For Quick Alerts
  ALLOW NOTIFICATIONS  
  For Daily Alerts

  ಲಾರಾ ದತ್ತ ಜೊತೆ ಮಹೇಶ್ ಭೂಪತಿ ಎರಡನೆ ಮದುವೆ

  By Rajendra
  |

  ಖ್ಯಾತ ಟೆನ್ನಿಸ್ ತಾರೆ ಮಹೇಶ್ ಭೂಪತಿ ಎರಡನೆ ಮದುವೆ ಬಾಲಿವುಡ್ ತಾರೆ ಲಾರಾ ದತ್ತ ಜೊತೆ ನಡೆಯಲಿದೆ. ಗೋವಾದ ಚರ್ಚ್‌ವೊಂದರಲ್ಲಿ ಇವರಿಬ್ಬರು ಸರಳವಾಗಿ ಮದುವೆ ಮಾಡಿಕೊಂಡು ಬಳಿಕ ಫೆಬ್ರವರಿಯಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ಮದುವೆ ನಡೆಯಲಿದೆ ಎನ್ನುತ್ತವೆ ಮೂಲಗಳು.

  ತಾರೆ ಲಾರಾ ದತ್ತ ಅವರ ವಕ್ತಾರರ ಪ್ರಕಾರ, ಮದುವೆಗೆ ಮಾತುಕತೆ ನಡೆಯುತ್ತಿದ್ದು ದಿನಾಂಕ ಇನ್ನೂ ಅಂತಿಮವಾಗಿಲ್ಲ ಎಂದಿದ್ದಾರೆ. ಫೆಬ್ರವರಿ ತಿಂಗಳವರೆಗೂ ಕಾದರೆ ಎಲ್ಲ ವಿವರಗಳು ಲಭ್ಯವಾಗುತ್ತವೆ ಎನ್ನುತ್ತಾರೆ ಅವರು.

  ಅಕ್ಟೋಬರ್ 2009ರಲ್ಲಿ ಶ್ವೇತಾ ಜೈಶಂಕರ್ ರನ್ನು ಮದುವೆಯಾಗಿದ್ದ ಟೆನ್ನಿಸ್ ಪಟು ಮಹೇಶ್ ಭೂಪತಿ, ವಿವಾಹ ವಿಚ್ಛೇದನವನ್ನು ಬಯಸಿದ್ದರು. ಆದರೆ, ಪರಸ್ಪರ ಒಪ್ಪಿಗೆ ಸಿಗದೇ ಕೇಸ್ ವಿಳಂಬವಾಗಿತ್ತು. ಆಗಲೇ ಮಹೇಶ್ ಭೂಪತಿ ಹೆಸರು ನಟಿ ಲಾರಾ ದತ್ತಾರ ಜೊತೆ ಕೇಳಿಬಂದಿತ್ತು.

  ಮಹೇಶ್ ಹಾಗೂ ಶ್ವೇತಾ ವಿಚ್ಛೇದನ ಕೋರಿ ಕಳೆದ ವರ್ಷವೇ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬಾಂದ್ರಾ ಕುಟುಂಬ ನ್ಯಾಯಲಯ ಪರಸ್ಪರ ಒಪ್ಪಿಗೆ ಇರುವುದು ಕಂಡ ಬಂದ ನಂತರ ಜುಲೈ 15, 2010ರಲ್ಲಿ ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿತ್ತು. ವಿಚ್ಛೇದನ ಪಡೆದ ಸಂದರ್ಭದಲ್ಲಿ ಭೂಪತಿ ಮೇಲೆ ಶ್ವೇತಾ ಆಕ್ರೋಶ ವ್ಯಕ್ತಪಡಿಸಿದ್ದರು.

  "ನನ್ನನ್ನು ವಂಚಿಸಿದಂತೆ ಒಂದು ದಿನ ಲಾರಾಳನ್ನು ಮಹೇಶ್ ವಂಚಿಸುತ್ತಾನೆ. ಆಗಷ್ಟೆ ಅವನ ಬಣ್ಣ ಬಯಲಾಗುತ್ತದೆ. ಮಹೇಶ್ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಆತನ ಜೀವನದಲ್ಲಿ ನಾನು ಮತ್ತೊಂದು ಟ್ರೋಫಿಯಾಗಿ ಉಳಿದೆ ಅಷ್ಟೆ" ಎಂದು ಶ್ವೇತಾ ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X