್ರ ನಿರ್ದೇಶಕ ಬಿ.ಆರ್ ಛೋಪ್ರಾ ನಿಧನ

Posted By:
Subscribe to Filmibeat Kannada

ಮುಂಬೈ, ನ. 5 : ಅನೇಕ ದಿನಗಳಿಂದ ತೀವ್ರ ಆನಾರೋಗ್ಯಕ್ಕೆ ಒಳಗಾಗಿದ್ದ ಬಾಲಿವುಡ್ ನ ಹಿರಿಯ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಲದೇವ್ ರಾಜ್ ಛೋಪ್ರಾ ಇಂದು ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಮೃತ ಬಿ.ಆರ್.ಛೋಪ್ರಾ ಅವರು ಪುತ್ರ, ಹೆಸರಾಂತ ಚಿತ್ರ ನಿರ್ಮಾಪಕ ರವಿ ಛೋಪ್ರಾ ಹಾಗೂ ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗ ಹಾಗೂ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ. ಛೋಪ್ರಾ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಇಂದು ಸಬ್ಅರ್ಬನ್ ನ ಜುಹೋದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಧೂಲ್ ಕಾ ಫೂಲ್, ನಯಾ ದೂರ್, ವಕ್ತ್, ಹಮ್ ರಾಜ್, ಇನ್ಸಾಫ್ ಕಾ ತಾರಜು ಹಾಗೂ ನಿಖಾ ಚಿತ್ರಗಳು ಅವರ ಅವರ ನಿರ್ದೇಶನದ ಗರಡಿಯಿಂದ ಹೊರಬಂದಿದ್ದು, ಸಾಕಷ್ಟು ಜನಮೆಚ್ಚುಗೆಯನ್ನು ಪಡೆದಿದ್ದವು. 90 ದಶಕದಲ್ಲಿ ಮಹಾಭಾರತ ಕಥೆಯನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಖ್ಯಾತ ನಿರ್ದೇಶಕ ಯಶ್ ಛೋಪ್ರಾ ಇವರ ಸಹೋದರರಾಗಿದ್ದಾರೆ. ಹೆಸರಾಂತ ನಿರ್ದೇಶಕ, ನಿರ್ಮಾಪಕ ಆದಿತ್ಯ ಛೋಪ್ರಾ ಇವರ ಅಳಿಯರಾಗಿದ್ದಾರೆ.

2008ರಲ್ಲಿ ಇವರಿಗೆ ಬಾಲಿವುಡ್ ನ ಆಸ್ಕರ್ ಎಂದೇ ಪರಿಗಣಿಸಲ್ಪಟ್ಟಿರುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಜೀವಮಾನ ಸಾಧನೆಗಾಗಿ ಫಿಲ್ಮಫೇರ್ ಪ್ರಶಸ್ತಿ, 1960ರಲ್ಲಿ ಇವರ ನಿರ್ದೇಶನದ ಕನೂನ್ ಚಿತ್ರ ಶ್ರೇಷ್ಟ ಚಿತ್ರಕ್ಕೆ ಪುರಸ್ಕಾರ ದೊರೆತಿದೆ.

ಗಣ್ಯರ ಸಂತಾಪ

ಬಿ.ಆರ್.ಛೋಪ್ರಾ ನಿಧನಕ್ಕೆ ಬಾಲಿವುಡ್ ಹಿರಿಯ ಕಲಾವಿದರು, ತಂತ್ರಜ್ಞರು ತೀವ್ರ ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ಹಿರಿಯ ಕೊಂಡಿಯೊಂದು ಕಳಿಚಿರುವುದು ಉದ್ಯಮಕ್ಕೆ ಭಾರಿ ನಷ್ಟವಾಗಿದೆ ಎಂದು ದುಖಃ ವ್ಯಕ್ತಪಡಿಸಿದೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada