»   » ಬಿಕಿನಿಗೆ ಮತ್ತೆ ಶರಣೆಂದ ಕೃಷ್ಣಸುಂದರಿ ಬಿಪಶಾ ಬಸು

ಬಿಕಿನಿಗೆ ಮತ್ತೆ ಶರಣೆಂದ ಕೃಷ್ಣಸುಂದರಿ ಬಿಪಶಾ ಬಸು

Posted By:
Subscribe to Filmibeat Kannada

ಬಾಲಿವುಡ್ ತಾರೆ, ಬಟ್ಟಲು ಕಂಗಳ ಬೆಡಗಿ ಬಿಪಶಾ ಬಸು ಮತ್ತೆ ಬಿಕಿನಿಗೆ ಶರಣೆಂದಿದ್ದಾರೆ. ಪ್ರಿಯದರ್ಶನ್ ನಿರ್ದೇಶಿಸಲಿರುವ ತಮ್ಮ ಮುಂದಿನ ಚಿತ್ರದಲ್ಲಿ ಬಿಕಿನಿ ತೊಡುವುದಾಗಿ ಪ್ರಕಟಿಸಿದ್ದಾರೆ. ಈ ಹಿಂದೆ 'ಲಮ್ಹಾ ' ಚಿತ್ರದಲ್ಲಿ ಆಕೆ ಕಾಶ್ಮೀರಿ ಬೆಡಗಿ ಪಾತ್ರದಲ್ಲಿ ಬಿಕಿನಿ ತೊಟ್ಟು ಗಮನಸೆಳೆದಿದ್ದರು.

ಬಿಪಶಾ ಬಸು ನಟಿಸಲಿರುವ ಮುಂದಿನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲವಾದರೂ ಬಿಕಿನಿ ತೊಡುವುದಂತೂ ಬಹುತೇಕ ಖಚಿತವಾಗಿದೆ. ನಿಮಗೆ ಸಲ್ವಾರ್ ತೊಡುವುದು ಇಷ್ಟವೇ ಅಥವಾ ಬಿಕಿನಿಯೇ ಎಂದು ಆಂಗ್ಲ ದೈನಿಕವೊಂದು ಕೇಳಲಾಗಿ, ತಮಗೆ ಎರಡು ಇಷ್ಟ ಎಂದಿದ್ದಾರೆ.

ಆದರೆ ಬಿಕಿನಿ ತೊಡುವುದರಲ್ಲಿ ಬಹಳಷ್ಟು ಶ್ರಮವಿದೆ. ಕೆಲವೊಂದು ಸೂಕ್ಷ್ಮಗಳನ್ನು ಕ್ಯಾಮೆರಾ ಗ್ರಹಿಸುತ್ತದೆ. ಹಾಗಾಗಿ ಬೇಕಾಬಿಟ್ಟಿ ಬಿಕಿನಿ ತೊಡುವಂತಿಲ್ಲ. ಅದರಲ್ಲೂ ಜಾಗ್ರತೆ ವಹಿಸಬೇಕಾಗುತ್ತದೆ ಎಂದು ಬಿಕಿನಿ ಬಗ್ಗೆ ಸುದೀರ್ಘ ಪ್ರಬಂಧ ಮಂಡಿಸಿದ್ದಾರೆ. ನೀವು ಸರಳ ಹುಡುಗಿಯಾಗಿ ಗುರುತಿಸಿಕೊಳ್ಳುತ್ತೀರೋ ಅಥವಾ ಬಳುಕುವ ಬಾಲೆಯಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತೀರೋ ಎಂಬ ಪ್ರಶ್ನೆಗೆ ಬಿಪಶಾ ಉತ್ತರ ಏನು ಗೊತ್ತೆ?

ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿರುವ ಬಿಪಶಾ, ಮಾನಸಿಕವಾಗಿ ಸರಳ ಸುಂದರಹುಡುಗಿಯಾಗಿ ಹಾಗೂ ದೈಹಿಕವಾಗಿ ಬಳುಕುವ ಬಳ್ಳಿಯಾಗಿ ಕಾಣಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. ಸೆಕ್ಸಿಯಾಗಿ ಕಾಣಿಸಿಕೊಳ್ಳುವುದಕ್ಕಿಂತ ನಾವು ತೊಡುವ ಉಡುಪು ನಮಗೆ ಮೈಗೆ ಒಪ್ಪುವಂತಿರಬೇಕು. ಸೆಕ್ಸಿ ಮತ್ತು ಅಶ್ಲೀಲಗಳ ನಡುವೆ ಸಣ್ಣ ಗೆರೆ ಎಳೆದಂತಿರಬೇಕು ಎಂದು ಹೇಳಿದ್ದಾರೆ.

ನಾನು ಏನೇ ತೊಡಲಿ ಅದು ಬಿಕಿನಿಯಾಗಿರಲಿ ಅಥವಾ ಸಲ್ವಾರ್ ಆಗಿರಲಿ ಈ ಅಶ್ಲೀಲದ ಗಡಿಯನ್ನು ದಾಟಿಲ್ಲ. ಬಿಕಿನಿ ತೊಡವುದು ಜಾನ್ ಅಬ್ರಹಾಂ ಅವರಿಗೆ ಇಷ್ಟವಿದೆಯೇ? ಎಂದರೆ, ಹೌದು ನಾನು ಏನೇ ತೊಟ್ಟರೂ ಅವರ ಅಭ್ಯಂತರವಿಲ್ಲ ಎಂದು ಕಡ್ಡಿಮುರಿದಂತೆ ಉತ್ತರಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada