»   » ಥಿಯೇಟರಿನಲ್ಲಿ ಟಿಕೆಟ್ ಮಾರುತ್ತಿರುವ ವಿದ್ಯಾ ಬಾಲನ್

ಥಿಯೇಟರಿನಲ್ಲಿ ಟಿಕೆಟ್ ಮಾರುತ್ತಿರುವ ವಿದ್ಯಾ ಬಾಲನ್

Posted By:
Subscribe to Filmibeat Kannada

ಶ್ರೇಷ್ಟ ನಟಿ ರಾಷ್ಟ್ರೀಯ ಪ್ರಶಸ್ತಿ ವಿಜೇತೆ, ನಟಿ ವಿದ್ಯಾ ಬಾಲನ್ ಚಿತ್ರ ಕಹಾನಿ ದೇಶದಲ್ಲೆಡೆ ಬಿಡುಗಡೆಯಾಗಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ಮೊನ್ನೆಯಷ್ಟೇ ಶ್ರೇಷ್ಟ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ವಿದ್ಯಾರನ್ನು ನೋಡಲು ಜನರು ಮುಗಿಬೀಳುತ್ತಿದ್ದಾರಂತೆ. ಆದರೆ ಪ್ರಚಾರಕಾರ್ಯದ ಮಹತ್ವ ಅರಿತಿರುವ ನಟಿ ವಿದ್ಯಾ, ಮುಂಬೈನಲ್ಲಿ ಚಿತ್ರಮಂದಿರವೊಂದರಲ್ಲಿ ಸ್ವತಃ ತಾನೇ ಕೌಂಟರ್ ನಲ್ಲಿ ಕುಳಿತು ಟಿಕೆಟ್ ಸೇಲ್ ಮಾಡಿ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.

ನಟಿ ಸಿಲ್ಕ್ ಸ್ಮಿತಾ ನಿಜಜೀವನವನ್ನಾಧರಿಸಿದ 'ದಿ ಡರ್ಟಿ ಪಿಕ್ಚರ್'ನಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಪ್ರಶಂಸೆಯ ಸುರಿಮಳೆಯನ್ನೇ ಪಡೆದಿದ್ದ ವಿದ್ಯಾ, ಶ್ರೇಷ್ಟ ನಟಿ ಎನಿಸಿಕೊಂಡಿದ್ದಾಗಿದೆ. ಇದೀಗ ಬಿಡುಗಡೆಯಾಗಿರುವ ಚಿತ್ರ ಕಹಾನಿ ಕೂಡ ಮಹಿಳಾ ಪ್ರಧಾನ ಚಿತ್ರವಾಗಿದ್ದು, ವಿದ್ಯಾ ನಟನೆ ಉತ್ತಮವಾಗಿದೆ ಎಂಬ ಮಾತು ಎಲ್ಲೆಡೆಯಿಂದ ಕೇಲಿಬರುತ್ತಿದೆ.

ಡರ್ಟಿ ಪಿಕ್ಚರ್ ಪ್ರಚಾರ ಕಾರ್ಯದಲ್ಲೂ ಬಹಳಷ್ಟು ರೀತಿಯಲ್ಲಿ ತೊಡಗಿಸಿಕೊಂಡಿದ್ದ ವಿದ್ಯಾ, ಕಹಾನಿಯಲ್ಲೂ ಅದನ್ನು ಮುಂದುವರಿಸಿ ವೃತ್ತಿಪರತೆ ಮೆರೆಯುತ್ತಿದ್ದಾರೆ. ಆಕೆಯ ವೃತ್ತಿಪರತೆ ಹಾಗೂ ಪ್ರತಿಭೆ ಕಂಡು ಇಡೀ ಬಾಲಿವುಡ್ ಬೆರಗಾಗಿದೆಯಲ್ಲದೇ ಬೆನ್ನುತಟ್ಟುತ್ತಿದೆ. ಇಷ್ಟು ಸಾಕಲ್ಲವೇ ವಿದ್ಯಾ ಇನ್ನೂ ಮೇಲೆ ಮೇಲಕ್ಕೇರಲು. ಬಾಲಿವುಡ್ ರಾಣಿಯಾಗಿ ವಿದ್ಯಾ ಮೆರೆಯುವ ದಿನ ದೂರವಿಲ್ಲ ಎಂಬುದು ಸಿನಿಪಂಡಿತರ ಲೆಕ್ಕಾಚಾರ. ಕಹಾನಿಯೇ ಅದನ್ನು ಮಾಡಬಹುದು ಕೂಡ ಎನ್ನಲಾಗುತ್ತಿದೆ. (ಏಜೆನ್ಸೀಸ್)

English summary
Actress Vidya Balan's movie Kahaani released on March 9, 2012 all over India. Actor Parambrata Chattopadhyay acted opposite Vidya as Hero. Actor Nawazuddin Siddiqui and Indraneel Sengupta also acted in this, in Important Roles.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X