»   » ಸಂಜು ಪತ್ನಿ ಮಾನ್ಯತಾ ಈಗ ತುಂಬು ಗರ್ಭಿಣಿ

ಸಂಜು ಪತ್ನಿ ಮಾನ್ಯತಾ ಈಗ ತುಂಬು ಗರ್ಭಿಣಿ

Posted By:
Subscribe to Filmibeat Kannada

ಮುನ್ನಾ ಬಾಯ್ ಸಂಜಯ್ ದತ್ ದಿಲ್ ಖುಷ್ ಆಗಿದ್ದಾನೆ. ಕಾರಣ ಸಂಜು ಎರಡನೇ ಪತ್ನಿ ಮಾನ್ಯತಾ ಈಗ ತುಂಬು ಗರ್ಭಿಣಿ. ಐವತ್ತೊಂದನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಂಜು ಕುಟುಂಬಕ್ಕೆ ಶೀಘ್ರದಲ್ಲೆ ಮತ್ತೊಬ್ಬ(ಳು) ಸದಸ್ಯನ ಸೇರ್ಪಡೆಯಾಗಲಿದೆ.

ಕೊಲಂಬೋದಲ್ಲಿ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಸಂಜುಗೆ ಮಾನ್ಯತಾ ದೂರವಾಣಿ ಮೂಲಕ ಈ ವಿಷಯ ತಿಳಿಸಿದರಂತೆ. ಸಂಭ್ರಮದಿಂದ ಕುಣಿದಾಡಿದ ಸಂಜು ಅಲ್ಲೇ ಇದ್ದ ಗೆಳೆಯರನ್ನು ತಬ್ಬಿ ಮುದ್ದಾಡಿದನಂತೆ ಎಂಬುದು ಬಾಲಿವುಡ್ ಚಿತ್ರ ಜಗತ್ತಿನಲ್ಲಿ ದೊಡ್ಡ ಸುದ್ದಿಯಾಗಿದೆ.

ಮದುವೆಯಾದ ಎರಡು ವರ್ಷಗಳ ಬಳಿಕ ಮಾನ್ಯತಾಗೆ ತಾಯಿಯಾಗುವ ಸುಯೋಗ ಒದಗಿಬಂದಿದೆ. ಎರಡು ವರ್ಷಗಳಿಂದ ಫ್ಯಾಮಿಲಿ ಪ್ಲಾನಿಂಗ್ ನಲ್ಲಿದ್ದ ಮಾನ್ಯತಾ ಕಡೆಗೂ ಗರ್ಭವತಿಯಾಗಿದ್ದಾರೆ. ಸಂಜುಗೆ ಈಗಾಗಲೆ ಅರ್ಧ ವಯಸ್ಸು ಮುಗಿದಿದೆ. ಆದರೆ ಮಾನ್ಯತಾ ಮಾತ್ರ ಇನ್ನೂ ಮಾಗಿಲ್ಲ.

ಮದುವೆ ವಯಸ್ಸಿಗೆ ಬಂದ ಹೆಣ್ಣು ಮಗಳು ಸಂಜುಗೆ ಇದ್ದಾಳೆ. ಹಾಗಾಗಿ ತನಗೆ ಇನ್ನೊಂದು ಹೆಣ್ಣು ಮಗು ಬೇಡ ಗಂಡು ಮಗು ಬೇಕು ಎಂದು ಸಂಜು ಆಸೆಪಟ್ಟಿದ್ದಾನೆ.ಆದರೆ ಮಾನ್ಯತಾ ಮಾತ್ರ ಈಗ ಮಾವಿನ ಕಾಯಿ ಕಾಲವಾದ್ದರಿಂದ ಒಂದು ತೋತಾಪುರಿ ಹುಳಿ ಮಾವಿನ ಕಾಯಿ ಬೇಕು ಎಂದು ಆಸೆಪಟ್ಟಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada