»   »  ಕಂಗನಾ ತುಟಿಗಳಲಿ ಅದೇನೋ ರಂಗು!

ಕಂಗನಾ ತುಟಿಗಳಲಿ ಅದೇನೋ ರಂಗು!

Subscribe to Filmibeat Kannada

ಬಾಲಿವುಡ್ ಬೆಡಗಿಯರು ಇಟಲಿ ಎಂದರೆ ಸಾಕು ಬೆಚ್ಚಿಬೀಳುತ್ತಿದ್ದಾರೆ. ಇಟಲಿಗೆ ಹಾರಲು ಗಡಗಡನೆ ನಡುಗುತ್ತಿದ್ದಾರೆ. ಅಲ್ಲಿಂದ ಹಿಂತಿರುಗಿದ ನಟಿಯರ ತುಟಿಗಳನ್ನು ಅನುಮಾನದಿಂದ ನೋಡುತ್ತಿದ್ದಾರಂತೆ. ಹಾಗಾಗಿ ಇಟಲಿ ಎಂದರೆ ಬಾಲಿವುಡ್ ನಟಿಯರ ತುಟಿಗಳು ಥರಥರ ನಡುಗುತ್ತವೆ!

ಈ ಮಧ್ಯೆ ಬಾಲಿವುಡ್ ಸುಂದರ ತುಟಿಗಳ ಚೆಲುವೆ ಕತ್ರಿನಾ ಕೈಫ್ ಇಟಲಿಯಲ್ಲಿ ಎರಡು ವಾರಗಳ ಕಾಲ ಇದ್ದು ಹಿಂತಿರುಗಿದ್ದರು. ಆಕೆಯ ತುಟಿಗಳಲ್ಲಿ ಅದೇನೋ ಕೊಂಚ ಬದಲಾವಣೆಯಾಗಿತ್ತು. ಆಕೆಯ ತುಟಿಗಳ ಅಂದಚೆಂದ ಒಂಚೂರು ಮಾಸಿತ್ತು. ಅಷ್ಟೇ ಗುಸುಗುಸು ಸುದ್ದಿಗಳು ಪ್ರಾರಂಭವಾದವು.

ಕತ್ರಿನಾ ತಮ್ಮ ತುಟಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಾಲಿವುಡ್ ವಲಯದಲ್ಲಿ ಹಬ್ಬಿತು. ಇದರಿಂದ ಒಂಚೂರು ವಿಚಲಿತಗೊಂಡ ಕತ್ರಿನಾ ತುಟಿ ಬಿಚ್ಚಿ ''ಅಂತಹದ್ದೇನು ಇಲ್ಲ, ಅಲರ್ಜಿಯಿಂದ ತುಟಿಗಳು ಒಂಚೂರು ಊದಿಕೊಂಡಿವೆ ಅಷ್ಟೇ'' ಎಂದು ವಿವರ ನೀಡಿದ್ದರು.

ಬಾಲಿವುಡ್ ನ ಮತ್ತೊಬ್ಬ ಬೆಡಗಿ ಕಂಗನಾ ರನೌತ್ ಅವರಿಗೂ ಇದೇ ಸಮಸ್ಯೆ ಎದುರಾಗಿದೆಯಂತೆ. ಇಟಲಿಯಿಂದ ಕೆಲದಿನಗಳ ಹಿಂದಷ್ಟೇ ಮುಂಬೈಗೆ ಹಿಂತಿರುಗಿದ ಆಕೆಯ ತುಟಿಗಳಲ್ಲೂ ಏನೋ ಬದಲಾವಣೆ. ಮತ್ತೆ ಅದೇ ಕತೆ...ಕತ್ರಿನಾ ರೀತಿ ಆಕೆಯೂ ಖಂಡಿಸಿ ತುಟಿ ಮುಚ್ಚಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada