For Quick Alerts
  ALLOW NOTIFICATIONS  
  For Daily Alerts

  ಕರೀನಾ ,ಸೈಫ್ ಮದುವೆ ಟ್ಯಾಬ್ಲಾಯ್ಡ್‌ನಲ್ಲಿ ಬಹಿರಂಗ

  By Staff
  |

  ನವದೆಹಲಿ, ಫೆ.8: ಬಾಲಿವುಡ್‌ ನ ಛೋಟಾ ನವಾಬ್ ಸೈಫ್ ಆಲಿಖಾನ್ ಮತ್ತು ಆತನ ಖಾಸಾ ಗೆಳತಿ ಕರೀನಾ ಕಪೂರ್ ಬುಧವಾರ ಗುಟ್ಟಾಗಿ ಮದುವೆಯಾಗಿರುವ ಬಗ್ಗೆ ಮುಂಬೈನ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ವರದಿ ಮಾಡಿದೆ. ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಆಲಿಖಾನ್ ಮನೆಯಲ್ಲಿ ಇವರಿಬ್ಬರ ನಿಖಾ ಪಕ್ಕಾ ಆಗಿದೆ ಎಂದು 'ದಿ ಮುಂಬೈ ಮಿರರ್' ವರದಿ ಮಾಡಿದೆ.

  ಸೈಫ್ ಮದುವೆ ವಿಚಾರವನ್ನು ಸರಾಸಗಟಾಗಿ ತಳ್ಳಿಹಾಕಿದ್ದಾರೆ. ಸೈಫ್ ಆಲಿಖಾನ್ ಹಾಗೂ ಕರೀನಾ ಕಪೂರ್ ಮದುವೆಯಾಗಿರುವ ವಿಚಾರ ಸುಳ್ಳು , ಇದೆಲ್ಲಾ ವದಂತಿ, ಕಟ್ಟುಕತೆ ನಂಬಬೇಡಿ ಎಂದು ಸೆನ್ಸಾರ್ ಮಂಡಳಿಯ ಅಧ್ಯಕ್ಷೆ, ಒಂದು ಕಾಲದ ಖ್ಯಾತನಟಿ, ಸೈಫ್‌ರ ತಾಯಿ ಶರ್ಮಿಳಾ ಠಾಗೂರ್ ಸಹಾ ಈ ಸುದ್ದಿಯನ್ನ್ನು ತಿರಸ್ಕರಿಸಿದ್ದಾರೆ.

  ಶಹೀದ್ ಕಪೂರ್ ಜೊತೆ ಕಳೆದ ನಾಲ್ಕು ವರ್ಷಗಳ ಸುದೀರ್ಘ ಪ್ರೇಮವ್ಯವಹಾರ ಮೂರು ತಿಂಗಳ ಹಿಂದಷ್ಟೇ ಮುರಿದು ಬಿದ್ದು ಸೈಫ್‌ನೊಂದಿಗೆ ಖುಲ್ಲಂಖುಲ್ಲಾ ಲವ್ ಆಯ್ತು ಕರೀನಾಗೆ. ಈ ಬಗ್ಗೆ ಪತ್ರಿಕೆಗಳಲ್ಲಿ ಗುಸುಗುಸಿನ ಪಿಸು ಮಾತುಗಳು ಅಚ್ಚಾಗುತ್ತಿದ್ದವು. ಪ್ರಸ್ತುತ ಸೈಫ್ ಆಲಿಖಾನ್ 37ರ ಗಡಿದಾಟುತ್ತಿದ್ದರೆ ಕರೀನಾ 27ರ ಗಡಿಯಲ್ಲಿ ನಿಂತಿದ್ದಾರೆ. ಇಬ್ಬರ ವಯಸ್ಸಿನ ಅಂತರ 10 ವರ್ಷಗಳು!

  ಸೈಫ್ ಆಲಿಖಾನ್ ಮುಂಬರುವ ಚಿತ್ರ 'ತಷಾನ್' ಚಿತ್ರೀಕರಣದ ವೇಳೆ ಇಬ್ಬರೂ ಜೊತೆಯಾಗಿ ಅಲೆದದ್ದು, ಕದ್ದು ಮುಚ್ಚಿ ನಾಪತ್ತೆಯಾಗುತ್ತಿದ್ದದ್ದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು.ತೀರಾ ಇತ್ತೀಚೆಗೆ ಸೈಫ್‌ನ ಈ ಚಿತ್ರದ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆಯುತ್ತಿದ್ದಾಗ ಕರೀನಾ ಗುಟ್ಟಾಗಿ ಅಲ್ಲಿಗೆ ಹೋಗಿಬಂದದ್ದು ಪತ್ರಿಕೆಗಳಲ್ಲಿ ರಟ್ಟಾಯಿತು. 'ತಷಾನ್' ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದಾರೆ. ಪ್ರಸ್ತುತ ಚಿತ್ರೀಕರಣ ಗ್ರೀಸ್ ದೇಶದಲ್ಲಿ ನಡೆಯುತ್ತಿದೆ.

  ಇವರ ಪ್ರೇಮಪ್ರಕಣ ಪತ್ರಿಕೆಗಳ ಗುಸುಗುಸು ಜಾಗವನ್ನು ಆಕ್ರಮಿಸುತ್ತಿದ್ದರೆ, ಇನ್ನು ಸುಮ್ಮನಿರುವುದರಲ್ಲಿ ಲಾಭ ಇಲ್ಲ ಅನ್ನಿಸಿ ''ಹೌದು ನಾವಿಬ್ಬರೂ ಒಬ್ಬರನ್ನೋಬ್ಬರು ಇಷ್ಟಪಟ್ಟಿದ್ದೀವಿ'' ಎಂದು ಸೈಫ್ ಪತ್ರಕರ್ತರ ಬಾಯಿ ಮುಚ್ಚಲು ಪ್ರಯತ್ನಿಸಿದ್ದ. ಆದರೂ ಹೀಗೇ ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರೇಮ ವ್ಯವಹಾರ 2007ರ ಲ್ಯಾಕ್ಮೆ ಫ್ಯಾಷನ್ ವೀಕ್‌‍ನಲ್ಲಿ ಇಬ್ಬರೂ ಕೈಕೈ ಹಿಡಿದು ಬಂದಿದ್ದು ಪತ್ರಿಕೆಗಳ ಮುಖಪುಟದಲ್ಲಿ ಬಹಿರಂಗವಾಗಿತ್ತು. ಈ ಪ್ರೇಮಿಗಳ ಜೋಡಿ ಮುಂಬೈ ಹಾಗೂ ದೆಹಲಿಯ ಪ್ರತಿಷ್ಠಿತ ರಾತ್ರಿ ಕ್ಲಬ್‌ಗಳಲ್ಲಿ ಕಾಣಿಸಿಕೊಂಡಿದ್ದು , ಸೈಫ್ ತನ್ನ ಬಲಗೈ ಮೇಲೆ "ಕರೀನಾ" ಎಂದು ದೇವನಾಗರಿ ಲಿಪಿಯಲ್ಲಿ ಹಚ್ಚೆ ಹಾಕಿಸಿಕೊಂಡದ್ದು ಎಲ್ಲಾ ಒಂದೊಂದಾಗಿ ಬಹಿರಂಗವಾಗಿದೆ. ಇದನ್ನೆಲ್ಲಾ ನೋಡಿ ಶಹೀದ್ ಕಪೂರ್ ಗೊಳೋ ಎನ್ನುತ್ತಿದ್ದಾನಂತೆ!

  (ಏಜೆನ್ಸೀಸ್)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X