»   » 'ಪಾ'; ಅರುಂಧತಿ ನಾಗ್ ಪಾತ್ರಕ್ಕೆ ಅದ್ಭುತ ಪ್ರತಿಕ್ರಿಯೆ

'ಪಾ'; ಅರುಂಧತಿ ನಾಗ್ ಪಾತ್ರಕ್ಕೆ ಅದ್ಭುತ ಪ್ರತಿಕ್ರಿಯೆ

Posted By:
Subscribe to Filmibeat Kannada

ಕನ್ನಡದ ಹೆಸರಾಂತ ನಟಿ, ರಂಗಭೂಮಿ ಕಲಾವಿದೆ ಅರುಂಧತಿನಾಗ್ ಬಾಲಿವುಡ್ ಚಿತ್ರಜಗತ್ತಿನ ಗಮನವನ್ನು ಮತ್ತೊಮ್ಮೆ ಸೆಳೆದಿದ್ದಾರೆ. ಅಮಿತಾಬ್ ಬಚ್ಚನ್ ಗೆ ಅಜ್ಜಿಯಾಗಿ ವಿದ್ಯಾಬಾಲನ್ ಗೆ ತಾಯಿಯಾಗಿ 'ಪಾ' ಚಿತ್ರದಲ್ಲಿ ಅರುಂಧತಿ ನಾಗ್ ಅಮೋಘ ಅಭಿನಯ ನೀಡಿರುವ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ.

'ಪಾ' ಚಿತ್ರ ಬಿಡುಗಡೆಯಾಗುವವರೆಗೂ ಅರುಂಧತಿ ನಾಗ್ ಚಿತ್ರದಲ್ಲಿರುವ ಬಗ್ಗೆ ಗೊತ್ತೇ ಆಗಿರಲಿಲ್ಲ. ಇದೀಗ ಚಿತ್ರ ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಪ್ರಿತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಹನ್ನೆರಡು ವಯಸ್ಸಿನ ಬಾಲಕನ ಪಾತ್ರದಲ್ಲಿ ಅಮಿತಾಬ್ ಕಾಣಿಸುತ್ತಾರೆ. ವಯಸ್ಸು ಎಳೆಯದಾದರೂ ದೇಹ ಮಾಗಿದ ಮನುಷ್ಯನದು. ಇಂತಹ ಪಾತ್ರದಲ್ಲಿ ಅಮಿತಾಬ್ ಪರಕಾಯ ಪ್ರವೇಶ ಮಾಡಿದ್ದಾರೆ.

ಅರುಂಧತಿ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಚಿತ್ರದ ನಿರ್ದೇಶಕ ಆರ್.ಬಾಲ್ಕಿ ಅವರ ಅಭಿಮಾನಿ ನಾನು. ಅವರ 'ಚೀನಿ ಕುಮ್' ಚಿತ್ರ ನನಗೆ ಬಹಳ ಇಷ್ಟ. ಹಾಗಾಗಿ ' ಪಾ' ಚಿತ್ರವನ್ನು ಒಪ್ಪಿಕೊಂಡೆ. ಚಿತ್ರಕತೆಯನ್ನು ಬಾಲ್ಕಿ ಅವರು ನನಗೆ ಕಳುಹಿಸಿದರು. ಅದೊಂದು ರೀತಿ ಕನಸಿನಂತೆ ಇತ್ತು.ಯಾರೊಬ್ಬರ ಶಿಫಾರಸು ಇಲ್ಲದೆಯೇ ನನಗೆ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು ಎಂದು ಪ್ರತಿಕ್ರಿಯಿಸಿದ್ದಾರೆ.

ಬಹುತೇಕ ಚಿತ್ರಗಳಲ್ಲಿನ ಅಮ್ಮಂದಿರಂತೆ 'ಪಾ' ಚಿತ್ರದ ಪಾತ್ರವಿಲ್ಲ. ಈ ವಿಭಿನ್ನ ಪಾತ್ರಕ್ಕಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎನ್ನುತ್ತಾರೆ ಅವರು. ಒಂದು ರೀತಿ ಕಟ್ಟುಪಾಡುಗಳಿಲ್ಲದ, ಮಗಳ ಬೆನ್ನಿಗೆ ನಿಲ್ಲುವ ಅಮ್ಮನ ಪಾತ್ರ. ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ ವಿದ್ಯಾ ಬಾಲನ್ ಆಗಲಿ ಅಮಿತಾಬ್ ಬಗ್ಗೆಯಾಗಲಿ ಗೊತ್ತಿರಲಿಲ್ಲ. ಅಮಿತಾಬ್ ಅವರಂತೂ ಚಿತ್ರದಲ್ಲಿ ಸುನಾಯಾಸವಾಗಿ ನಟಿಸುವಂತೆ ಮಾಡಿಬಿಡುತ್ತಾರೆ. ಅವರ ಕೆಲಸವಂತು ಅತ್ಯದ್ಭುತ ಎಂದು ಅರುಂಧತಿ ನಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada