For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್ ಗೆದ್ದ ಲೀಸಾ ರೇ ಹಸಮಣೆ ಏರಲು ಸಿದ್ಧ

  By Mahesh
  |

  ಹಾಲಿವುಡ್, ಕಾಲಿವುಡ್, ಬಾಲಿವುಡ್ ನಟಿ, ರೂಪದರ್ಶಿ, ನಿರೂಪಕಿ ಲೀಸಾ ರೇ ತನ್ನ ಬದುಕಿನ ಸಂತಸದ ದಿನಗಳನ್ನು ಕಾಣುತ್ತಿದ್ದಾಳೆ. ಜೀವ ಹಿಂಡುವ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಲೀಸಾ ಈಗ ಹಸಮಣೆ ಏರಲು ಸಿದ್ಧತೆ ನಡೆಸಿದ್ದಾಳೆ.

  ಜೇಸನ್ ದೆಹ್ನಿ ಜೊತೆ ನಿಶ್ಚಿತಾರ್ಥವಾಗುತ್ತಿರುವುದಾಗಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವೀಟರ್ ನಲ್ಲಿ ಇತ್ತೀಚೆಗೆ ಲೀಸಾ ಟ್ವೀಟ್ ಮಾಡಿದ್ದಳು. ಲೀಸಾಳ ಬಳಿ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ. 39 ವರ್ಷದ ಲೀಸಾಳನ್ನು ಮೆಚ್ಚಿ ಜೇಸನ್ ಪ್ರೊಪೋಸ್ ಮಾಡಿದನಂತೆ. ಲೀಸಾ ಅದಕ್ಕೆ ಒಪ್ಪಿದಳಂತೆ.

  'Delicious update': ENGAGED to the love of my life. Jason Dehni proposed in Napa. #happiestdayever (sic)' ಎಂದು ಲೀಸಾ ಟ್ವೀಟ್ ಮಾಡಿದ್ದಳು.

  2009ರಲ್ಲಿ multiple myeloma ದಿಂದ ಬಳಲುತ್ತಿದ್ದ ಲೀಸಾಳಿಗೆ ತನಗೆ ಬಂದಿರುವುದು ಅಪರೂಪದ ಕ್ಯಾನ್ಸರ್ ಎಂದು ತಿಳಿದಾಗ ಬದುಕೇ ಶೂನ್ಯ ಎನಿಸಿಬಿಟ್ಟಿತ್ತು. ಪ್ಲಾಸ್ಮಾ ಸೆಲ್ಸ್ ಮೇಲೆ ಅರ್ಬುದ ದಾಳಿ ತಡೆಗಟ್ಟಲು ಸ್ಟೆಮ್ ಸೆಲ್ ಚಿಕಿತ್ಸೆಗೆ ಲೀಸಾ ಮೊರೆಹೊಕ್ಕಳು. ಪರಿಣಾಮ 2010ರಲ್ಲಿ ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖಳಾಗಿ ನಲಿಯುವಂತಾಯಿತು.

  ಹಳೆ ಗೆಳೆಯ ಫ್ಯಾಷನ್ ಛಾಯಾಗ್ರಾಹಕ ಪೊಲೊ ಜಮ್ಬಲ್ಡಿ ಹಾಗೂ ಕೆನಡಾದ ಉದ್ಯಮಿ ಬ್ರೆಟ್ ವಿಲ್ಸನ್ ಜೊತೆ ಗೆಳತನಕ್ಕೂ ಮೀರದ ಸಂಬಂಧವನ್ನು ಲೀಸಾ ಕಳೆದುಕೊಂಡಿದ್ದಳು. ಲೀಸಾ ಈಗ ಜೇಸನ್ ಜೊತೆ ತನ್ನ ಬದುಕನ್ನು ರೂಪಿಸುವ ಕನಸು ಕಾಣುತ್ತಿದ್ದಾಳೆ.

  2001 ವಿಕ್ರಮ್ ಭಟ್ ನಿರ್ದೇಶನ ಕಸೂರ್ ಚಿತ್ರದಲ್ಲಿ ನಟಿಸಿದ್ದ ಲೀಸಾ ಹೆಚ್ಚಾಗಿ ಗುರುತಿಸಿಕೊಂಡಿದ್ದು, ದೀಪಾ ಮೆಹ್ತಾರ 'ವಾಟರ್' ಚಿತ್ರ ಮೂಲಕ. ಅದಕ್ಕೂ ಮುನ್ನ ನಿರೂಪಕಿಯಾಗಿ, ರೂಪದರ್ಶಿಯಾಗಿ ಅನೇಕ ಜಾಹೀರಾತುಗಳಲ್ಲಿ ಮಿಂಚಿದ್ದ ಲೀಸಾ ಬದುಕಲ್ಲಿ ಹೊಸಬೆಳಕು ಮೂಡಿದೆ.

  English summary
  Model turned actor Lisa Ray is getting engaged to beau Jason Dehni. Bollywood Actress Lisa announced this on micro blogging site Twitter. She was diagnosed with multiple myeloma but later she battled it and announced she is cancer-free.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X