ಐಟಂ ಗರ್ಲ್ ಸಿಲ್ಕ್ ಸ್ಮಿತಾ ಆತ್ಮಹತ್ಯೆಗೆ ಕಾರಣ ಗೊತ್ತೆ?
ಈಗ್ಗೆ 15 ವರ್ಷಗಳ ಹಿಂದೆ ಐಟಂ ಗರ್ಲ್ ಸಿಲ್ಕ್ ಸ್ಮಿತಾ ಸತ್ತಾಗ ಅದು ಆತ್ಮಹತ್ಯೆಯೆಂದು ಪೊಲೀಸರು ಷರಾ ಬರೆದು ಕೇಸು ಮುಚ್ಚಿಹಾಕಿದ್ದರು. ಆದರೆ ಸ್ಮಿತಾಳೊಂದಿಗೆ ಎರಡು ಚಿತ್ರ ನಿರ್ಮಿಸಿದ್ದ ತಿರುಪತಿ ರಾಜಾ ಎಂಬ ನಿರ್ದೇಶಕ "ಆಕೆಯ ಸಾವು ಆತ್ಮಹತ್ಯೆ ಅಲ್ಲವೇ ಅಲ್ಲ" ಎಂದು ವಾದಿಸಿದ್ದ. ಅದು ಹತ್ಯೆಯೋ ಆತ್ಮಹತ್ಯೆಯೋ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ.
ಈಗ ಮತ್ತೊಮ್ಮೆ ಸಿಲ್ಕ್ ಸಾವಿನ ಸುದ್ದಿ ಚರ್ಚೆಗೆ ಬಂದಿದೆ. ಅದೂ ವಿದ್ಯಾ ಬಾಲನ್ ಮೂಲಕ. ಆಕೆ ಅಭಿನಯಿಸುತ್ತಿರುವ ಸಿಲ್ಕ್ ಜೀವನ ಕತೆಯಾಧಾರಿತ 'ದಿ ಡರ್ಟಿ ಪಿಕ್ಚರ್'ನಲ್ಲಿ ಸಿಲ್ಕ್ ಸ್ಮಿತಾ ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾರಾ ಅಥವಾ ಹತ್ಯೆಗೆ ಒಳಗಾಗುತ್ತಾರಾ? ಸದ್ಯಕ್ಕೆ ಈ ಬಗ್ಗೆ ಎಲ್ಲೂ ಸುಳಿವಿಲ್ಲ. ಸಿಲ್ಕ್ ಸ್ಮಿತಾ ಹತ್ಯೆಯಾಗಿದ್ದಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ಕೆಲವರು ವಾದಿಸುತ್ತಾರೆ.

ಆತ್ಮಹತ್ಯೆಗೆ ನಾನಾ ಕಾರಣಗಳನ್ನೂ ಕೊಡುತ್ತಾರೆ. ಅದರಲ್ಲಿ ಸಾಕಷ್ಟು ಚಾಲ್ತಿಯಲ್ಲಿರುವ ಕಾರಣ ಹೀಗಿದೆ. ಇಷ್ಟಕ್ಕೂ ಸಿಲ್ಕ್ ಸ್ಮಿತಾ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? ಆಕೆಯ ವೃತ್ತಿ ಜೀವನದ ಗ್ರಾಫು ಅಧೋಗತಿಗೆ ಇಳಿದಿತ್ತು. ಇನ್ನೇನು ಆಕೆಗೆ ಅವಕಾಶಗಳೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಆಕೆಯನ್ನು ಬ್ಲೂ ಫಿಲಂ ಒಂದರಲ್ಲಿ ನಟಿಸುವಂತೆ ಬಲವಂತ ಮಾಡಲಾಯಿತು.
ಮೊದಲೆ ಆರ್ಥಿಕ ಸಂಕಷ್ಟದಲ್ಲಿ ನರಳುತ್ತಿದ್ದ ಸ್ಮಿತಾ ಅತ್ತ ನಟಿಸಲೂ ಆಗದೆ ಇತ್ತ ತನ್ನ ಚಿಂತಾಜನಕ ಬದುಕನ್ನು ಒಪ್ಪಿಕೊಳ್ಳಲೂ ಆಗದೆ ಆತ್ಮಹತ್ಯೆಗೆ ಶರಣಾದರು ಎನ್ನುತ್ತವೆ ಮೂಲಗಳು. ಈ ಅಂಶ ಚಿತ್ರದಲ್ಲಿ ಬೆಳಕು ಕಾಣಲಿದೆಯೇ ಇಲ್ಲವೆ ಎಂಬುದು ಅತೀವ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಏನಾಗುತ್ತದೋ ಕಾದು ನೋಡೋಣ. (ಏಜೆನ್ಸೀಸ್)


Click it and Unblock the Notifications











