»   »  ಅಕ್ಷಯ್ ಜತೆ ನಟಿಸಲು ನಿರಾಕರಿಸಿದಅಸಿನ್!

ಅಕ್ಷಯ್ ಜತೆ ನಟಿಸಲು ನಿರಾಕರಿಸಿದಅಸಿನ್!

Posted By:
Subscribe to Filmibeat Kannada
Asin opts out of Akki’s film
'ಗಜಿನಿ' ಚಿತ್ರ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕೇರಳ ಎಕ್ಸ್ ಪ್ರೆಸ್ ಅಸಿನ್ ಗೆ ಬಾಲಿವುಡ್ ನಲ್ಲಿ ಅವಕಾಶಗಳು ಹೆಚ್ಚಾಗಿವೆ. ಆದರೆ ಬಂದ ಎಲ್ಲ ಚಿತ್ರಗಳನ್ನು ಆಕೆ ಒಪ್ಪಿಕೊಳ್ಳುತ್ತಿಲ್ಲವಂತೆ. ಕಾರಣ ಅಸಿನ್ ತಂದೆ ವಿಧಿಸುವ ಷರತ್ತುಗಳು!

ಅಸಿನ್ ತಂದೆ ಜೋಸೆಫ್ ಮುಂದಿಡುತ್ತಿರುವ ಬೇಡಿಕೆಗಳ ಪಟ್ಟಿಯನ್ನು ನೋಡಿ ನಿರ್ಮಾಪಕರು ಹೌಹಾರುತ್ತ್ತಿದ್ದಾರಂತೆ. ಪ್ರಸ್ತುತ 'ಲಂಡನ್ ಡ್ರೀಮ್ಸ್ 'ಚಿತ್ರದಲ್ಲಿ ಅಸಿನ್ ನಟಿಸುತ್ತಿದ್ದಾರೆ. ಕಾಲ್ ಶೀಟ್ ಗಾಗಿ ನಿರ್ದೇಶಕ ಪ್ರಿಯದರ್ಶನ್ ಆಕೆಯನ್ನು ಸಂಪರ್ಕಿಸಿದರೆ, ಕತೆಯಲ್ಲಿ ನನ್ನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆ ತಿಳಿಸಿ ಎಂದು ಕೇಳಿದರಂತೆ.

''ಈ ಪಾತ್ರ ಅಕ್ಷಯ್ ಕುಮಾರ್ ಸುತ್ತಲೂ ಸುತ್ತುತ್ತದೆ. ಹಾಗೆಯೇ ಚಿತ್ರದಲ್ಲಿ ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಸಹ ಇದ್ದಾರೆ. ಅವರೊಂದಿಗೆ ನೀನು ಸಹಾ...''ಎಂದು ಮಾತು ಮುಗಿಸುವ ಮುನ್ನವೇ ಕೇರಳ ಕುಟ್ಟಿ ಎದ್ದು ನಿಂತರಂತೆ! ಅಕ್ಷಯ್ ಆದರೆ ಏನು ದೊಡ್ಡ ವಿಷಯಾನಾ? ಇಲ್ಲಾ ನಾನು ನಟಿಸುತ್ತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರಂತೆ. ಪ್ರಿಯದರ್ಶನ್ ಗೆ ಭೂಮಿ ಬಾಯ್ತೆರೆದಂತ ಅನುಭವ.

ಹೇಗೋ ಸಮಾಧಾನ ಮಾಡಿಕೊಂಡು, ''ಅಕ್ಷಯ್ ಇದ್ದರೇನೆ ಸಿನಿಮಾಗೆ ಕ್ರೇಜ್. ಆಗ ನಿಮಗೂ ದುಪ್ಪಟ್ಟು ಕ್ರೇಜ್ ಬರುತ್ತದೆ'' ಎಂದು ಒಪ್ಪಿಸಲು ಪ್ರಯತ್ನಿಸಿ ಕಡೆಗೆ ವಿಫಲರಾಗಿದ್ದಾರೆ. ಸಲ್ಮಾನ್ ನೊಂದಿಗೆ ನಾನು ಆದಷ್ಟು ಬೆರೆಯುವುದಿಲ್ಲ. ಹೆಚ್ಚು ಜಾಗ್ರತ್ತ್ತೆ ವಹಿಸುತ್ತೇನೆ ಎಂದು ಹೇಳುತ್ತಿದ್ದ ಅಸಿನ್ ಗೆ ಸಲ್ಮಾನ್ ಈಗಾಗಲೇ ಬಂಗಲೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾನಂತೆ. ಆದರೆ ಅಸಿನ್ ಮಾತ್ರ ಇದೆಲ್ಲಾ ಶುದ್ಧ ಸುಳ್ಳು ಎಂದು ಸಾರಾಸಗಟಗಾಗಿ ತಳ್ಳಿಹಾಕುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸಲ್ಮಾನ್ ಖಾನ್ ನನ್ನ ಸಹ ನಟ ಮಾತ್ರ: ಅಸಿನ್
ರಣಬೀರ್ ನೊಂದಿಗೆ ಅವಕಾಶ ಗಿಟ್ಟಿಸಿದ ಅಸಿನ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada