»   » ವೀರ್ಯ ಬೇಕಾದರೆ ಸಂಪರ್ಕಿಸಿ: ನಟ ಜಾನ್ ಅಬ್ರಹಾಂ

ವೀರ್ಯ ಬೇಕಾದರೆ ಸಂಪರ್ಕಿಸಿ: ನಟ ಜಾನ್ ಅಬ್ರಹಾಂ

Posted By:
Subscribe to Filmibeat Kannada

ಬಾಲಿವುಡ್ ನಟ ಜಾನ್ ಅಬ್ರಹಾಂ ವೀರ್ಯದಾನಕ್ಕೆ ಮುಂದಾಗಿದ್ದಾರೆ. ಇದು ರೀಲಲ್ಲಿ ಅಲ್ಲ, ರೀಯಲ್ ಲೈಫ್ ನಲ್ಲೂ ಕೂಡ. ಇದೀಗ ಜಾನ್ ಅಬ್ರಹಾಂ ವೀರ್ಯದಾನಕ್ಕೆ ಸಂಬಂಧಿಸಿದ ಕಥಾಹಂದರವುಳ್ಳ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಾಗಾಗಿ, ಸ್ವತಃ ವೀರ್ಯದಾನಕ್ಕೂ ಮುಂದಾಗಿದ್ದಾರೆ. ಇದು ಅಚ್ಚರಿಗಿಂತ ಮೆಚ್ಚಬೇಕಾದ ಅಂಶ.

ಸಾಮಾಜಿಕ ಕಳಕಳಿ ಹೊಂದಿರುವ ಜಾನ್ ಹೇಳುವುದು ಹೀಗೆ. "ಜಗತ್ತಿನಲ್ಲಿ ಸಾಕಷ್ಟು ಮಂದಿ ಮಕ್ಕಳಿಲ್ಲದ ದಂಪತಿಗಳಿದ್ದಾರೆ. ಅವರಿಗೆ ಜೀವನ ದುಸ್ತರವೆನಿಸದಂತೆ ಪುರುಷರು ತಮ್ಮ ವೀರ್ಯದಾನಕ್ಕೆ ಮುಂದಾಗಬೇಕು. ನಾನು ಅಂಥ ಮಕ್ಕಳಿಲ್ಲದ ದಂಪತಿಗಳಿಗೆ ವೀರ್ಯ ಕೊಡಲು ಸಿದ್ಧವಾಗಿದ್ದೇನೆ" ಎಂದಿದ್ದಾರೆ. 'ಹೇಳೋದು ಆಚಾರ, ತಿನ್ನೋದು ಬದನೆಕಾಯಿ' ಎಂಬಂತಿರದ ಜಾನ್ ಕಳಕಳಿಗೆ ನಿಜಕ್ಕೂ ಭೇಷ್ ಹೇಳಲೇಬೇಕು.

ಜಾನ್ ಹೇಳಿಕೆ ಹಾಗೂ ವೀರ್ಯದಾನದ ಕಥೆಯ ಚಿತ್ರವನ್ನು ಯುವಜನಾಂಗ ಒಪ್ಪಿಕೊಳ್ಳಬಹುದು. ಆದರೆ ನಮ್ಮ ದೇಶದಲ್ಲಿ ಸಂಸ್ಕೃತಿ, ಸಂಪ್ರದಾಯ ಎಂದು ಬೊಬ್ಬಿಡುವ ಮಂದಿ ಇದನ್ನು ತೀವ್ರ ವಿರೋಧಿಸುವ ಸಂಭವವಿದೆ. ಇದು ಜಾನ್ ಗೂ ಗೊತ್ತು. ಆದರೆ ಅದನ್ನೆಲ್ಲಾ ಲೆಕ್ಕಿಸದೇ ಕೇವಲ ಸಾಮಾಜಿಕ ಕಳಕಳಿ ಮೆರೆಯುವ ಯೋಚನೆ ಜಾನ್ ಅವರದ್ದು ಎನ್ನಲಾಗಿದೆ.

ಅಂದಹಾಗೆ, ಜಾನ್ ನಿರ್ಮಾಣದ 'ವಿಕ್ಕಿ ಡೋನರ್' ಚಿತ್ರದಲ್ಲಿ ವಿಜೆ ಆಯುಷ್ಮಾನ್ ಖುರಾನಾ ನಾಯಕರಾಗಿದ್ದು ವೀರ್ಯದಾನಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಇವರಿಗೆ ನಾಯಕಿಯಾಗಿ ಕಿರುತೆರೆಯಲ್ಲಿ ಖ್ಯಾತಿ ಹೊಂದಿರುವ ಯಾಮಿ ಗೌತಮ್ ಇದ್ದಾರೆ. ಒಟ್ಟಿನಲ್ಲಿ ಜಾನ್ ಅಬ್ರಹಾಮ ತಮ್ಮ ಪ್ರಪ್ರಥಮ ಚಿತ್ರದ ನಿರ್ಮಾಣವನ್ನು ವೀರ್ಯದಾನದ ಮೂಲಕ ಪ್ರಾರಂಭಿಸಲಿದ್ದಾರೆ. (ಏಜೆನ್ಸೀಸ್)

English summary
John Abraham who will turn a producer with his movie Vicky Donor, wants to donate his own sperms for social cause.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X