»   » ವಿದ್ಯಾಬಾಲನ್ ಎದೆಯ ಉಬ್ಬುತಗ್ಗಿಗೆ ಪಡ್ಡೆಗಳು ಉಕ್ಕಿರಿಬಿಕ್ಕಿರಿ

ವಿದ್ಯಾಬಾಲನ್ ಎದೆಯ ಉಬ್ಬುತಗ್ಗಿಗೆ ಪಡ್ಡೆಗಳು ಉಕ್ಕಿರಿಬಿಕ್ಕಿರಿ

Posted By:
Subscribe to Filmibeat Kannada

ಸದ್ಯಕ್ಕೆ ಬಾಲಿವುಡ್‌ನಲ್ಲಿ ಸಖತ್ ಹಾಟ್ ಬೆಡಗಿಯಾಗಿ ಹೊರಹೊಮ್ಮಿರುವ ವಿದ್ಯಾಬಾಲನ್ ಪಡ್ಡೆಗಳನ್ನು ಉಕ್ಕಿರಿಬಿಕ್ಕಿರಿಗೊಳಿಸಿದ ಪ್ರಸಂಗ ಮುಂಬೈನಲ್ಲಿ ನಡೆದಿದೆ. ತಮ್ಮ ಭಾರಿ ನಿರೀಕ್ಷೆಯ 'ದಿ ಡರ್ಟಿ ಪಿಕ್ಚರ್' ಚಿತ್ರದ ಧ್ವನಿಸುರುಳಿ ಇತ್ತೀಚೆಗೆ ಬಿಡುಗಡೆ ಕಂಡಿತು. ಈ ಸಂದರ್ಭದಲ್ಲಿ "ಊ ಲಾ ಲಾ" ಎಂದು ಕುಣಿದು ರಸಿಕರ ಹೃದಯ ಸೂರೆಗೊಂಡಿದ್ದಾರೆ ವಿದ್ಯಾ.


ಆಡಿಯೋ ರಿಲೀಸ್ ಎಂದರೆ ಸಾಮಾನ್ಯವಾಗಿ ಯಾವುದೋ ಪಂಚತಾರಾ ಹೋಟೆಲ್‌ನ ಪಂಚತಾರಾ ವೈಭೋಗಗಳ ನಡುವೆ ನಡದು ಹೋಗುವ ಸಮಾರಂಭ. ಆದರೆ ಚಿತ್ರದ ನಿರ್ಮಾಪಕ ಏಕ್ತಾ ಕಪೂರ್ ಮುಂಬೈನ ಮಾಲ್‌ವೊಂದರಲ್ಲಿ ಆಡಿಯೋವನ್ನು ಬಿಡುಗಡೆ ಮಾಡಿ ಎಲ್ಲರ ಗಮನಸೆಳೆಯುವಂತೆ ಮಾಡಿದ್ದಾರೆ.

ವಿದ್ಯಾ ಬಾಲನ್, ನಾಸಿರುದ್ದೀನ್ ಶಾ, ಇಮ್ರಾನ್ ಹಸ್ಮಿ, ತುಷಾರ್ ಕಪೂರ್ ಇವರೆಲ್ಲಾ ವೇದಿಕೆಗೆ ಬರುತ್ತಿದ್ದಾರೆ ಎಂಬ ಸುದ್ದಿ ಗೊತ್ತಾದದ್ದೇ ತಡ ಅಂದಾಜು 2,000 ಮಂದಿ ಜಮಾಯಿಸಿದ್ದಾರೆ. ಎಂಬತ್ತರ ದಶಕದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ ವಿದ್ಯಾ ವೇದಿಕೆ ಮೇಲೆ "ಊ ಲಾ ಲಾ" ಎಂದು ಕುಣಿಯುತ್ತಿದ್ದರೆ ನೆರೆದವರು ಮೈಮರೆತಿದ್ದರು.

ವಿದ್ಯಾ ಕುಣಿಯುತ್ತಾ ಕುಣಿಯುತ್ತಾ ತಮ್ಮ ಮೈಮಾಟವನ್ನು ಪ್ರದರ್ಶಿಸಿ ಪಡ್ಡೆಗಳ ಮೈಮನಗಳನ್ನು ಪುಳಕಗೊಳಿಸಿದರು. ಒಂದು ಹಂತದಲ್ಲಂತೂ ವಿದ್ಯಾರ ಎದೆಯ ಭಾಗ ಹಾಗೆಯೇ ನೆರೆದವರ ಕಡೆಗೆ ಒಂದು ಇಣುಕು ಹಾಕಿದ್ದೇ ತಡ ಸಭೆ ಉಕ್ಕಿರಿಬಿಕ್ಕಿರಿಯಾಗಿತ್ತು.

ವಿದ್ಯಾರ ಲೈವ್ ಶೋ ನೋಡಿದವರು ಇನ್ನೂ ಈ ಆಘಾತದಿಂದ ಹೊರಬಂದಿಲ್ಲವಂತೆ. ಅಷ್ಟರಲ್ಲೇ ವಿದ್ಯಾ ನಿರ್ದೇಶಕರ ಪಾದಕ್ಕೆ ಎರಗುವ ಮೂಲಕ ಮತ್ತೊಮ್ಮೆ ತಮ್ಮ ಎದೆಯ ಉಬ್ಬುತಗ್ಗುಗಳನ್ನು ಪ್ರದರ್ಶಿಸಿ ನೆರೆದವರ ಗುಂಡಿಗೆ ಝಲ್ ಎನ್ನಿಸಿದರು. ವಿದ್ಯಾರ ಡ್ಯಾನ್ಸ್ ನೋಡಿ ದಂಗಾಗಿರುವವರು 'ದಿ ಡರ್ಟಿ ಪಿಕ್ಚರ್'ಗಾಗಿ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. (ಏಜೆನ್ಸೀಸ್)

English summary
Vidya Balan was oomph personified as she danced to the tunes of Ooh la la at The Dirty Picture music launch on Friday. Vidya danced without any inhibition and flaunted her cleavage to the maximum.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada