For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕತ್ರಿನಾ ರೊಮಾನ್ಸ್

  |

  ಬಾಲಿವುಡ್ ಸೆನ್ಸೇಷನಲ್ ಬೆಡಗಿ ಕತ್ರಿನಾ ಕೈಫ್ ದಕ್ಷಿಣ ಭಾರತದ ಕಡೆ ಮುಖ ಮಾಡಿದ್ದಾರೆ. ಅದ್ಯಾವುದೋ ಐಟಂ ಹಾಡಿಗೆ ಕುಣಿಯಲ್ಲಾ, ಸದ್ಯಕ್ಕೆ ದಕ್ಷಿಣದ ಕಡೆ ಮುಖ ಹಾಕಲು ಪರುಸೊತ್ತಿಲ್ಲಾ ಎಂದೆಲ್ಲಾ ಉಲಿದಿದ್ದ ಕತ್ರಿನಾ ಇದೀಗ ರಜನಿಕಾಂತ್ ಎನಿಮೇಶನ್ ಚಿತ್ರ 'ಕೊಚಡೈಯಾನ್' ನಲ್ಲಿ ನಟಿಸುವುದು ಪಕ್ಕಾ ಆಗಿದೆ.

  ಬಾಲಿವುಡ್ ನಲ್ಲಿ ಎಲ್ಲ ನಟಿಯರಿಗೂ ಅದೊಂದು ಕನಸು. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುವುದಿದ್ದರೆ ದಕ್ಷಿಣದ ಕಡೆ ಬರಲು ಅವರಿಗೆ ಯಾವುದೇ ತೊಂದರೆಯಿಲ್ಲ. ಈ ಕತ್ರಿನಾ ಕೂಡ ಅದಕ್ಕೆ ಹೊರತಲ್ಲ. "ನನ್ನ ಮೆಚ್ಚಿನ ನಟರ ಲಿಸ್ಟ್ ನಲ್ಲಿ ರಜನಿ ಸರ್ ಹೆಸರು ಯಾವಾಗಲೂ ಇದೆ" ಎಂದಿದ್ದಾರೆ ಈಕೆ.

  ಈ ಸಂಬಂಧ ಮಾತನಾಡಿರುವ ಕೊಚಡೈಯಾನ್ ನಿರ್ದೇಶಕಿ, ರಜನಿಕಾಂತ್ ಪುತ್ರಿ ಸೌಂದರ್ಯ ಧನುಷ್, "ನಾವು ಈಗಾಗಲೇ ಕತ್ರಿನಾರಿಗೆ ಆಫರ್ ನೀಡಿದ್ದೇವೆ. ಅವರು ಒಪ್ಪಿಕೊಂಡಿದ್ದಾರೆ ಕೂಡ. ಆದರೆ ಮುಂದಿನ ಬೆಳವಣಿಗೆ ಇನ್ನೂ ಆಗಿಲ್ಲ. ಫಾರ್ಮಾಲಿಟೀಸ್ ಮುಗಿದ ಮೇಲೆ ಈ ಸುದ್ದಿಯನ್ನು ಅಧಿಕೃತಗೊಳಿಸುತ್ತೇವೆ" ಎಂದಿದ್ದಾರೆ. (ಏಜೆನ್ಸೀಸ್)

  English summary
  Katrina Kaif has bagged the biggest ever South film of her life. The actress, who is one of the sought after girl in the Hindi film industry, will be romancing none other than Rajinikanth in his upcoming project Kochadaiyaan.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X