For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್ ರೂಪದಲ್ಲಿ ಎದ್ದು ಬಂದ ಸಿಲ್ಕ್ ಸ್ಮಿತಾ

  By Mahesh
  |

  ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಸಾಂಪ್ರದಾಯಿಕ ಹೆಣ್ಮಗಳ ಪ್ರತಿರೂಪದಂತಿರುವ ವಿದ್ಯಾ ಬಾಲನ್, ಸ್ಕಿಲ್ ಸ್ಮಿತಾಳಂತೆ ಕ್ಯಾಬೆರಾ ಆಡಲು ಸಜ್ಜಾಗುತ್ತಿದ್ದಾರೆ. ಸುದ್ದಿ ಕೇಳಿದರೆ ಎಲ್ಲರ ಹುಬ್ಬೇರುವುದು ಸಹಜ. ಆದರೆ, ಈ ಅಸಾಧ್ಯವನ್ನು ಸಾಧ್ಯ ಮಾಡಲು ಹೊರಟಿರುವುದು ಕಿರುತೆರೆಯ ಏಕಮೇವ ರಾಣಿ ಏಕ್ತಾ ಕಪೂರ್. ಈ ಬಗ್ಗೆ ವಿದ್ಯಾ ಕೂಡಪ್ರತಿಕ್ರಿಯಿಸಿದ್ದು, ಚಿತ್ರದ ನಿರ್ದೇಶಕ ಮಿಲನ್ ನನ್ನೊಟ್ಟಿಗೆ ಮಾತಾಡಿದ್ದಾರೆ. ಆದರೆ, ಪಾತ್ರದ ಬಗ್ಗೆ ಈಗಲೇ ಏನನ್ನೂ ಹೇಳಲಾಗದು ಎಂದಿದ್ದಾರೆ.

  ಆದರೆ, 'ದ ಡರ್ಟಿ ಫಿಕ್ಚರ್' ಹೆಸರಿನ ಈ ಸಿನಿಮಾದಲ್ಲಿ ಸ್ಕಿಲ್ ಸ್ಮಿತಾ ಅವರ ಬದುಕಿನ ರಂಜನೀಯ ದಿನಗಳಿಗಿಂತ, ಶೋಚನೀಯ ಅಂತ್ಯವೇ ಪ್ರಮುಖವಾಗಿ ಕಥಾವಸ್ತುವಾಗಲಿದೆಯಂತೆ. ಈ ರೀತಿಯ ಒಂದು ಚಿತ್ರಕಥೆಯನ್ನು ಲೇಖಕ ರಜತ್ ಅರೋರಾ ರಚಿಸಿ, ತಿದ್ದಿ ತೀಡಿ, ಪ್ರತಿ ದಿನ ಹೊಸ ರೂಪ ಕೊಡುತ್ತಾ ಕೊಡುತ್ತಾ ಎರಡು ವರ್ಷ ಏಕ್ತಾರನ್ನು ಕಾಯಿಸಿದ್ದಾರೆ. ಅಂತೂ ಕಥೆ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆಯಂತೆ.

  ದಕ್ಷಿಣ ಭಾರತದ ಸೆನ್ಸೇಷನ್ ಸಿಲ್ಕ್ ಕಥನ ಸಿನಿಮಾ ಇತಿಹಾಸದಲ್ಲೇ ಹೊಸ ಪ್ರಯೋಗ ಹಾಗೂ ಮಹಿಳಾ ಸಬಲೀಕರಣಕ್ಕೆ ಪ್ರೇರಕವಾಗಲಿದೆ. ಊರಲೆಲ್ಲಾ ದೊಡ್ಡ ಸ್ಟಾರ್ ಎನಿಸಿಕೊಂಡರೂ ಅಂತರಂಗದಲ್ಲಿ ಒಂಟಿತನದ ಬಾಳು ಬದುಕಿ, ಕೊನೆಗೆ ನೆಮ್ಮದಿ ಕಾಣದೆ ಆತ್ಮಹತ್ಯೆಗೀಡದ ಸ್ಕಿಲ್ ಸ್ಮಿತಾ ಬದುಕು ಏಕ್ತಾರಿಗೆ ಹೊಸ ಹೊಸ ಆಲೋಚನೆಯನ್ನು ನೀಡುತ್ತಿದೆಯಂತೆ.

  ಆ ಕಾಲದಲ್ಲಿ ನೈಲೆಕ್ಸ್ ನಳಿನಿ, ಡಿಸ್ಕೋ ಶಾಂತಿ ಮುಂತಾದ ಬೇಡಿಕೆಯ ನೃತ್ಯಗಾರ್ತಿಯರಿಗಿಂತ ಭಿನ್ನವಾಗಿ ತೆರೆಯ ಮೇಲೆ ಸಿಲ್ಕ್ ಸ್ಮಿತಾ ಕಾಣಿಸುತ್ತಿದ್ದರು. ಚಿತ್ರಕಥೆಯನ್ನು ಓದಿದ್ದೇನೆ. ಆದರೆ, ತಾರಾಗಣದ ಬಗ್ಗೆ ಈಗಲೇ ಏನನ್ನು ಹೇಳಲಾರೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಮಿಲನ್ ಲುಥಾರಿಯಾ. ಸದ್ಯ ಒನ್ಸ್ ಅಪ್ ಎ ಟೈಮ್ ಇನ್ ಬಾಂಬೆ ಚಿತ್ರವನ್ನು ಮಿಲನ್ ನಿರ್ದೇಶಿಸುತ್ತಿದ್ದಾರೆ.

  ಸಿಲ್ಕ್ ಬಗ್ಗೆ ಸ್ಮಾಲ್ ಮಾಹಿತಿ: ದಕ್ಷಿಣ ಭಾರತದ ನಟಿ, ಸೆಕ್ಸಿ ಇಮೇಜ್ ನಿಂದ ಸಿಲ್ಕ್ ಸ್ಮಿತಾ ಜನಪ್ರಿಯ. ಆಂಧ್ರಪ್ರದೇಶದ ಏಲೂರಿನ ಬಡಕುಟುಂಬದ ಮೂಲದಿಂದ ಬಂದ ಸಿಲ್ಕ್ ಸ್ಮಿತಾ ಮೂಲನಾಮ ವಿಜಯಲಕ್ಷ್ಮಿ. ನಾಲ್ಕನೆ ಇಯತ್ತೆ ನಂತರ ಓದಿಗೆ ತಿಲಾಂಜಲಿ ಹೇಳಿ ಸಿನಿಮಾ ರಂಗದತ್ತ ಹೆಜ್ಜೆ. 1979 ರಲ್ಲಿ ತಮಿಳಿನ 'ವಂಡಿ ಚಕ್ರಂ' ಮೂಲಕ ಎಂಟ್ರಿ. ಕನ್ನಡ, ತೆಲುಗು, ಕನ್ನಡ, ಮಲೆಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟನೆ. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ, ಕುಣಿತ. 1996 ರಲ್ಲಿ ದುರ್ಮರಣ. ಆರ್ಥಿಕ ಹೊರೆ, ಭಗ್ನಗೊಂಡ ಪ್ರೇಮ, ಕುಡಿತದ ಚಟ, ಮಾನಸಿಕ ಖಿನ್ನತೆ ಹೀಗೆ ಆತ್ಮಹತ್ಯ್ಗೆ ಹತ್ತು ಹಲವು ಕಾರಣಗಳನ್ನು ಹೆಸರಿಸಬಹುದು. ಆದರೆ, ಅಂತ್ಯ ಮಾತ್ರ ದುರಂತ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X