»   » ಸೆನ್ಸಾರ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಬಾನಾ ಅಜ್ಮಿ ಹೆಸರು

ಸೆನ್ಸಾರ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಬಾನಾ ಅಜ್ಮಿ ಹೆಸರು

Posted By:
Subscribe to Filmibeat Kannada

ಸೆನ್ಸಾರ್ ಮಂಡಳಿಗೆ ನೂತನ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತೆ ಹಾಗೂ ಬಾಲಿವುಡ್ ತಾರೆ ಶಬಾನಾ ಅಜ್ಮಿ ಆಯ್ಕೆ ಬಹುತೇಕ ಖಚಿತವಾಗಿದೆ. ಹಾಲಿ ಅಧ್ಯಕ್ಷೆ ಶರ್ಮಿಳಾ ಠಾಗೋರ್ ಅವರ ಅಧಿಕಾರ ಅವಧಿ ಪೂರ್ಣಗೊಂಡಿದ್ದು, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳು ತಿಳಿಸಿವೆ.

ಒಂದು ವೇಳೆ ಶರ್ಮಿಳಾ ಠಾಗೋರ್ ಅವರನ್ನು ಮರು ನೇಮಕ ಮಾಡದಿದ್ದ ಪಕ್ಷದಲ್ಲಿ ಶಬಾನಾ ಅಜ್ಮಿ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಕವಿ, ಗೀತ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಗುಲ್ಜಾರ್ ಅವರ ಹೆಸರನ್ನೂ ಸೆನ್ಸಾರ್ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲಾಗಿತ್ತು. ಆದರೆ ಗುಲ್ಜಾರ್ ಅವರು ನಯವಾಗಿ ಸೆನ್ಸಾರ್ ಹುದ್ದೆಯನ್ನು ನಿರಾಕರಿಸಿದ್ದಾರೆ.

ಶಬಾನಾ ಅಜ್ಮಿ ಅವರು ಸೆನ್ಸಾರ್ ಮಂಡಳಿಗೆ ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಪ್ರಸ್ತುತ ಚಿತ್ರರಂಗದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯಲ್ಲಿ ಹಲವಾರು ಬದಲಾವಣೆಗಳನ್ನು ತರುವ ಸಾಮರ್ಥ್ಯ ಅವರಿಗಿದೆ ಎಂಬಮಾತುಗಳು ಕೇಳಿಬಂದಿವೆ. ಈ ಹುದ್ದೆಗೆ ಶಾಬಾನಾ ಅವರು ಅರ್ಹ ವ್ಯಕ್ತಿ ಎನ್ನಲಾಗಿದೆ.

English summary
Actress Shabana Azmi might be appointed as Censor Board chief . Sources in the Information and Broadcasting ministry reveals this news. Sources also tell us that Gulzar's name also features prominently but it seems he might have declined the offer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada