For Quick Alerts
  ALLOW NOTIFICATIONS  
  For Daily Alerts

  ಮತ್ತೊಮ್ಮೆ ಶಾರುಖ್-ಐಶ್ವರ್ಯಾ ಜೋಡಿಯ ಮೋಡಿ

  |

  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಜೋಡಿ ತೆರೆಯ ಮೇಲೆ ಯಶಸ್ವೀ ಜೋಡಿ ಎನಿಸಿಕೊಂಡಿದೆ. ದೇವದಾಸ್ ಚಿತ್ರದಲ್ಲಿ ಇವರಿಬ್ಬರನ್ನೂ ಪ್ರೇಕ್ಷಕರು ಅದೆಷ್ಟು ಇಷ್ಟಪಟ್ಟಿದ್ದಾರೆ ಎಂದರೆ ಅವರಿಬ್ಬರ ಚಿತ್ರಕ್ಕಾಗಿ ಜನ ಹಾತೊರೆಯುತ್ತಾರೆ. ಈಗ ಮತ್ತೊಮ್ಮೆ ಈ ಜೋಡಿ ಒಟ್ಟಾಗಿ ತೆರೆಯ ಮೇಲೆ ಬರಲಿದ್ದಾರೆ.

  ಕಾದು ಕುಳಿತಿರುವ ಜನರಿಗೆ ಮತ್ತೊಮ್ಮೆ ಆ ಭಾಗ್ಯ ಲಭಿಸಲಿದೆ. ಎಆರ್ ಮುರುಗದಾಸ್ ತಮಿಳು ಚಿತ್ರ 'ರಮಣ' ಇದೀಗ ಹಿಂದಿಯಲ್ಲಿ ರೀಮೇಕ್ ಆಗುತ್ತಿದ್ದು, ಅದರಲ್ಲಿ ಶಾರುಖ್ ಮತ್ತು ಐಶೂ ನಟಿಸಲಿದ್ದಾರೆ. ಬಾಲಿವುಡ್ ನಲ್ಲಿ ಈ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ಮಾಡಲಿದ್ದು ಈಗಾಗಲೇ ಶಾರುಖ್ ಮತ್ತು ಐಶೂಗೆ ಬನ್ಸಾಲಿ ಆಫರ್ ನೀಡಿಯಾಗಿದೆ.

  ಆದರೆ ಶಾರುಖ್ ಜೊತೆ ಐಶೂ ರಮಣ್ ರೀಮೇಕ್ ನಲ್ಲಿ ಜೋಡಿಯಾಗುತ್ತಿಲ್ಲ, ಬದಲಿಗೆ ಆ ಚಿತ್ರ ಬಾಜಿರಾವ್ ಎಂಬ ಸುದ್ದಿಯೂ ಹಬ್ಬಿದೆ. ಆದರೆ ಶಾರುಖ್ ಮತ್ತು ಐಶೂ ಒಟ್ಟಾಗಿ ನಟಿಸಲಿರುವುದು ಪಕ್ಕಾ ಆಗಿದೆ. ಹಾಗಾದರೆ ಚಿತ್ರ ಯಾವುದು? ಸಂಜಯ್ ಲೀಲಾ ಬನ್ಸಾಲಿ ಯಾವ ಚಿತ್ರದಲ್ಲಿ ಅವರಿಬ್ಬರನ್ನೂ ಸೇರಿಸಲಿದ್ದಾರೆ? ಸದ್ಯದಲ್ಲೇ ತಿಳಿಯಲಿದೆ. (ಏಜೆನ್ಸೀಸ್)

  English summary
  Bollywood jodi Aishwarya Rai Bachchan and Shahrukh Khan might get casted in AR Murugadoss Bollywood remake of Tamil film Ramana.
  Friday, January 6, 2012, 12:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X