»   » ಕಿಂಗ್ ಖಾನ್ ಚಕ್ ದೇ ಇಂಡಿಯಾ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

ಕಿಂಗ್ ಖಾನ್ ಚಕ್ ದೇ ಇಂಡಿಯಾ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

Posted By:
Subscribe to Filmibeat Kannada

ಬ್ಯಾಂಕಾಕ್, ಜೂ. 9 : ಬಾಲಿವುಡ್ ಬಾದಷಾಹ್, ಕಿಂಗ್ ಖಾನ್ ಶಾರೂಕ್ ಖಾನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಒಂಬತ್ತನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಕ್ ದೇ ಇಂಡಿಯಾ ಚಿತ್ರ ಒಂಬತ್ತು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಶಾರೂಕ್ ಶ್ರೇಷ್ಠ ನಟ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಭಾನುವಾರ ರಾತ್ರಿ ಅದ್ಧೂರಿಯಾಗಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಸುರಿಮಳೆಯನ್ನು ಹರಿಸುವ ಮೂಲಕ ಕಿಂಗ್ ಖಾನ್ ಹಿಂದಿ ಚಿತ್ರರಂಗದಲ್ಲಿ ತಾನೇ ಅನಭಿಷಕ್ತ ಎನ್ನುವುದನ್ನು ಸಾಬೀತುಪಡಿಸಿದ್ದಾನೆ. ಶಾರೂಕ್ ನಟಿಸಿದ ಇನ್ನೊಂದು ಚಿತ್ರ ಪರಾಖಾನ್ ನಿರ್ದೇಶನದ ಬೆಂಗಳೂರಿನ ಬೆಡಗಿ ದೀಪಿಕಾ ಪಡಕೋಣೆ ನಾಯಕಿಯಾಗಿ ನಟಿಸಿರುವ ಓಂ ಶಾಂತಿ ಓಂ ಚಿತ್ರ ಐದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಶಾರೂಕ್ ಗೆ ಪ್ರಬಲ ಪೈಪೋಟಿ ನೀಡಿದ್ದು, 2007ರಲ್ಲಿ ನಾಲ್ಕು ಹಿಟ್ ಚಿತ್ರಗಳನ್ನು ನೀಡಿದೆ ಅಕ್ಷಯ್ ಕುಮಾರ್ ಮಾತ್ರ. ಉಳಿದಂತೆ 'ದರ್ದೇ ದಿಸ್ಕೊ ದರ್ದೇ ಡಿಸ್ಕೊ' ಹಾಡಿನದೇ ಅಬ್ಬರ.

ಇಡೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಿಂಗ್ ಖಾನ್ ನಟಿಸಿದ ಚಿತ್ರಗಳಿದ್ದೇ ಭರಾಟೆ. ಚಕ್ ದೇ ಇಂಡಿಯಾ, ಓಂಶಾಂತಿ ಓಂ ಚಿತ್ರದ ಹಾಡುಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಆದರೆ ಕಾರಣಾಂತರಗಳಿಂದ ಶಾರೂಕ್ ಖಾನ್  ಅನುಪಸ್ಥಿತಿ ಪ್ರೇಕ್ಷಕರ ನಿರಾಶೆಗೂ ಕಾರಣವಾಗಿತ್ತು.

ಸೈಫ್ ಅಲೀ ಖಾನ್ ಅವರ ಮನದೆನ್ನೆ ಕರೀನಾ ಕಪೂರ್ ಜಬ್ ವೀ ಮೆಟ್ ಚಿತ್ರಕ್ಕಾಗಿ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದುಕೊಂಡರು. ಚಕ್ ದೇ ಇಂಡಿಯಾ ಚಿತ್ರದ ವಿವಿಧ ತಾಂತ್ರಿಕ ವರ್ಗ ಸೇರಿದಂತೆ ಒಟ್ಟು ಒಂಬತ್ತು ಪ್ರಶಸ್ತಿಗಳು ಲಭಿಸಿವೆ.  ಅತ್ಯುತ್ತಮ ನಿರ್ದೇಶಕ  ಸೀಮಿತ್ ಅಮಿನ್, ಉತ್ತಮ ಕಥೆಗಾಗಿ ಜೈದೀಪ್ ಸಾಹ್ನಿ, ನೃತ್ಯ ಮತ್ತು ದ್ವನಿ ಸಂಕಲನಕ್ಕೆ ಪ್ರಶಸ್ತಿಗಳು ದೊರೆತಿವೆ.

ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಹಾಗೂ ಮಣಿರತ್ನಂ ನಿರ್ದೇಶನ 'ಗುರು' ಚಿತ್ರದ ಸಂಗೀತಕ್ಕಾಗಿ ಸಂಗೀತ ಕ್ಷೇತ್ರದ ದಿಗ್ಗಜ ಎಂದೇ ಖ್ಯಾತರಾದ ಎ.ಆರ್.ರೆಹಮಾನ್ ಅವರಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀವಮಾನದ ಶ್ರೇಷ್ಠ ಸಾಧನೆಗಾಗಿ ನಟಿ ಮಮ್ತಾಜ್ ಹಾಗೂ ಶ್ಯಾಂ ಬೆನಗಲ್ ಅವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಓಂ ಶಾಂತಿ ಓಂ ಚಿತ್ರದ ಸಾಹಿತ್ಯಕ್ಕಾಗಿ ಜಾವೇದ್ ಅಕ್ತರ್ ಅವರಿಗೆ ಉತ್ತಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. 

ನಗರ ಜೀವನವನ್ನು ಅಧರಸಿ ನಿರ್ಮಿಸಲಾದ 'ಲೈಫ್  ಇನ್ ಎ ಮೆಟ್ರೂ'ಚಿತ್ರದಲ್ಲಿ ನಟಿಸಿರುವ ಇರ್ಫಾನ್  ಖಾನ್'ಮತ್ತು ಕೊಂಕಣಸೇನ್ ಶರ್ಮಾ ಅವರಿಗೆ ಉತ್ತಮ ಪೋಷಕರ ನಟರೆಂದು ಪ್ರಶಸ್ತಿ ನೀಡಲಾಯಿತು. 'ಪಾರ್ಟ್ನರ್' ಚಿತ್ರ ನಟನೆಗಾಗಿ ಗೋವಿಂದ ಅವರಿಗೆ ಉತ್ತಮ ಹಾಸ್ಯ ನಟ, ಹಾಗೂ 'ಶೂಟ್ ಔಟ್ ಎಟ್ ಲೋಖಂಡವಾಲಾ' ಚಿತ್ರದ ಸಾಹಸ ಮತ್ತು ವಿಲನ್ ಪಾತ್ರಗಳ ಉತ್ತಮ ಅಭಿನಯಕ್ಕಾಗಿ ವಿವೇಕ್ ಓಬೇರಾಯ್ ಉತ್ತಮ ಖಳನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

'ಗುರು' ಚಿತ್ರದ 'ಬರ್ಸೋ ರೇ ಮೇಘಾ ಮೇಘಾ..' ಎಂಬ ಮನಮೋಹಕ ಹಾಡಿಗಾಗಿ ಶ್ರೇಯಾ ಘೋಷಾಲ್ ಅತ್ಯುತ್ತಮ ಹಿನ್ನಲೆ ಗಾಯಕಿ ಮತ್ತು 'ಸಾವರಿಯಾ' ಚಿತ್ರದ 'ಜಬ್ಸ್ ಸೇ ತೇರಿ ನೈನಾ..' ಹಾಡಿಗಾಗಿ ಶಾನ್ ಉತ್ತಮ ಹಿನ್ನಲೆ ಗಾಯಕ ಪ್ರಶಸ್ತಿಯನ್ನು ಪಡೆದುಕೊಂಡರು.

ಅಭಿಷೇಕ್ ಬಚ್ಚನ್ ಮತ್ತು ಕತ್ರಿನಾ ಕೈಫ್ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡರು. ದೀಪಿಕಾ ಪಡಕೋಣೆ ಮತ್ತು ರಣಭೀರ್ ಕಪೂರ್ ಚಿತ್ರರಂಗ ನ್ಯೂ ಎಂಟ್ರಿ ಪ್ರಶಸ್ತಿ ನೀಡಲಾಯಿತು.

(ದಟ್ಸ್ ಕನ್ನಡಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada