»   » ಭರ್ಜರಿ ಬೆಲೆಗೆ ಕಿಂಗ್ ಖಾನ್ ರಾ ಒನ್ ಸೇಲ್

ಭರ್ಜರಿ ಬೆಲೆಗೆ ಕಿಂಗ್ ಖಾನ್ ರಾ ಒನ್ ಸೇಲ್

Posted By:
Subscribe to Filmibeat Kannada

ಕಿಂಗ್ ಖಾನ್ ಈ ವರ್ಷ ಶತಾಯಗತಾಯ ಹಣ ಕೊಳ್ಳೆ ಹೊಡೆಯುವ ನಿರ್ಧಾರ ಮಾಡಿದ್ದೇನೆ. ಕಳೆದ ಆರು ತಿಂಗಳಿನಿಂದ ಬಾಕ್ಸಾಫೀಸ್ ನಲ್ಲಿ ಅಮೀರ್, ಶಾರುಖ್ ಚಿತ್ರಗಳಿಲ್ಲದೆ ಸಲ್ಮಾನ್ ಖಾನ್ ರಾಜನಾಗಿ ಮೆರೆದಿದ್ದಾನೆ. ಶಾರುಖ್ ಖಾನ್ ತನ್ನ ಮುಂಬರುವ ಸೈ ಫೈ ಚಿತ್ರ ರಾ ಒನ್ ನ ಪ್ರಸಾರದ ಹಕ್ಕುಗಳನ್ನು ಭರ್ಜರಿ ಬೆಲೆ ಮಾರಾಟ ಮಾಡಿದ್ದಾನೆ.

ಟಿವಿ ಹಾಗೂ ಆಡಿಯೋ ಹಕ್ಕುಗಳ ಮಾರಾಟದಿಂದ ಸುಮಾರು 500 ಮಿಲಿಯನ್ ಗಳಿಸುವ ನಿರೀಕ್ಷೆ ಶಾರುಖ್, ಗೌರಿ ದಂಪತಿಗಳಿಗಿದೆ. ರಾ ಒನ್ ದೀಪಾವಳಿಯಲ್ಲಿ ಭರ್ಜರಿ ಆಟಂ ಬಾಂಬ್ ಆಗುತ್ತದೆಯೋ ತುಸ್ ಪಟಾಕಿಯಾಗುತ್ತದೆಯೋ ಕಾದು ನೋಡೋಣ.

ರಾ ಒನ್ ಸ್ಯಾಟಲೈಟ್ ಪ್ರಸಾರ ಹಕ್ಕನ್ನು 350 ಮಿಲಿಯನ್ ನೀಡಿ ಸ್ಟಾರ್ ಟಿವಿ ಸಮೂಹ ಗಳಿಸಿದೆ. ಸಲ್ಮಾನ್ ಖಾನ್ ಬಾಡಿಗಾರ್ಡ್, ಅಜಯ್ ಸಿಂಗಂ, ರಣಬೀರ್ ರಾಕ್ ಸ್ಟಾರ್ ಮುಂತಾದವರ ಬಿಡುಗಡೆಯಾಗದ ಚಿತ್ರಗಳ ಹಕ್ಕುಗಳನ್ನು ಈಗಾಗಲೇ ಸ್ಟಾರ್ ಟಿವಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ ಎಂಬ ಸುದ್ದಿಯಿದೆ.

ರಾ ಒನ್ ಆಡಿಯೋ ಹಕ್ಕುಗಳನ್ನು ಟೀ ಸೀರಿಸ್ 150 ಮಿಲಿಯನ್ ನೀಡಿ ಪಡೆದಿದೆ. ಅಕಾನ್ ಹಾಡಿರುವ ವಾನ್ನಾ ಬಿ ಮೈ ಚಮಕ್ ಚಲ್ಲೋ ಗೀತೆಯ ಪ್ರಭಾವ ಆಡಿಯೋ ಸೇಲ್ ಭರ್ಜರಿಯಾಗಿ ಆಗುವ ಸಾಧ್ಯತೆಯಿದೆ. ಈಗಾಗಲೇ ಲೀಕ್ ಆಗಿರುವ ನಕಲಿ ವರ್ಷನ್ ಹಾಡು ಆನ್ ಲೈನ್ ನಲ್ಲಿ ಸಕತ್ ಹಿಟ್ ಆಗಿದೆ.

ಇದಲ್ಲದೆ ಪ್ಲೇಸ್ಟೇಷನ್ ನತ್ತ ಕಣ್ಣು ಹಾಯಿಸಿರುವ ಕಿಂಗ್ ಖಾನ್, ಸಾಹಸಭರಿತ ಚಿತ್ರದ ಅನಿಮೇಟೆಡ್ ಗೇಮ್ ಅನ್ನು ತರುತ್ತಿದ್ದಾರೆ. ಶಾರುಖ್ ಸ್ವತಃ ಕಥೆ ಬರೆದು, ವಿಡಿಯೋ ಗೇಮ್ ಗೆ ವಾಯ್ಸ್ ಓವರ್ ನೀಡಿದ್ದಾರಂತೆ. ಜಿ. ಒನ್, ರಾ ಒನ್ ಎಂದು ಚಿಣ್ಣರು ಪ್ಲೇಸ್ಟೇಷನ್ ಹಿಡಿದು ಆಡಿ ನಲಿಯುವ ಕಾಲ ಹತ್ತಿರದಲ್ಲಿದೆ. ಸಿನಿಮಾ ಮಾರಾಟದ ರಹಸ್ಯಗಳನ್ನು ಅರಿತಿರುವ ಶಾರುಖ್ ಎಚ್ಚರಿಕೆಯಿಂದ ತನ್ನ ಚಿತ್ರದ ವ್ಯಾಪಾರ ಮಾಡಿ ಮುಗಿಸಿದ್ದಾನೆ.

English summary
Shahrukh Khan’s superhero movie Ra.One has reportedly already made Rs.500 mllion from TV and music rights.Star TV has agreed to part with Rs.350 million for the satellite TV rights of the film. T-Series has reportedly paid Rs.150 million for the exclusive music rights of the film,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada