»   »  ಹಸೆಮಣೆ ಏರುವ ಸನ್ನಾಹದಲ್ಲಿ ರಾಣಿ ಮುಖರ್ಜಿ

ಹಸೆಮಣೆ ಏರುವ ಸನ್ನಾಹದಲ್ಲಿ ರಾಣಿ ಮುಖರ್ಜಿ

Subscribe to Filmibeat Kannada

'ದಿಲ್ ಬೋಲೆ ಹಡಿಪ್ಪಾ' ಚಿತ್ರ ಬಿಡುಗಡೆಗೂ ಮುನ್ನ ರಾಣಿ ಮುಖರ್ಜಿ ಉತ್ಸಾಹದ ಬುಗ್ಗೆಯಾಗಿದ್ದರು. ನಿಮ್ಮ ಮದುವೆ ಯಾವಾಗ? ಎಂದು ಮಾಧ್ಯಮಗಳು ಕೇಳಿದ್ದಕ್ಕೆ...ಅದಕ್ಕೆ ಇನ್ನೂ ಮೂರು ವರ್ಷಗಳ ಕಾಲಾವಕಾಶವಿದೆ. ಎಲ್ಲರಿಗೂ ತಿಳಿಸಿಯೇ ಮದುವೆಯಾಗುತ್ತೇನೆ. ನನಗೆ ಗೊತ್ತಿಲ್ಲದೆಯೇ ನನ್ನ ಮದುವೆ ಮಾಡಿಬಿಡಬೇಡಿ ಎಂದು ಹಾಸ್ಯ ಚಟಾಕಿ ಸಿಡಿಸಿದ್ದರು.

'ದಿಲ್ ಬೋಲೆ...' ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿದ ಮೇಲೆ ಆಕೆಯ ಮನಸು ಬದಲಾಗಿದೆ. ಶೀಘ್ರದಲ್ಲೇ ಹಸೆಮಣೆ ಏರುವ ಸಿದ್ಧತೆಯಲ್ಲಿದ್ದಾರೆ. ರಾಣಿಗೆ ಈಗಾಗಲೇ 31 ವರ್ಷಗಳು ತುಂಬಿವೆ. ಸಿನಿಮಾ ಅವಕಾಶಗಳು ದಿನದಿಂದ ದಿನಕ್ಕೆ ಕುಗ್ಗುತ್ತಿವೆ. ಹೊಸಬರ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ.

ವರ್ಷದ ಬಳಿಕ ತೆರೆಗೆ ಬಂದರೂ ಬೇಳೆ ಬೇಯುತ್ತಿಲ್ಲ. ಪ್ರೇಕ್ಷಕರು ತಿರುಗಿಯೂ ನೋಡುತ್ತಿಲ್ಲ. ಇದರಿಂದ ಆಕೆ ಒಂದಷ್ಟು ನಿರಾಶೆಗೊಂಡಿದ್ದಾರೆ. ಆದಿತ್ಯ ಚೋಪ್ರಾ ಓಕೆ ಎಂದರೆ ಶೀಘ್ರದಲ್ಲೇ ಮಂಗಳವಾದ್ಯಗಳು ಮೊಳಗಲಿವೆ. ಬಹಳಷ್ಟು ದಿನಗಳಿಂದ ಪ್ರೇಮ ಪಕ್ಷಿಗಳಾಗಿ ಹಾರಾಡುತ್ತಿದ್ದ ಇವರು ಇದೀಗ ಒಂದೇ ಗೂಡಿಗೆ ಸೇರುವ ತವಕದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada