»   » ನಯನ ಸುಂದರಿ ಬಿಪಶಾ ಬಸು ಹುಟ್ಟುಹಬ್ಬ

ನಯನ ಸುಂದರಿ ಬಿಪಶಾ ಬಸು ಹುಟ್ಟುಹಬ್ಬ

Subscribe to Filmibeat Kannada

ಸುಂದರ ಕಂಗಳ ಒಡತಿ ಬಿಪಶಾ ಬಸು 32ರ ಹರೆಯಕ್ಕೆ ಜಿಗಿದಿದ್ದಾರೆ. ಈಕೆ ಬರೀ ಸುಂದರ ಕಂಗಳಿಗಷ್ಟೇ ಸೀಮಿತವಾಗಿಲ್ಲ. ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆಯರ ಸಾಲಿನಲ್ಲೂ ಸ್ಥಾನ ಪಡೆದಿದ್ದಾರೆ. ಬಿಪಶಾರಿಗೆ 'ಬೊನ್ನಿ' ಎಂಬ ಮುದ್ದಾದ ಅಡ್ಡಹೆಸರು ಇದೆ. ಬಿಪಶಾ ಎಂದರೆ 'ಗಾಢವಾದ ಕಾಮನೆ' ಎಂಬ ಅರ್ಥವೂ ಉಂಟಂತೆ.

ತನ್ನ ಹದಿನೇಳನೆ ವಯಸ್ಸಿನಲ್ಲೇ ಖ್ಯಾತ ಫೋರ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಬಿಪಶಾ ಪ್ರವರ್ಧಮಾನಕ್ಕೆ ಬಂದಿದ್ದರು. ಬೆಳ್ಳಿಪರದೆಯನ್ನು ಅಲಂಕರಿಸುವುದಕ್ಕೂ ಮುನ್ನ ಸೋನು ನಿಗಂ ಅವರ ಆಲ್ಬಂನಲ್ಲಿ ಬಿಪಶಾಗೆ ಸ್ಥಾನ ಸಿಕ್ಕಿತ್ತು. 'ರಾಜ್' ಮತ್ತು 'ಜಿಸ್ಮ್' ಬಿಪಾಶಾರಿಗೆ ಹೆಸರು ತಂದಕೊಟ್ಟ ಚಿತ್ರಗಳು.

ಪುಸ್ತಕ ಓದುವುದು, ನೃತ್ಯ ಹಾಗೂ ತಾಯಿಗೆ ಒಳಾಂಗಣ ವಿನ್ಯಾಸದಲ್ಲಿ ಸಹಾಯ ಮಾಡುವುದು ಬಿಪಾಶಾ ಹವ್ಯಾಸಗಳು. ಬಣ್ಣಗಳಲ್ಲಿ ನಸುಗೆಂಪು, ತಿಂಡಿಯಲ್ಲಿ ಗಜರ್ ಕ ಹಲ್ವಾ, ಬಿಡುವಿನ ದಿನಗಳಲ್ಲಿ ಪ್ಯಾರಿಸ್, ನಟರಲ್ಲಿ ಜಾನ್ ಗ್ರಿಶಮ್ ಬಿಪಶಾಗೆ ಇಷ್ಟವಂತೆ.

ಸದ್ಯಕ್ಕೆ ಬಾಲಿವುಡ್ ನಟ ಜಾನ್ ಅಬ್ರಹಾಂಗೆ ಹತ್ತಿರವಾಗಿದ್ದಾರೆ.ಇತ್ತೀಚೆಗೆ ಇಬರಿಬ್ಬರೂ ದುರ್ಗಾಪೂಜೆಗೆ ತೆರಳಿದ್ದಾಗ ಕಿಡಿಗೇಡಿಯೊಬ್ಬ ಬಿಪಶಾ ಬಸು ಎದೆ ತಡವಿ ಪೇರಿ ಕಿತ್ತಿದ್ದ. ಈ ಘಟನೆ ಜಾನ್ ಮತ್ತು ಬಿಪಶಾರನ್ನು ಕೊಂಚ ವಿಚಲಿತಗೊಳಿಸಿತ್ತು. ಈ ಮಧ್ಯೆ ಈಕೆಯ ಬೇಡಿಕೆ ಬಾಲಿವುಡ್ ಚಿತ್ರಜಗತ್ತಿನಲ್ಲಿ ದಿನೇ ದಿನೆ ಕುಸಿಯುತ್ತಿರುವುದು, ಸಾಲು ಸಾಲು ಚಿತ್ರಗಳು ಬಾಕ್ಸಾಫೀಸಲ್ಲಿ ಮಕಾಡೆ ಮಲಗುತ್ತಿರುವುದು ಸುಳ್ಳಲ್ಲ. 2010ರಲ್ಲಿ ಆಕೆಗೆ ಉತ್ತಮ ಪಾತ್ರಗಳು ಸಿಗಲಿ ಎಂದು ಹಾರೈಸೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada