ಐಶ್ವರ್ಯ ರೈ ಕೊರಳಿಗೆ ಬಿತ್ತು ಅತ್ಯಂತ ಕಳಪೆ ನಟಿ ಪ್ರಶಸ್ತಿ

By Rajendra

ಅತ್ಯುತ್ತಮ ನಟಿ, ನಟ ಪ್ರಶಸ್ತಿಗಳನ್ನು ಕೇಳಿದ್ದೀರಿ. ಆದರೆ ಅತ್ಯಂತ ಕಳಪೆ ನಟ, ನಟಿ ಪ್ರಶಸ್ತಿಯನ್ನು ಕೇಳಿದ್ದೀರಾ? ಈ ರೀತಿಯ ಪ್ರಶಸ್ತಿಗಳನ್ನು ನೀಡುವ ಪರಿಪಾಠವನ್ನು "ಘಂಟಾ ಅವಾರ್ಡ್" ಪಾಲಿಸಿಕೊಂಡು ಬರುತ್ತಿದೆ. ಈ ಬಾರಿ ಬಾಲಿವುಡ್ ತಾರೆ ಐಶ್ವರ್ಯ ರೈ ಕೊರಳಿಗೆ ಅತ್ಯಂತ ಕಳಪೆ ನಟಿ ಪ್ರಶಸ್ತಿ ಬಿದ್ದಿದೆ.

ನೋಬೆಲ್ ಪ್ರಶಸ್ತಿಗೆ ಪರ್ಯಾಯವಾಗಿ Ig Nobel ಪ್ರಶಸ್ತಿ ಪ್ರಕಟಿಸುವುದಿಲ್ಲವೆ ಹಾಗೆ ಸಿನಿಮಾದಲ್ಲೂ ಈ ರೀತಿಯ ಕಾಲೆಳೆಯುವ ಪರಿಪಾಠವಿದೆ. ಆದರೆ ಯಾರೂ ಈ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ. ಪ್ರಶಸ್ತಿಯನ್ನಂತೂ ಪ್ರಕಟಿಸಿಯಾಗಿದೆ, ಸ್ವೀಕರಿಸುವುದೂ ಬಿಡುವುದು ನಿಮಗೆ ಬಿಟ್ಟದ್ದು ಎಂದು ಘಂಟಾಘೋಷವಾಗಿ ಘಂಟಾ ಪ್ರಶಸ್ತಿಗಳು ಹೇಳುತ್ತಿವೆ.

ಇನ್ನು ಐಶ್ವರ್ಯ ರೈ ಅವರಿಗೆ ಯಾಕೆ ಈ ಪ್ರಶಸ್ತಿ ನೀಡಲಾಯಿತು ಎಂದರೆ... ಕಳೆದ ವರ್ಷ ಐಶು ಅಭಿನಯದ ನಾಲ್ಕು ಚಿತ್ರಗಳು ನೆಲಕಚ್ಚಿವೆ.ಅದರಲ್ಲೂ ಮುಖ್ಯವಾಗಿ ರಜನಿಕಾಂತ್ ಜತೆ ಅಭಿನಯದ 'ಎಂಧಿರನ್' ರೀಮೇಕ್ 'ರಾವಣ್' ಬಾಕ್ಸಾಫೀಸಲ್ಲಿ ಮಣ್ಣು ಮುಕ್ಕಿತ್ತು. ಇನ್ನು 'ಗುಜಾರೀಷ್' ಚಿತ್ರವಂತೂ ಗುಜರಿಗೆ ಸೇರಿತು. ಈ ಎಲ್ಲಾ ಕಾರಣಗಳಿಂದಾಗಿ ಈ ವರ್ಷ ಆಕೆಯ ಕೊರಳಿಗೆ ಘಂಟಾ ಪ್ರಶಸ್ತಿ ಬಿದ್ದಿದೆ.

ಅತ್ಯಂತ ಕಳಪೆ ಪ್ರಶಸ್ತಿಗೆ ಭಾಜನರಾದ ಉಳಿದವರ ಹೆಸರುಗಳು ಹೀಗಿವೆ. ಹಿಮೇಶ್ ರೇಷ್ಮಿಯಾ (ಅತ್ಯಂತ ಕಳಪೆ ನಟ), ಸಜಿದ್ ಖಾನ್ (ಅತ್ಯಂತ ಕಳಪೆ ನಿರ್ದೇಶಕ), ಪ್ಯಾರ್ ಇಂಪಾಸಿಬಲ್ (ಅತ್ಯಂತ ಕಳಪೆ ಚಿತ್ರ) , ಲಾರಾ ದತ್ತ (ಅತ್ಯಂತ ಕಳಪೆ ಪೋಷಕ ನಟಿ). ಈ ಪ್ರಶಸ್ತಿಗಳು ಪ್ರಕಟವಾಗುವ ಮೂಲಕ ಬಾಲಿವುಡ್‌ನಲ್ಲಿ ಢಣ ಢಣ ಘಂಟೆ ಬಾರಿಸಿದಂತಾಗಿದೆ.

More from Filmibeat

English summary
Bollywood beauty Aishwarya Rai awarded with the worst actress Ghanta award. Who are the other winners. Here is the list, Himesh Reshammiya (Worst Actor ), Sajid Khan (Worst Director), Pyaar Impossible (Worst Film).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X