ಸ್ಲಂಡಾಗ್ ಬಾಲನಟನಿಗೆ ಸಲ್ಲು ಬೈಕ್ ಉಡುಗೊರೆ

ಅಜರ್ ಪೋಷಕರು ಆರ್ಥಿಕವಾಗಿ ದುರ್ಬಲರು. ಅಜರ್ ಗೆ ಒಂದು ಸೈಕಲ್ ತೆಗೆದುಕೊಡಲು ಅವರ ಕೈಲಿ ಸಾಧ್ಯವಾಗಿರಲಿಲ್ಲ. ಆದರೆ ಸಲ್ಲು 15 ಸಾವಿರ ಬೆಲೆ ಬಾಳುವ ಬ್ಯಾಟರಿ ಚಾಲಿತ ಬೈಕ್ ಒಂದನ್ನು ಉಡುಗೊರೆಯಾಗಿ ಅಜರ್ ಗೆ ಕೊಟ್ಟಿದ್ದಾರೆ. ಮುಂಬೈ ಬಾಂದ್ರಾದಲ್ಲಿನ ಗರೀಬ್ ನಗರದ ಅಜರ್ ಮನೆಯಲ್ಲೀಗ ಸಂಭ್ರಮದ ವಾತಾವರಣ.
'10 Ka Dum' ಎಂಬ ಮಕ್ಕಳ ವಿಶೇಷ ಕಾರ್ಯಕ್ರಮವನ್ನು ದರ್ಶೀಲ್ ಸಫಾರಿ ಮತ್ತು ತನಯ್ ಚಡ್ಡಾ(ತಾರೆ ಜಮೀನ್ ಪರ್ ನಟರು) ಅಜರ್ ರೊಂದಿಗೆ ಸಲ್ಲು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಸಲ್ಲು ತನ್ನ ಸಹಾಯಕರಿಂದ ಅಜರ್ ನ ಬಹುದಿನಗಳ ಕನಸನ್ನು ತಿಳಿದುಕೊಂಡಿದ್ದಾರೆ. ಅಷ್ಟೇ ಸೆಟ್ಸ್ ನಿಂದ ಹೊರಗೆ ನಡೆದ ಸಲ್ಲು ಬೈಕ್ ನೊಂದಿಗೆ ಹಿಂತಿರುಗಿದ್ದಾರೆ.
ಬೈಕನ್ನು ತೆಗೆದುಕೊಟ್ಟು ಅಷ್ಟಕ್ಕೇ ಸುಮ್ಮನಾಗದ ಅವರು ಅಜರ್ ಜೊತೆ ಬೈಕಿನಲ್ಲಿ ಒಂದು ಸುತ್ತು ಹಾಕಿದ್ದಾರೆ. ಚಿತ್ರೀಕರಣದಲ್ಲೇ ಇಷ್ಟೆಲ್ಲಾ ನಡೆದಿದೆ. ಚಿತ್ರೀಕರಣ ಮುಗಿದ ಬಳಿಕವೂ ಅಜರ್ ನೊಂದಿಗೆ ಸಲ್ಲು ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಇಷ್ಟು ದಿನ ಗಾಸಿಪ್ ಕಾಲಂಗಳಲ್ಲಿ ಮಿಂಚುತ್ತಿದ್ದ ಸಲ್ಲು ಈಗ ಮುಖಪುಟವನ್ನು ಅಲಂಕರಿಸಿರುವುದು ವಿಶೇಷ.
(ಏಜೆನ್ಸೀಸ್)


Click it and Unblock the Notifications











