ಸಂಜು ಹೊಸ ಚಿತ್ರ ಜಾನಿ ಜಾನಿ ಎಸ್ ಪಾಪಾ!

ಮುನ್ನಾ ಭಾಯ್ ಸರಣಿಯಲ್ಲಿ 'ಮುನ್ನಾಭಾಯ್ ಚಲೆ ಅಮೆರಿಕಾ' ಚಿತ್ರ ತೆರೆಗೆ ಬರಬೇಕಿದೆ. ಆದರೆ ಮುನ್ನಾಭಾಯ್ ಚಿತ್ರಗಳ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಪ್ರಸ್ತುತ 'ತ್ರಿ ಇಡಿಯಟ್ಸ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷದ ಕೊನೆಗೆ ಮುನ್ನಾಭಾಯ್ ಮೂರನೇ ಭಾಗವನ್ನು ಪ್ರಾರಂಭಿಸಲು ಅವರು ನಿರ್ಧರಿಸಿದ್ದಾರೆ.
ಇದೇ ಸಮಯದಲ್ಲಿ ಸಂಜು ಬಳಿಗೆ 'ಜಾನಿ ಜಾನಿ ಎಸ್ ಪಾಪಾ' ಚಿತ್ರ ಬಂದಿದೆ. ನಿರ್ದೇಶಕ ರೋಹಿತ್ ಶೆಟ್ಟಿ ತಯಾರಿಸುತ್ತಿರುವ ಈ ಚಿತ್ರಕಥೆ ಹಾಸ್ಯಭರಿತವಾಗಿ ಸಾಗಲಿದೆಯಂತೆ. ಚೇತನ್ ಭಗತ್ ರ " 5 Point Someone...What Not To Do At IIT" ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು ಎರಡು ಪ್ರಧಾನ ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ.
ಮುನ್ನಾಭಾಯ್ ಸರಣಿಯಲ್ಲಿ ಜನಪ್ರಿಯವಾಗಿದ್ದ ಸಂಜು,ಅರ್ಷದ್ ವಾರ್ಸಿ ಜೋಡಿ ಜಾನಿ ಜಾನಿ... ಚಿತ್ರದಲ್ಲೂ ಮುಂದುವರಿಯಲಿದೆ. ಅಂದಹಾಗೆ ಈ ಚಿತ್ರದಲ್ಲಿ ನಾಯಕಿ ಇರುವುದಿಲ್ಲವಂತೆ.
(ಏಜೆನ್ಸೀಸ್)
More from Filmibeat
sanjay dutt ಸಂಜಯ್ ದತ್ ಅರ್ಷದ್ ವಾರ್ಸಿ ಜಾನಿ ಜಾನಿ ಎಸ್ ಪಾಪಾ ರಾಜ್ ಕುಮಾರ್ ಹಿರಾನಿ ಚೇತನ್ ಭಗತ್ ಸುನಿಲ್ ಶೆಟ್ಟಿ ರೋಹಿತ್ ಶರ್ಮಾ arshad warsi johnny johnny yes papa munnabhai


Click it and Unblock the Notifications











