»   »  ದೀಪಿಕಾ, ಲಾರಾದತ್ತ ನಡುವೆ ಕೋಳಿ ಜಗಳ!

ದೀಪಿಕಾ, ಲಾರಾದತ್ತ ನಡುವೆ ಕೋಳಿ ಜಗಳ!

Subscribe to Filmibeat Kannada

ಲಾರಾದತ್ತಾಗೆ ಏನಾಗಿದೆಯೋ ಏನೋ ಗೊತ್ತಿಲ್ಲವಾದರೂ ಪ್ರತಿ ಸಿನಿಮಾ ವಿಷಯದಲ್ಲೂ ಸಹ ನಟಿಯರೊಂದಿಗೆ ಮಾತಿನ ಕಾದಾಟ, ಗುದ್ದಾಟ ನಡದೇ ಇದೆ. ಮೊನ್ನೆ ಮೊನ್ನೆ ಸುಶ್ಮಿತಾಸೇನ್ ರೊಂದಿಗೆ ಜಗಳವಾಡಿದ ಲಾರಾ ತೀರಾ ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಜತೆ ಕೋಳಿ ಜಗಳ ಶುರು ಮಾಡಿದ್ದಾರೆ.

ದೀಪಿಕಾ ಮತ್ತು ಲಾರಾದತ್ತ ಜತೆಯಾಗಿ 'ಹೌಸ್ ಫುಲ್' ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜಿಯಾ ಖಾನ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಚಿತ್ರದ ನಾಯಕ ನಟ. ಈ ಚಿತ್ರವನ್ನು ಸಾಜಿದ್ ಖಾನ್ ನಿರ್ಮಿಸುತ್ತಿದ್ದಾರೆ. ಆದರೆ ಈ ನಾಯಕಿಯರನ್ನು ಸಂಭಾಳಿಸುವುದೇ ಅವರಿಗೆ ದೊಡ್ಡ ತಲೆನೋವಾಗಿದೆಯಂತೆ!

ಪಾತ್ರಗಳ ಪ್ರಾಧಾನ್ಯತೆ ವಿಷಯದಲ್ಲಿ ಇವರಿಬ್ಬರೂ ಹಾವು, ಮುಂಗಸಿಯಂತೆ ಕಿತ್ತಾಡುತ್ತಿದ್ದಾರೆ! ದೀಪಿಕಾಗೆ ಯುಗಳಗೀತೆಗಳೊಂದಿಗೆ ಉತ್ತಮ ಸನ್ನಿವೇಶಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಆದರೆ ಲಾರಾಗೆ ಕೆಲವು ಮುಖ್ಯ ಸನ್ನಿವೇಶಗಳೊಂದಿಗೆ ಹಾಸ್ಯ ಪ್ರಧಾನ ಪಾತ್ರ. ಅಸಲಿ ಸಮಸ್ಯೆ ಶುರುವಾಗಿದ್ದೇ ಇಲ್ಲಿ.

ಇವರಿಬ್ಬರೂ ತಮ್ಮತಮ್ಮ ಪಾತ್ರಗಳ ಬಗ್ಗೆ ದೊಡ್ಡದಾಗಿ ಹೇಳಿಕೊಂಡು ತಿರುಗುತ್ತಿದ್ದಾರಂತೆ. ಆದರೆ ಲಾರಾ ಒಂದಡಿ ಮುಂದೆ ಹಾಕಿ ಚಿತ್ರದ ಮುಖ್ಯ ನಾಯಕಿ ನಾನೇ...ದೀಪಿಕಾ, ಜಿಯಾ ಖಾನ್ ರದ್ದು ಏನಿದ್ದರೂ ಸೆಕೆಂಡ್, ಥರ್ಡ್ ಹೀರೋಯಿನ್ಸ್ ಪಾತ್ರ ಎಂದು ಹೇಳಿಕೊಂಡಿದ್ದಾರಂತೆ.

ಈ ಘಟನೆಗಳಿಂದ ದೀಪಿಕಾ ಮತ್ತು ಜಿಯಾಖಾನ್ ಬೇಸತ್ತಿದ್ದ್ದು ಲಾರಾದತ್ತ ಮೇಲೆ ಕಿಡಿಕಾರುತ್ತಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಮುಗಿಯುವವರೆಗೂ ಈ ಮೂವರು ನಾಯಕಿಯರನ್ನು ಚಿತ್ರದ ನಿರ್ದೇಶಕ ಹೇಗೆ ಸಂಭಾಳಿಸುತ್ತಾರೋ ಆ ದೇವರೇ ಬಲ್ಲ ಎಂದು ಹಿಂದಿ ಚಿತ್ರರಂಗ ನಿಬ್ಬೆರಗಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada