For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್ ಗೆ ಶಾರುಖ್ ಖಾನ್ 'ಬ್ರದರ್' ಅಲ್ವಂತೆ

  |

  ಬಾಲಿವುಡ್ ಹಾಟ್ ಸೆನ್ಸೇಷನ್ ವಿದ್ಯಾ ಬಾಲನ್, ಶಾರುಖ್ ಖಾನ್ ಬಗ್ಗೆ ಒಳ್ಳೊಯ ಮಾತುಗಳನ್ನು ಆಗಾಗ ಆಡುತ್ತಾರೆ. ಅವರಿಗೆ ಶಾರುಖ್ ಮೇಲೆ ಸಿಕ್ಕಾಪಟ್ಟೆ ಕ್ರೇಜ್. ಶಾರುಖ್ ರನ್ನು 'ಬ್ರದರ್' ಎಂದು ಸಂಬೋಧಿಸುವುದು ವಿದ್ಯಾಗೆ ಕಷ್ಟದ ಕೆಲಸ. ಆಕೆ "ಜಗತ್ತೇ ಹೇಳಿದರೂ ನಾನು ಶಾರುಖ್ ರನ್ನು ಬ್ರದರ್ ಎನ್ನಲಾರೆ" ಎಂದು ಹಿಂದೊಮ್ಮೆ ಹೇಳಿದ್ದರು.

  ಆದರೆ ತೀರಾ ಇತ್ತೀಚಿಗೆ, ಸ್ಕ್ರೀನ್ ಅವಾರ್ಡ್ ಫಂಕ್ಷನ್ ವೇದಿಕೆ ಮೇಲೆ ಶಾರುಖ್ ರನ್ನು ಹಾಗೆ ಕರೆಯಬೇಕಾದ ಪ್ರಮೇಯ ವಿದ್ಯಾಗೆ ಎದುರಾಯ್ತು. ಆಕೆ ಆ ಸಮಯದಲ್ಲಿ ಅನಿವಾರ್ಯವಾಗಿ ಅದನ್ನು ಹೇಳಿದರೂ ನಂತರ ಅದನ್ನು ನೆನಪಿಸಿಕೊಂಡು ಸಾಕಷ್ಟು ಬೇಸರಿಸಿಕೊಂಡರಂತೆ. ಈ ವಿಷಯವನ್ನು ಸ್ವತಃ ವಿದ್ಯಾ ಬೇಸರದಿಂದಲೇ ಹೇಳಿಕೊಂಡರು.

  ಇದೀಗ ಆಕೆಯ ಮುಂದಿನ ಚಿತ್ರ 'ಕಹಾನಿ'ಯ ಪ್ರಮೋಶನ್ ಗಾಗಿ ಭರ್ಜರಿಯಾಗಿ ಓಡಾಡುತ್ತಿರುವ ವಿದ್ಯಾ, ಈ ವಿಷಯವನ್ನು ಸಂದರ್ಭ ಸಿಕ್ಕಾಗಲೆಲ್ಲ ಹೇಳುತ್ತಾಳೆ. ಜೊತೆಗೆ ಇತ್ತೀಚಿಗೆ ಶ್ರೇಷ್ಠನಟಿ ಫಿಲಂಫೇರ್ ಪ್ರಶಸ್ತಿಯನ್ನೂ ತನ್ನ ಮುಡಿಗೇರಿಸಿಕೊಂಡು ಬೀಗುತ್ತಿದ್ದಾರೆ ವಿದ್ಯಾ ಬಾಲನ್. ಒಟ್ಟಿನಲ್ಲಿ ಶಾರುಖ್ ಮೇಲಿನ ವಿದ್ಯಾ ಪ್ರೀತಿ ಜಗಜ್ಜಾಹೀರಾಗಿದೆ. (ಏಜೆನ್ಸೀಸ್)

  English summary
  Vidya Balan said that she was very sad to address Shahrukh Khan as her brother.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X