»   »  ಜಿಯಾಖಾನ್ ಗೆ ಅಮೀರ್ ಮೇಲೆ ಮುನಿಸು

ಜಿಯಾಖಾನ್ ಗೆ ಅಮೀರ್ ಮೇಲೆ ಮುನಿಸು

Subscribe to Filmibeat Kannada
ಅಮೀರ್ ಖಾನ್ ಹೀಗೆ ಮಾಡುತ್ತಾರೆ ಎಂದುಕೊಂಡಿರಲಿಲ್ಲ ಎಂದು ಬಾಲಿವುಡ್ ನಟಿ ಜಿಯಾಖಾನ್ ಅಲವತ್ತುಕೊಂಡಿದ್ದಾರೆ.ಗಜನಿ ಚಿತ್ರದಲ್ಲಿ ಆಕೆ ಎರಡನೇ ನಾಯಕಿಯಾಗಿ ನಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ.ಗಜನಿ ಬಿಡುಗಡೆಯಾದ ಎರಡು ವಾರಗಳಲ್ಲೇ ಝಣ ಝಣ ಕಾಂಚಣ ಸುರಿಮಳೆಯಾಗಿದೆ. ಈ ಬಗ್ಗೆ ಆಕೆಯದೇನು ತಕರಾರಿಲ್ಲವಂತೆ.

ಆಕೆ ಮುನಿಸೆಲ್ಲಾ ಇರುವುದು ಗಜನಿ ಚಿತ್ರದ ಪ್ರಚಾರ ಬಗ್ಗೆ.ಈ ಚಿತ್ರದ ಪ್ರಚಾರದಲ್ಲಿ ಯಾವೊಂದು ಹಂತದಲ್ಲೂ ಆಕೆಗೆ ಪ್ರಾಧಾನ್ಯತೆ ನೀಡಲಿಲ್ಲವಂತೆ. ಚಿತ್ರದಲ್ಲಿನ ನನ್ನ ನಟನೆಯ ಕೆಲವು ಸನ್ನಿವೇಶಗಳಿಗೆ ಮತ್ತು ಹಾಡುಗಳಿಗೆ ನನಗೆ ಗೊತ್ತಿಲ್ಲದಂತೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಇವರು ಹೀಗೆ ಮಾಡುತ್ತಾರೆ ಎಂದು ಊಹಿಸಿರಲಿಲ್ಲ. ಇದೊಂದು ಘೋರ ಅನ್ಯಾಯ ಎಂದು ತಮ್ಮ ದುಃಖವನ್ನು ಅವರು ತೋಡಿಕೊಂಡಿದ್ದಾರಂತೆ.ಈ ಚಿತ್ರ ನನಗೆ ಒಂದು ಉತ್ತಮ ಪಾಠ ಕಲಿಸಿದೆ. ಇನ್ನು ಮುಂದೆ ಎರಡನೇ ನಾಯಕಿಯಾಗಿ ನಟಿಸುವುದಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡು ಕಣ್ಣೀರ ಕೋಡಿ ಹರಿಸಿದ್ದಾರಂತೆ.

ಇದೆಲ್ಲಾ ನಿಜವೇ ಎಂದು ಆಕೆಯನ್ನು ಪ್ರಶ್ನಿಸಿದರೆ. ಆಕೆ ಸುತಾರಾಂ ಒಪ್ಪದೆ ಇದೆಲ್ಲಾ ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ವದಂತಿಗಳು. ಇದಕ್ಕೆಲ್ಲಾ ಕಿವಿಗೊಡಬೇಡಿ ಎಂದು ಆಕೆ ತಣ್ಣಗೆ ಪ್ರತಿಕ್ರಿಯಿಸಿದ್ದಾರೆ. ಗಜನಿಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ನನಗೆ ಸಖತ್ ಖುಷಿಯಾಗಿದೆ. ಗಜನಿ ಚಿತ್ರದಲ್ಲಿ ಅಮೀರ್ ಖಾನ್ ಮತ್ತು ಅಸೀನ್ ಪ್ರಧಾನ ಪಾತ್ರಧಾರಿಗಳು. ನನ್ನದು ಏನಿದ್ದರೂ ಎರಡನೇ ಪ್ರಾಧಾನ್ಯತೆಯುಳ್ಳ ಪಾತ್ರ.ಈ ಬಗ್ಗೆ ನನಗೆ ಏನೂ ಬೇಸರವಿಲ್ಲ ಎಂದಿದ್ದಾರೆ.

(ಏಜೆನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada