»   » ನಲವತ್ತರ ಪ್ರಾಯದಲ್ಲಿ ಸೊಂಟ ಬಳುಕಿಸಲಿರುವ ಟಬು

ನಲವತ್ತರ ಪ್ರಾಯದಲ್ಲಿ ಸೊಂಟ ಬಳುಕಿಸಲಿರುವ ಟಬು

Posted By:
Subscribe to Filmibeat Kannada

ನಲವತ್ತರ ಪ್ರಾಯ ಮೀರಿದ ತಾರೆಗಳು ತಾಯಿ, ಅತ್ತೆ ಪಾತ್ರ ಬಿಟ್ಟರೆ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಆದರೆ ನೀಳ ಕಾಲ್ಗಳ ತಾರೆ ಟಬುಗೆ ವಯಸ್ಸು ನಲವತ್ತು ದಾಟುತ್ತಿದ್ದರೂ ಸೊಂಟ ಬಳುಕಿಸುವ ಚಾನ್ಸ್ ಸಿಕ್ಕಿದೆ. ನಾಸಿರುದ್ದೀನ್ ಶಾ ಹಾಗೂ ಸೋನು ಸೂದ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವೊಂದರಲ್ಲಿ ಟಬು ಐಟಂ ಡಾನ್ಸ್ ಮಾಡಲಿದ್ದಾರಂತೆ.

ಚಿತ್ರರಂಗಕ್ಕೆ ಇನ್ನೇನು ಗುಡ್‌ಬೈ ಹೇಳಿ ವಿಶ್ರಾಂತ ಜೀವನ ನಡೆಸುವ ಸಿದ್ಧತೆಯಲ್ಲಿದ್ದರು ಟಬು. ಆದರೆ ಕೊನೆಯ ಅವಕಾಶ ಎಂಬಂತೆ ಕತ್ತಲಲ್ಲಿ ಒಂದು ಕಲ್ಲನ್ನು ತೂರಿದ್ದಾರೆ. ಅದು ಸೀದಾ ಹೋಗಿ ಕಬೀರ್ ಕೌಶಿಕ್ ಎಂಬ ನಿರ್ದೇಶಕರ ತಲೆಗೆ ತಗುಲಿದೆ. ನಿರ್ದೇಶಕರಿಗೆ ಕತ್ತಲಲ್ಲಿ ಜ್ಞಾನೋದಯವಾಗಿದೆ. ಅವರು ಕೂಡಲೆ ಟಬು ಐಟಂ ಡಾನ್ಸ್‌ಗೆ ಓಕೆ ಎಂದಿದ್ದಾರೆ.

ಎಲ್ಲ ಅಂದುಕೊಂಡಂತೆ ನಡೆದು ಪ್ರಳಯ ಏನೂ ಸಂಭವಿಸದಿದ್ದರೆ ಇನ್ನೂ ಹೆಸರಿಡದ ಈ ಚಿತ್ರ ಏಪ್ರಿಲ್ 2013ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಪಾತ್ರವರ್ಗದಲ್ಲಿ ನೇಹ ದುಪಿಯಾ, ವಿನಯ್ ಪಾಟಕ್ ಸಹ ಇದ್ದಾರೆ. ಅದೆಲ್ಲಾ ಸರಿ ಈ ವಯಸ್ಸಲ್ಲಿ ಟಬು ಸೊಂಟ ಬಳುಕಿಸಲಿ ಆದರೆ ಉಳುಕಿಸಿಕೊಳ್ಳದಿದ್ದರೆ ಅಷ್ಟೇ ಸಾಕು. ಅಂದಹಾಗೆ ಟಬು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇನ್ನೂ ಸಣ್ಣಗೆ ಹೊಗೆಯಾಡುತ್ತಿದೆ. (ಏಜೆನ್ಸೀಸ್)

English summary
Bollywood actress Tabu to do an item song for the upcoming Sonu Sood-Naseeruddin Shah starrer Maximum. The 40-year-old actress was approached to sizzle in the track

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada