For Quick Alerts
  ALLOW NOTIFICATIONS  
  For Daily Alerts

  ಆದಾಯ ತೆರಿಗೆ ಇಲಾಖೆಯಲ್ಲಿ ಕತ್ರಿನಾ ಪ್ರತ್ಯಕ್ಷ

  By Rajendra
  |

  ಇತ್ತೀಚೆಗೆ ಕತ್ರಿನಾ ಕೈಫ್ ಆದಾಯ ತೆರಿಗೆ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಈ ಹಿಂದೊಮ್ಮೆ ಆದಾಯ ತೆರಿಗೆ ಅಧಿಕಾರಿಗಳು ಕತ್ರಿನಾ ಮನೆ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿದ್ದರು. ತೆರಿಗೆ ವಂಚಿಸಿರಬಹುದು ಎಂಬ ಗುಮಾನಿ ಮೇಲೆ ದಾಳಿ ನಡೆದಿತ್ತು. ಆದರೆ ಐಟಿ ಅಧಿಕಾರಿಗಳಿಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ಹೋಗಿದ್ದರು.

  ಈಗ ಸ್ವತಃ ಕತ್ರಿನಾ ಅವರೇ ಐಟಿ ಅಧಿಕಾರಿಗಳನ್ನು ಭೇಟಿ ಮಾಡಿ ವಾರ್ಷಿಕ ಆದಾಯದ ವಿವರಗಳನ್ನು ಸಲ್ಲಿಸಿದ್ದಾರೆ. ಐಟಿ ಅಧಿಕಾರಿಗಳಿಗೂ ಕತ್ರಿನಾ ಮೇಲಿದ್ದ ತಪ್ಪು ಗ್ರಹಿಕೆ ದೂರವಾಗಿದೆಯಂತೆ. ದಾಳಿ ನಡೆದಾಗ ರು.6 ಕೋಟಿ ಬೇನಾಮಿ ಹಣ ಸಿಕ್ಕಿತ್ತು ಎಂಬ ವದಂತಿ ಹಬ್ಬಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಕತ್ರಿನಾ ಹೇಳಿದ್ದಾರೆ.

  ಉಳಿದ ತಾರೆಗಳಿಗೆ ಹೋಲಿಸಿದರೆ ಬಾಲಿವುಡ್‌ ಚಿತ್ರೋದ್ಯಮದಲ್ಲಿ ಕತ್ರಿನಾ ಆದಾಯ ಕಣ್ಣುಕುಕ್ಕುವಂತಿತ್ತು. ಹಾಗಾಗಿ ಸಹಜವಾಗಿಯೇ ಐಟಿ ಅಧಿಕಾರಿಗಳ ಕಣ್ಣು ಈಕೆ ಮೇಲೆ ಬಿದ್ದಿತ್ತು. ಕತ್ರಿನಾ ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಮಾತುಗಳು ಇಂದಿಗೂ ಚಾಲ್ತಿಯಲ್ಲಿವೆ. (ಏಜೆನ್ಸೀಸ್)

  English summary
  Actress Katrina Kaif made heads turn by visiting the Income Tax office on Friday because of her alleged problem with the IT department in the past. However, sources said that the visit was just one of the regular visits to file her annual tax.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X