»   » ಐಶ್ವರ್ಯ ರೈಗಿಂತಲೂ ಸುಂದರಿ ಕತ್ರಿನಾ ಕೈಫ್!

ಐಶ್ವರ್ಯ ರೈಗಿಂತಲೂ ಸುಂದರಿ ಕತ್ರಿನಾ ಕೈಫ್!

Subscribe to Filmibeat Kannada
Katrina Kaif voted sexiest Asian woman
ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರಿಗೆ ಮತ್ತೊಂದು ಪ್ರಶಸ್ತಿ ವರಿಸಿದೆ. ಏಷ್ಯಾ ಖಂಡಲ್ಲೇ ಅತ್ಯಂತ ಸೆಕ್ಸಿಯಸ್ಟ್ ಮಹಿಳೆ ಎಂಬ ಅಗ್ರ ಪಟ್ಟ ಕತ್ರಿನಾರನ್ನು ಅಲಂಕರಿಸಿದೆ.

ಈಸ್ಟ್ರನ್ ಐ ಎಂಬ ಬ್ರಿಟಿಷ್ ಪತ್ರಿಕೆ ನಿರ್ವಹಿಸಿದ ಸಮೀಕ್ಷೆಯಲ್ಲಿ ಕತ್ರಿನಾ ಪ್ರಥಮ ಸ್ಥಾನ ಪಡೆಡಿದ್ದಾರೆ. ಕಳೆದ ವರ್ಷ ಪ್ರಥಮ ಸ್ಥಾನ ಗಳಿಸಿದ್ದ ಬಿಪಾಶಾ ಬಸು ಈಗ ಎರಡನೆ ಸ್ಥಾನಕ್ಕೆ ಸರಿಸಿದ್ದಾರೆ. ಮೂರನೆ ಅತ್ಯಂತ ಸೆಕ್ಸಿಯಸ್ಟ್ ಮಹಿಳೆಯ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ ಇದ್ದಾರೆ. ನಾಲ್ಕನೆಯ ಸ್ಥಾನವನ್ನು ಕರೀನಾ ಕಪೂರ್ ಅಲಂಕರಿಸಿದ್ದಾರೆ. ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರಿಗೆ ಇಲ್ಲಿ ಏಳನೇ ಸ್ಥಾನ.

ಈಸ್ಟ್ರನ್ ಐ ಪತ್ರಿಕೆ ಸಂಪಾದಕ ಹೇಮಂತ್ ವರ್ಮಾ ಮಾತನಾಡುತ್ತಾ, ಕತ್ರಿನಾ ಅವರದು ಸಹಜವಾದ ಸೌಂದರ್ಯ. ಈ ಕಾರಣಕ್ಕಾಗಿಯೇ ಆಕೆ ಬಾಲಿವುಡ್ ನಲ್ಲಿ ಕಡಿಮೆ ಸಮಯದಲ್ಲೇ ಅತ್ಯಂತ ಎತ್ತರಕ್ಕೆ ಏರಿದರು. ಆಕೆಯ ರೂಪ ಸೌಂದರ್ಯ ಎಂಥಹವರನ್ನೂ ಆಕರ್ಷಿಸುತ್ತದೆ ಎಂದರು. ಸಲ್ಮಾನ್ ಖಾನ್ ರೊಂದಿಗೆ ಕತ್ರಿನಾ ಚಿತ್ರ 'ಯುವರಾಜ್' ಇತ್ತೀಚೆಗಷ್ಟೆ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada