For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಛೋಪ್ರಾ ಜೀವ ರಕ್ಷಿಸಿದ ಶಾಹಿದ್ ಕಪೂರ್

  |

  ನಟಿ ಪ್ರಿಯಾಂಕ ಛೋಪ್ರ ಈಗ ಪಶ್ಚಾತ್ತಾಪ ಪಡುತ್ತಿರಬಹುದೇ? ಹೀಗೊಂದು ಪ್ರಶ್ನೆ ಶಾಹಿದ್ ಕಪೂರ್ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಕಾರಣ ತೀರಾ ಇತ್ತೀಚಿಗೆ ಪ್ರಿಯಾಂಕ ಛೋಪ್ರಾರ ಮಾಜಿ ಗೆಳೆಯ ಶಾಹಿದ್ ಕಪೂರ್, ಪ್ರಿಯಾಂಕಾಗೆ ಬಂದ ವಿಪತ್ತಿನಿಂದ ಅವರನ್ನು ರಕ್ಷಿಸಿದ್ದಾನೆ. ಮಾಜಿ ಗೆಳೆಯನಾದರೂ ಹಾಲಿಯಂತೆ ವರ್ತಿಸಿದ್ದಾನೆ.

  ಆಗಿದ್ದಿಷ್ಟು. ಕುನಾಲ್ ಕೊಹಿಲಿ ನಿರ್ದೇಶನದ 'ತೇರಿ ಮೇರಿ ಕಹಾನಿ' ಚಿತ್ರದ ಶೂಟಿಂಗ್ ಔರಂಗಾಬಾದ್ ನ 'ದೌಲತಾಬಾದ್'ನಲ್ಲಿ ನಡೆಯುತ್ತಿತ್ತು. ಸುದ್ದಿಮೂಲಗಳಿಂದ NDTVಗೆ ಬಂದ ವರದಿ ಪ್ರಕಾರ, ಸುಮಾರು 30,000 ಜನ ಶೂಟಿಂಗ್ ಸ್ಥಳದಲ್ಲಿ ಸೇರಿದ್ದರು. ಅವರಲ್ಲಿ ಕೆಲವರು ಪ್ರಿಯಾಂಕಾ ಛೋಪ್ರಾಗೆ ಅತಿ ಸಮೀಪದಲ್ಲಿ ಬಂದು ಸಮಸ್ಯೆ ಉಂಟಾಗುವ ಸನ್ನಿವೇಶ ಸೃಷ್ಟಿಯಾಗಿತ್ತು.

  ತಕ್ಷಣ ಎಚ್ಚುತ್ತುಕೊಂಡ ಶಾಹಿದ್, ಆ ಗುಂಪಿನಿಂದ ಪ್ರಿಯಾಂಕಾರನ್ನು ಬೇರೆಡೆಗೆ ಕರೆದುಕೊಂಡು ಹೋಗಿ ರಕ್ಷಿಸಿದ್ದಾನೆ. ಪ್ರಿಯಾಂಕ ಕೃತಜ್ಞತೆ ಸಲ್ಲಿಸಿದ್ದೂ ಆಗಿದೆ. ಆದರೆ ನಿರ್ದೇಶಕ ಕುನಾಲ್ ಈ ಮಾತನ್ನು ಒಪ್ಪುತ್ತಿಲ್ಲ. ನಮ್ಮ ಚಿತ್ರತಂಡದಲ್ಲಿ ಪರ್ಸನಲ್ ಸೆಕ್ಯುರಿಟಿ ಇದ್ದಾರೆ, ಜೊತೆಗೆ ಸ್ಥಳೀಯ ಪೊಲೀಸರ ನೆರವು ಕೂಡ ದೊರಕಿದೆ. ಇವೆಲ್ಲಾ ಕೇವಲ ಕಟ್ಟುಕಥೆಗಳು" ಎಂದಿದ್ದಾರೆ. (ಏಜೆನ್ಸೀಸ್)

  English summary
  During the shooting of the movie Teri Meri Kahaani, Shahid Kapoor saved ex girlfriend Priyanka Chopra from getting mobbed in Aurangabad. He saved Priyanka life.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X