»   » ಕೈಟ್ಸ್ ಹಾರಾಟಕ್ಕೆ ಮುನ್ನ ಒಂದು ಮುನ್ನೋಟ

ಕೈಟ್ಸ್ ಹಾರಾಟಕ್ಕೆ ಮುನ್ನ ಒಂದು ಮುನ್ನೋಟ

Posted By:
Subscribe to Filmibeat Kannada

ಹೃತಿಕ್ ರೋಷನ್ ಅವರ ಬಹುನಿರೀಕ್ಷಿತ ಕೈಟ್ ಚಿತ್ರ ಬಿಡುಗಡೆಯಾಗಲು ಏನಿಲ್ಲ ಅಂದರೂ ಇನ್ನೆರಡು ತಿಂಗಳಾದರೂ ಕಾಯಬೇಕು. ಆದರೆ, ಚಿತ್ರದ ಪ್ರಚಾರ ಕಾರ್ಯದಲ್ಲಿ ಹೃತಿಕ್ ಅವರ ತಂದೆ ರಾಕೇಶ್ ರೋಷನ್ ಬ್ಯುಸಿ ಆಗಿದ್ದಾರೆ. ಮೇ.21ರಂದು ಬಿಡುಗಡೆ ಮಾಡಲು ಸರ್ವ ಸಿದ್ಧತೆ ಆಗಿದೆ. ಇದಕ್ಕೂ ಮುನ್ನ ಈ ಶುಕ್ರವಾರದಂದು ವಿಶ್ವದೆಲ್ಲೆಡೆ ವ್ಯಾಲೆಂಟೈನ್ಸ್ ಡೇ ದಿನದಂದು ಕೈಟ್ಸ್ ಚಿತ್ರದ ಮುನ್ನೋಟವನ್ನು ಪ್ರೇಕ್ಷಕರು ತೆರೆಯ ಮೇಲೆ ಕಾಣಬಹುದು ಎನ್ನುತ್ತಾರೆ ರಾಕೇಶ್

ಹಿಂದಿ ಹಾಗೂ ಇಂಗ್ಲೀಷ್ ಆವೃತ್ತಿಯಲ್ಲಿ ತಯಾರಾಗಿರುವ ಈ ಚಿತ್ರದ ಹಿಂದಿ ಆವೃತ್ತಿ ಟ್ರೈಲರ್ ಸುಮಾರು 1,700 ಚಿತ್ರಪರದೆಗಳು ಹಾಗೂ ಆಂಗ್ಲ ಭಾಷೆಯ ಆವೃತ್ತಿ ಟ್ರೈಲರ್ ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಕಾಣಿಸಲಿದೆ. ಕೈಟ್ಸ್ ಚಿತ್ರಕ್ಕೆ ಭಾರತದಲ್ಲಷ್ಟೇ ಅಲ್ಲ. ವಿಶ್ವದ ನಾನಾ ಕಡೆ ಚಿತ್ರರಸಿಕರು ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗಾಗಿ ಚಿತ್ರದ ಪ್ರಚಾರದಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗಲು ಸಾಧ್ಯವಿಲ್ಲ. ಮೇ. 21ರಂದು ಸುಮಾರು 60 ದೇಶಗಳಲ್ಲಿ ಏಕಕಾಲಕ್ಕೆ ಕೈಟ್ ಚಿತ್ರ ಪ್ರದರ್ಶನಗೊಳ್ಳಲಿದೆ. ಎಂದು ರಿಲೇಯನ್ಸ್ ಬಿಕ್ ಪಿಕ್ಚರ್ ನ ಸಿಇಒ ಸಂಜೀವ್ ಲಂಬಾ ಹೇಳುತ್ತಾರೆ.

ಪ್ರೇಮಕಥೆಯುಳ್ಳ ಕೈಟ್ಸ್ ಚಿತ್ರದಲ್ಲಿ ಹೃತಿಕ್ ರೋಷನ್ ಗೆ ಜೋಡಿಯಾಗಿ ರೂಪದರ್ಶಿ ಬರ್ಬರಾ ಮೋರಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಂಗನಾ ರಾನೌತ್, ಕಬೀರ್ ಬೇಡಿ ಹಾಗೂ ನಿಗ್ ಬ್ರೋನ್ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಹಿಂದಿ ಆವೃತ್ತಿಗೆ ಅನುರಾಗ್ ಬಸು ನಿರ್ದೇಶಕರಾದರೆ, ಇಂಗ್ಲೀಷ್ ಆವೃತ್ತಿಗೆ ಬ್ರೆಟ್ ರಾಟ್ನರ್ ನಿರ್ದೇಶನವಿದೆ.

ಸ್ಪರ್ಧೆ:ಜಸ್ಟ್ ಮಾತ್ ಮಾತಲ್ಲಿ ಸಿಡಿ ಗೆಲ್ಲುವ ಅವಕಾಶ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada