For Quick Alerts
  ALLOW NOTIFICATIONS  
  For Daily Alerts

  ಕರೀನಾ, ಕತ್ರಿನಾ ಮಧ್ಯೆ ಯುದ್ಧ; ನಾನಾ ನೀನಾ?

  |

  ಕರೀನಾ ಕಪೂರ್ ಈಗ ಕತ್ರಿನಾರನ್ನು ಬೆನ್ನಟ್ಟಿದ್ದಾರೆ. ಆಶ್ಚರ್ಯವೇನೂ ಬೇಡ, ಇದು ಜಾಹೀರಾತು ಸಂಭಾವನೆ ವಿಷಯದಲ್ಲಿ ಅಷ್ಟೇ. ಮ್ಯಾಂಗೋ ಬ್ರಾಂಡ್ ಗೆ ಕತ್ರಿನಾ ರೂಪದರ್ಶಿಯಾಗಿ ಸಹಿ ಮಾಡಿದ್ದರೆ ಇದೀಗ ಕರೀನಾ ನಿಂಬು ಬ್ರಾಂಡ್ ಒಪ್ಪಿಕೊಂಡು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಈ ಇಬ್ಬರೂ ತಾನೇ ಮುಂದು ಎಂಬ ಸ್ಪರ್ಧೆಯಲ್ಲಿ ಬಿದ್ದಿದ್ದಾರೆ. ಕರೀನಾ ಮುಂದೆ ಹೋಗಲು ತವಕಿಸುತ್ತಿದ್ದಾರೆ.

  ಕತ್ರಿನಾ ಯುವಜನತೆಯ ಫೇವರೆಟ್ ಆಗುತ್ತಿದ್ದಂತೆ ಕರೀನಾ ಸುಮ್ಮನೆ ಕುಳಿತಿರಲು ಸಾಧ್ಯವೇ. ಆಕೆ ಈಗಾಗಲೇ 15 ಬ್ರಾಂಡ್ ಗಳಿಗೆ ಸಹಿ ಮಾಡಿದ್ದು ಕತ್ರೀನಾಗೆ ತೀವ್ರ ಸ್ಪರ್ಧೆ ನೀಡಲಿದ್ದಾರೆ. ಆ ಕಡೆ ಕತ್ರೀನಾರೂ ಅಷ್ಟೇ, ಮೊದಲಿನಿಂದ ಉಳಿಸಿಕೊಂಡು ಬಂದ ಜಾಹೀರಾತು ನಂಬರ್ ಒನ್ ಪಟ್ಟವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲಾಗುತ್ತದೆಯೇ? ಆದರೂ ಕರೀನಾ ಬಿಡುತ್ತಿಲ್ಲ.

  ಇದೀಗ ಕರೀನಾ ಸಹಿ ಮಾಡಿರುವ ನಿಂಬು ಬ್ರಾಂಡ್ ಬರೋಬ್ಬರಿ ರು. 5 ಕೋಟಿಯದ್ದು. ಇದು ಕತ್ರಿನಾ ತೆಗೆದುಕೊಳ್ಳುವ ಸಂಭಾವನೆಗಿಂತ ಕಡಿಮೆಯೇನೂ ಅಲ್ಲ. ಇನ್ನು ಮುಂದೆ ಕತ್ರಿನಾ ಅದೆಷ್ಟೆ ಹೆಚ್ಚು ಸಂಭಾವನೆ ಕೇಳುತ್ತಾರೋ ಏನೋ? ಒಟ್ಟಿನಲ್ಲಿ ಕರೀನಾ ಹಾಗೂ ಕತ್ರಿನಾ ಮಧ್ಯೆ ಜಾಹೀರಾತು ಪಟ್ಟಕ್ಕಾಗಿ 'ನಾನಾ-ನೀನಾ ಯುದ್ಧ ಪ್ರಾರಂಭವಾಗಿದೆ. ಕರೀನಾ ಗೆಲ್ಲಲಿದ್ದಾರಾ? ಕಾದು ನೋಡಬೇಕು...(ಒನ್ ಇಂಡಿಯಾ ಕನ್ನಡ)

  English summary
  Kareena Kapoor has signed Rs. 5 Crore endorsement deal with a lemonade brand, thus giving arch rival Katrina Kaif a chase for money.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X