»   » ಪಾರದರ್ಶಕ ಬಿಕಿನಿಯಲ್ಲಿ ಮುಗ್ಧಾ ಗೋಡ್ಸೆ ಸೌಂದರ್ಯ

ಪಾರದರ್ಶಕ ಬಿಕಿನಿಯಲ್ಲಿ ಮುಗ್ಧಾ ಗೋಡ್ಸೆ ಸೌಂದರ್ಯ

Posted By:
Subscribe to Filmibeat Kannada

ರೂಪದರ್ಶಿ, ಬಾಲಿವುಡ್ ನಟಿ ಮುಗ್ಧಾ ಗೋಡ್ಸೆ ಇದೇ ಮೊದಲ ಬಾರಿಗೆ ಪಾರದರ್ಶಕ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈಕೆ ಫ್ಯಾಶನ್ ಚಿತ್ರದಲ್ಲಿ ರ‌್ಯಾಂಪ್ ಮೇಲೆ ಬೆಕ್ಕಿನ ಹೆಜ್ಜೆ ಹಾಕಿದ್ದಳು. ಆಗ ಬಿಕಿನಿ ತೊಟ್ಟಿದ್ದರೂ ಅಷ್ಟಾಗಿ ದೇಹವನ್ನು ಪ್ರದರ್ಶಿಸಿರಲಿಲ್ಲ. ಇದೀಗ ಆಕೆ ಪಾರದರ್ಶಕ ಬಿಕಿನಿ ತೊಟ್ಟು ಪಡ್ಡೆಗಳ ನಿದ್ದೆಯನ್ನು ಅಪಹರಿಸಿದ್ದಾಳೆ.

ಆಕೆ ಅಭಿನಯಿಸುತ್ತಿರುವ ಚಿತ್ರದ ಹೆಸರು 'ಹೆಲ್ಪ್'. ಚಿತ್ರದ ನಾಯಕ ನಟ ಬಾಬ್ಬಿ ಡಿಯೋಲ್. ಈ ಬಗ್ಗೆ ಮುಗ್ಧಾ ಮಾತನಾಡುತ್ತಾ, ಚಿತ್ರಕತೆ ಬಿಕಿನಿಯನ್ನು ಬಯಸುವುದಾದರೆ ತಾನು ಅದನ್ನು ತೊಡಲು ರೆಡಿ ಎಂದಿದ್ದಾರೆ. ತನ್ನ ಅಂಗಸೌಷ್ಟವವನ್ನು ಹೆಚ್ಚಿಸಿಕೊಳ್ಳಲು ತಾನು ತುಂಬ ಶ್ರಮ ವಹಿಸುತ್ತೇನೆ ಎನ್ನುತ್ತಾರೆ.

ಬಣ್ಣದ ಹಾಗೂ ಪ್ರಕಾಶಮಾನವಾದ ಬಿಕಿನಿಗೆ ಬದಲಾಗಿ ಆಕೆ ಅಚ್ಚ ಶ್ವೇತ ವರ್ಣದ ಬಿಕಿನಿ ತೊಟ್ಟಿರುವುದು ವಿಶೇಷ. ರಾಜೀವ್ ವಿರಾನಿ ನಿರ್ದೇಶನದ ಈ ಚಿತ್ರ ಆಗಸ್ಟ್ 13ರಂದು ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ಬಗ್ಗೆ ಮುಗ್ಧಾ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಹಿಂದೆ ಈಕೆ 'ಜೈಲ್' ಮತ್ತು 'ಆಲ್ ದಿ ಬೆಸ್ಟ್' ಎಂಬ ಚಿತ್ರಗಳಲ್ಲಿ ನಟಿಸಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada