»   » ಬಿಜೆಪಿ ಶಾಸಕನೊಂದಿಗೆ ಕತ್ರಿನಾ ಕೈಫ್ ಮದುವೆ?

ಬಿಜೆಪಿ ಶಾಸಕನೊಂದಿಗೆ ಕತ್ರಿನಾ ಕೈಫ್ ಮದುವೆ?

Subscribe to Filmibeat Kannada

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಗೆ ಕಳೆದ ವರ್ಷವೇ ಮದುವೆಯಾಗಿದೆ. ಇಂದೋರ್ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರೊಂದಿಗೆ ಮದುವೆಯಾಗಿದೆ ಎಂಬುದಕ್ಕೆ ನಗರಸಭೆಯ ಪ್ರಮಾಣ ಪತ್ರ ಸಹ ಇದೆ! ಈ ಸುದ್ದಿಯಿಂದ ಅತ್ತ ಕತ್ರಿನಾ ಕೈಫ್ ಇತ್ತ ಸಲ್ಮಾನ್ ಖಾನ್ ಇಬ್ಬರೂ ಅವಾಕ್ಕಾಗಿದ್ದಾರೆ.

2008ರ ಡಿಸೆಂಬರ್ 2ರಂದು ರಮೇಶ್ ಮೆಂಡೋಲಾ ಅವರೊಂದಿಗೆ ಕತ್ರಿನಾ ಕೈಫ್ ಮದುವೆಯಾಗಿದೆ ಎನ್ನುತ್ತದೆ ಪ್ರಮಾಣ ಪತ್ರ. ಆದರೆ ಇದು ನಕಲಿ ಮದುವೆ ಪ್ರಮಾಣಪತ್ರವಾಗಿದ್ದು ಯಾರೋ ಕಿಡಿಗೇಡಿಗಳು ಕತ್ರಿನಾ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಹಾಗಂತ ಇಂದೋರ್ ನಗರಸಭೆಯ ವಿವಾಹ ನೋಂದಣಿ ಅಧಿಕಾರಿ ಡಾ.ನಟ್ವರ್ ಸರ್ದಾ ಸ್ಪಷ್ಟಪಡಿಸುತ್ತಾರೆ.

ರಮೇಶ್ ಅವರೊಂದಿಗೆ ಕತ್ರಿನಾ ಮದುವೆ ಡಿ.2ರಂದು ಆಗಿದ್ದು ಡಿ.11ರಂದು ಮದುವೆಯನ್ನು ನೋಂದಣಿ ಮಾಡಿಸಲಾಗಿದೆ. ಕತ್ರಿನಾ ಕೈಫ್ ವಿರೋಧಿಗಳು ಈ ಕೃತ್ಯ ಎಸಗಿದ್ದು ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಈ ಪ್ರಮಾಣಪತ್ರವನ್ನು ನಗರಸಭೆ ನೀಡಿಲ್ಲ. ಇನ್ಯಾರದೋ ಮದುವೆ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ನಲ್ಲಿ ಕತ್ರಿನಾ ಮತ್ತು ರಮೇಶ್ ಪತಿ ಪತ್ನಿಯರು ಎಂದು ಸೇರಿಸಲಾಗಿದೆ ಎನ್ನುತ್ತಾರೆ ನಟ್ವರ್ ಸರ್ದಾ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕತ್ರಿನಾ, ನನ್ನ ಜೀವನದಲ್ಲಿ ನಾನು ಇದುವರೆಗೂ ಮದುವೆನೂ ಆಗಿಲ್ಲ. ರಮೇಶ್ ಮೆಂಡೋಲಾ ಅವರನ್ನು ನೋಡಿಯೂ ಇಲ್ಲ. ಖಂಡಿತವಾಗಿಯೂ ಇದೊಂದು ನಕಲಿ ಮದುವೆ ಪ್ರಮಾಣ ಪತ್ರ. ಇದೊಂದು ಕಾನೂನು ಬಾಹಿರ ಕೃತ್ಯವಾಗಿದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ ಕತ್ರಿನಾ.

ಡಿಸೆಂಬರ್ 2ರಂದು ನಾನು 'ನ್ಯೂಯಾರ್ಕ್' ಚಿತ್ರದ ಚಿತ್ರೀಕರಣಕ್ಕಾಗಿ ನ್ಯೂಯಾರ್ಕ್ ನಲ್ಲಿದ್ದೆ. ಅಂದೇ ಈ ನಕಲಿ ಪ್ರಮಾಣಪತ್ರವನ್ನು ಸೃಷ್ಟಿಸಿದ್ದಾರೆ. ಕೆಲವರು ಜನಪ್ರಿಯತೆಗಾಗಿ ಈ ರೀತಿಯ ಮೂರ್ಖತನಕ್ಕೆ ಕೈಹಾಕುತ್ತಾರೆ. ನಟಿಯರ ಜೊತೆ ಪೋಟೋ ತೆಗೆಸಿಕೊಳ್ಳುವ ಕೆಲವು ಅಭಿಮಾನಿಗಳು ನಂತರ ಆ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವುದೂ ಉಂಟು. ಜೀವನದಲ್ಲಿ ಇದೂ ಒಂದು ಪಾಠ ಎನ್ನುತ್ತಾರೆ ಕತ್ರಿನಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada