For Quick Alerts
  ALLOW NOTIFICATIONS  
  For Daily Alerts

  ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಐಟಂ ಸಾಂಗ್

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಜೊತೆ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಯಿ ಹಾಯಿ ರೋ...ಎಂದು ಕುಣಿದಿದ್ದ ರವೀನಾ ಟಂಡನ್ ಈಗ ಐಟಂ ಸಾಂಗ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಮತ್ತೆ ಬರುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ 'ಬುದ್ಧ ಹೋಗಾ ತೇರಾ ಬಾಪ್' ಚಿತ್ರದಲ್ಲಿ ರವೀನಾ ಕುಣಿಯಲಿದ್ದಾರೆ.

  ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮುಖ್ಯಪಾತ್ರವನ್ನು ಪೋಷಿಸುತ್ತಿದ್ದಾರೆ. ವಿಶಾಲ್ ಶೇಖರ್ ಸಂಗೀತ ಸಂಯೋಜಿಸಿರುವ ಹಾಡಿಗೆ ರವೀನಾರ ಬೆಸ್ಟ್ ಫ್ರೆಂಡ್ ಶಬೀನಾ ಖಾನ್ ನೃತ್ಯ ಸಂಯೋಜಿಸಿದ್ದಾರೆ. ಈ ಹಾಡನ್ನು ಚಿತ್ರದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಂತೆ. ಮೊದಲು ಈ ಹಾಡು ಬೇಡ ಎಂದುಕೊಂಡಿದ್ದರಂತೆ. ತಡವಾಗಿ ಬಂದ ಆಲೋಚನೆ ಎನ್ನುತ್ತಾರೆ ನಿರ್ದೇಶಕರು.

  ಮುವ್ವತ್ತೇಳರ ಹರೆಯದ ರವೀನಾ ಈ ಹಿಂದೆ "ತು ಛೀಸ್ ಬಡಿ ಹೈ ಮಸ್ತ್ ಮಸ್ತ್" ಎಂದು ಸುನಿಲ್ ಶೆಟ್ಟಿ ಜೊತೆ ಕುಣಿದು ಜನಪ್ರಿಯರಾಗಿದ್ದರು. ಈಗ ಜೀನ್ಸ್‌ನಲ್ಲಿ ಇನ್ನೂ ಮಸ್ತ್ ಆಗಿ ರವೀನಾ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಈ ಹಾಡಿನಲ್ಲಿ ಕುಣಿಯಲು ಅವಕಾಶ ಸಿಕ್ಕಿದ್ದಕ್ಕೆ ರವೀನಾ ಸಖತ್ ಖುಷಿಯಾಗಿದ್ದಾರಂತೆ. (ಏಜೆನ್ಸೀಸ್)

  English summary
  Bollywood Raveena Mast Mast girl Tandon is back to seduce her fans. She is all set to sizzle in an item number in Puri Jagannath’s 'Bbuddha Hoga Terra Baap' starring Amitabh Bachchan in the pivotal role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X