»   » ಅವಂತಿಕಾ ಕೈಹಿಡಿಯಲಿದ್ದಾನೆ ಇಮ್ರಾನ್ ಖಾನ್!

ಅವಂತಿಕಾ ಕೈಹಿಡಿಯಲಿದ್ದಾನೆ ಇಮ್ರಾನ್ ಖಾನ್!

Posted By:
Subscribe to Filmibeat Kannada

ಬಾಲಿವುಡ್ ನಟ ಇಮ್ರಾನ್ ಖಾನ್ ಗೆ ಕಂಕಣಬಳ ಕೂಡಿಬಂದಿದೆ. 'ಐ ಹೇಟ್ ಲವ್ ಸ್ಟೋರೀಸ್' ಚಿತ್ರದ ಗೆಲುವಿನ ಸಂತಸದ ಜೊತೆಗೆ ಮದುವೆ ಸುದ್ದಿಯೂ ತೇಲಿಬಂದಿದೆ. ಐ ಹೇಟ್ ಲವ್ ಸ್ಟೋರೀಸ್ ಚಿತ್ರದ ಮೂಲಕ ಲಕ್ಷಾಂತರ ಹುಡುಗಿಯರ ಹೃದಯ ಕದ್ದ ಚೋರ ಇಮ್ರಾನ್ ಖಾನ್.

ತನ್ನ ಬಹುಕಾಲದ ಗೆಳತಿ ಅವಂತಿಕ ಮಲಿಕ್ ರನ್ನು ಇಮ್ರಾನ್ ಮದುವೆಯಾಗಲಿದ್ದಾನೆ. ಜನವರಿ 2011ರ ವೇಳೆಗೆ ಇಮ್ರಾನ್ ನಿಖಾ ನಡೆಯಲಿದೆ ಎನ್ನುತ್ತವೆ ಕುಟುಂಬ ಮೂಲಗಳು. ರಿಜಿಸ್ಟರ್ಡ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕ ಸರಳವಾಗಿ ವಿವಾಹವಾಗಲಿದ್ದಾರೆ ಇಮ್ರಾನ್.

ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಳ್ಳದೆ ಕೇವಲ ಬೆರಳೆಣಿಕೆಯಷ್ಟು ಬಂಧುಮಿತ್ರರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಳ್ಳುವುದಾಗಿ ಇಮ್ರಾನ್ ತಿಳಿಸಿದ್ದಾರೆ. ಕಳೆದ ವರ್ಷವೆ ನಿಶ್ಚಿತಾರ್ಥವನ್ನು ಇಮ್ರಾನ್ ಪ್ರಕಟಿಸಿದ್ದ. ಈಗಾಗಲೆ ಮದುವೆ ಸಿದ್ಧತೆಗಳು ನಡೆಯುತ್ತಿವೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada